ನೊಬೆಲ್ ಶಾಂತಿ ಪ್ರಶಸ್ತಿ ಸಮಿತಿ ಅಧ್ಯಕ್ಷರಿಗೆ ಹಿಂಬಡ್ತಿ

ನೊಬೆಲ್ ಪ್ರಶಸ್ತಿ ಇತಿಹಾಸದಲ್ಲೇ ಪ್ರಥಮ ಎನ್ನಬಹುದಾದ ಈ ನಡೆಯಲ್ಲಿ ನಾರ್ವೆಯ ಅತಿ ಹೆಚ್ಚು ಪ್ರಭಾವಳಿಯ ನೊಬೆಲ್ ಶಾಂತಿ ಪ್ರಶಸ್ತಿ ಸಮಿತಿ
ನೊಬೆಲ್ ಪ್ರಶಸ್ತಿ
ನೊಬೆಲ್ ಪ್ರಶಸ್ತಿ

ಆಸ್ಲೋ: ನೊಬೆಲ್ ಪ್ರಶಸ್ತಿ ಇತಿಹಾಸದಲ್ಲೇ ಪ್ರಥಮ ಎನ್ನಬಹುದಾದ ಈ ನಡೆಯಲ್ಲಿ ನಾರ್ವೆಯ ಅತಿ ಹೆಚ್ಚು ಪ್ರಭಾವಳಿಯ ನೊಬೆಲ್ ಶಾಂತಿ ಪ್ರಶಸ್ತಿ ಸಮಿತಿ ಇಂದು ವಿವಾದಾತ್ಮ ಅಧ್ಯಕ್ಷ ತೊರ್ಬಾರ್ನ್ ಗ್ಲಾಂಡ್ ಅವರಿಗೆ ಹಿಂಬಡ್ತಿ ನೀಡಿದೆ. ಅವರು ಸಮಿತಿಯ ಸದಸ್ಯರಾಗಿ ಉಳಿಯುವರು ಎಂದಿರುವ ಸಮಿತಿ ಹಿಂಬಡ್ತಿಗೆ ಯಾವುದೇ ಕಾರಣಗಳನ್ನು ನೀಡಿಲ್ಲ.

೨೦೦೯ ರಲ್ಲಿ ಅಮೇರಿಕಾದ ರಾಷ್ಟ್ರಾಧ್ಯಕ್ಷ ಬರಾಕ್ ಒಬಾಮಾ ಅವರಿಗೆ ನೊಬೆಲ್ ಪ್ರಶಸ್ತಿ ನೀಡುವ ಮೂಲಕ ತೀವ್ರ ಟೀಕೆಗೆ ಒಳಗಾಗಿದ್ದರು ತೊರ್ಬಾರ್ನ್ ಗ್ಲಾಂಡ್. ಇದು ಹಿಂದಿನ ಪ್ರಶಸ್ತಿ ವಿಜೇತರನ್ನು ಮತ್ತು ವಿಶ್ವವನ್ನು ಆಶ್ಚರ್ಯಕ್ಕೀಡು ಮಾಡಿತ್ತು. ಒಬಾಮಾ ಅವರು ಅಮೇರಿಕಾದ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿ ಇನ್ನು ೯ ತಿಂಗಳಾಗಿತ್ತು ಹಾಗೂ ಇರಾಕ್ ಮತ್ತು ಅಫ್ಗಾನಿಸ್ಥಾನದ ಮೇಲೆ ಅಮೇರಿಕಾದ ಯುದ್ಧ ಜಾರಿಯಲ್ಲಿತ್ತು.

ಒಂದು ವರ್ಷದ ನಂತರ ಚೈನಾದ ಕ್ರಾಂತಿಕಾರಿ ಜೈಲುವಾಸಿ ಲಿಯೂ ಕ್ಸಿಯಾಬೋ ಅವರಿಗೆ ಪ್ರಶಸ್ತಿ ನೀಡುವ ಮೂಲಕ ಬೀಜಿಂಗ್ ನ ಕೆಂಗಣ್ಣಿಗೆ ಗುರಿಯಾಗಿದ್ದರು, ಇದರಿಂದ ಚೈನಾ ಮತ್ತು ನಾರ್ವೆಯ ಸಂಬಂಧದಲ್ಲಿ ಬಿರುಕುಬಿಟ್ಟಿತ್ತು. ಹಾಗೂ ೨೧೦೨ ರಲ್ಲಿ ಯುರೋಪಿಯನ್ ಯೂನಿಯನ್ನಿಗೆ ಪ್ರಶಸ್ತಿ ನೀಡುವ ಮೂಲಕ ವಿಮರ್ಶಕರ ಮತ್ತು ನೊಬೆಲ್ ಪ್ರಶಸ್ತಿ ವಿಜೇತರಿಂದ ಅಪಹಾಸ್ಯಕ್ಕೀಡಾಗಿದ್ದರು.

ಆರು ವರ್ಷಗಳ ಅಧ್ಯಕ್ಷ ಗಾದಿಯ ನಂತರ ತೊರ್ಬಾರ್ನ್ ಗ್ಲಾಂಡ್ ಅವರನ್ನು ಉಪಾಧ್ಯಕ್ಷ ಕಾಚಿ ಕುಲ್ಲ್ಮನ್ ಪೈವ್ ಬದಲಾಯಿಸಲಿದ್ದಾರೆ ಎಂದು ಸಮಿತಿ ತಿಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com