'ಡಿಜಿಟಲ್ ಇಂಡಿಯಾ ಸಪ್ತಾಹ'ಕ್ಕೆ ಮೋದಿ ಚಾಲನೆ: ರು.4.50 ಲಕ್ಷ ಕೋಟಿ ಹೂಡಿಕೆ

ದೇಶಾದ್ಯಂತ ಒಂದು ವಾರ ನಡೆಯಲಿರುವ "ಡಿಜಿಟಲ್ ಇಂಡಿಯಾ ವೀಕ್' ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಬುಧವಾರ ಚಾಲನೆ...
"ಡಿಜಿಟಲ್ ಇಂಡಿಯಾ ವೀಕ್' ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ
"ಡಿಜಿಟಲ್ ಇಂಡಿಯಾ ವೀಕ್' ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ
Updated on

ನವದೆಹಲಿ: ದೇಶಾದ್ಯಂತ ಒಂದು ವಾರ ನಡೆಯಲಿರುವ "ಡಿಜಿಟಲ್ ಇಂಡಿಯಾ ವೀಕ್' ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಬುಧವಾರ ಚಾಲನೆ ನೀಡಿದ್ದಾರೆ. ಈ ಮೂಲಕ ಒಂದು ವಾರಗಳ ಕಾಲ ಡಿಜಿಟಲ್ ಇಂಡಿಯಾ ಯೋಜನೆಯ ಸೌಲಭ್ಯಗಳನ್ನು ನಾಗರಿಕರು ಪಡೆಯಬಹುದಾಗಿದೆ.

ಇಂದಿರಾಗಾಂಧಿ ಇಂಡೋರ್ ಸ್ಟೇಡಿಯಂನಲ್ಲಿ ಯೋಜನೆಗೆ ಚಾಲನೆ ನೀಡಿ ಮಾತನಾಡಿದ ಪ್ರಧಾನಿ ಮೋದಿ, ಸಮಯಕ್ಕೆ ತಕ್ಕ ಹಾಗೆ ನಾವು ಬದಲಾಗುವ ಅವಶ್ಯಕತೆ ಇದೆ. ಇಲ್ಲದಿದ್ದರೆ ನಾವು ತುಂಬಾ ಹಿಂದೆ ಉಳಿದು ಬಿಡುತ್ತೇವೆ. ದೇಶದ ಭವಿಷ್ಯ ಬದಲಾವಣೆಯಾಗುವ ಕಾಲ ಆರಂಭವಾಗಿದ್ದು, ದೇಶದ ಜನತೆಯ ಕನಸನ್ನು ನಾವು ನನಸು ಮಾಡುತ್ತೇವೆ ಎಂದು ಹೇಳಿದರು.

ಡಿಜಿಟಲ್ ಇಂಡಿಯಾ ಯೋಜನೆಯಲ್ಲಿ ರು.4.50 ಲಕ್ಷ ಕೋಟಿ ಬಂಡಾವಾಳ ಹೂಡಿಕೆ ಮಾಡಲಾಗಿದೆ. ಯೋಜನೆಯಿಂದ 18 ಲಕ್ಷ ಜನರಿಗೆ ಉದ್ಯೋಗವಕಾಶ ಸಿಗಲಿದೆ. ಜನತೆಗೆ ಅತ್ಯಾಧುನಿಕ ತಂತ್ರಜ್ಞಾನವನ್ನು ಕಲ್ಪಿಸುವ ಅಗತ್ಯವಿದೆ ಎಂದ ಅವರು, ದೇಶದ ಮಕ್ಕಳಿಗೆ ಡಿಜಿಟಲ್ ಶಕ್ತಿಯ ಅರಿವಿದೆ. ನಗರ-ಗ್ರಾಮಗಳನ್ನು ಜೋಡಣೆ ಮಾಡುವಂತಹ ಯೋಜನೆ ಇದಾಗಿದ್ದು ಹೊಸ ತಂತ್ರಜ್ಞಾನ ಸೌಲಭ್ಯ ಪಡೆಯುವುದು ಅವಶ್ಯಕವಾಗಿದೆ ಎಂದಿದ್ದಾರೆ.

ಐಟಿ ಕ್ರಾಂತಿಯ ಅವಕಾಶವನ್ನು ನಾವು ಕಳೆದುಕೊಳ್ಳಬಾರುದು. ಸೈಬರ್ ಯುದ್ಧವನ್ನು ತಡೆಯುವ ಶಕ್ತಿ ಭಾರತಕ್ಕೆ ಇದೆ. ಅಲ್ಲದೇ, ಶೀಘ್ರದಲ್ಲೇ ಬ್ಯಾಂಕ್ ಗಳಲ್ಲಿ ಪೇಪರ್ ರಹಿತ ವ್ಯವಹಾರ ನಡೆಯಲಿದೆ. ಮೊಬೈಲ್ ಬ್ಯಾಂಕಿಂಗ್ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

ಈ ಕಾರ್ಯಕ್ರಮದಡಿ ದೇಶದ ಹಲವು ನಗರಗಳಲ್ಲಿ ವೈ ಫೈ ವ್ಯವಸ್ಥೆ, ಡಿಜಿಟಲ್ ಇಂಡಿಯಾಗೆ ಸಂಬಂಧಿಸಿದ ಪುಸ್ತಕ ಬಿಡುಗಡೆ, ದೇಶದ ಪ್ರತಿ ಗ್ರಾಮಕ್ಕೂ ಇಂಟರ್ ನೆಟ್ ಸೌಲಭ್ಯಕ್ಕೆ ಒತ್ತು, ದೇಶದ ಎಲ್ಲಾ ಆಶ್ಪತ್ರೆಗಳಲ್ಲಿ ಆನ್ ಲೈನ್ ರಿಜಿಸ್ಟ್ರೇಷನ್, ಇಂಟರ್ ನೆಟ್ ನಿಂದ ಗ್ರಾಮಗಳ ಜೋಡಣೆ ಯೋಜನೆ, ಒಂದೇ ಕಡೆ ವಿವಿಧ ಸ್ಕಾಲರ್ ಷಿಪ್ ಗಳ ಬಗ್ಗೆ ಮಾಹಿತಿ ಲಭ್ಯವಾಗಲಿದೆ.

ನಂತರ ಮಾತನಾಡಿದ ಉದ್ಯಮಿ ಮುಖೇಶ್ ಅಂಬಾನಿ, ಡಿಜಿಟಲ್ ಇಂಡಿಯಾದಿಂದ ಜನತೆಯ ಜೀವನಶೈಲಿ ಬದಲಾಗಲಿದೆ. ಮೇಕ್ ಇನ್ ಇಂಡಿಯಾಗೆ ಪ್ರಧಾನಿ ಮೋದಿ ಕರೆ ನೀಡಿದ್ದರು. ಈಗ ಡಿಜಿಟಲ್ ಇಂಡಿಯಾಗೆ ಚಾಲನೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಹಲವು ಕ್ಷೇತ್ರಗಳಲ್ಲಿ ಬಂಡವಾಳ ಹೂಡಿಕೆಗೆ ಉತ್ಸುಕರಾಗಿದ್ದೇವೆ, ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳಲ್ಲಿ ಬಂಡವಾಳ ಹೂಡಿಕೆ ರಿಲಯನ್ಸ್ ನಿಂದ 2.5 ಸಾವಿರ ಕೋಟಿ ಹೂಡಿಕೆ ಮಾಡುತ್ತೇವೆ ಎಂದು ಅವರು ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com