
ನವದೆಹಲಿ: ಬಹುನಿರೀಕ್ಷಿತ ಮೊಬೈಲ್ ತರಂಗಾಂತರ ಹರಾಜು ಪ್ರಕ್ರಿಯೆ ಇಂದು ಪ್ರಾರಂಭವಾಗಿದೆ. ನಾಲ್ಕು ಬ್ಯಾಂಡುಗಳ ಈ ಹರಾಜು ಪ್ರಕ್ರಿಯೆಯಲ್ಲಿ ೮ ಸಂಸ್ಥೆಗಳು ಭಾಗಿಯಾಗಿವೆ.
೨ಜಿ ಮತ್ತು ೩ಜಿ ತರಂಗಾಂತರಗಳ ಅತಿ ದೊಡ್ಡ ಹರಾಜು ಪ್ರಕ್ರಿಯೆ ಇದು ಎನ್ನಲಾಗಿದೆ. ಇದು ಸರ್ಕಾರದ ಬೊಕ್ಕಸೆಗೆ ೮೨ ಸಾವಿರ ಕೋಟಿ ಆದಾಯ ಗಳಿಸಿಕೊಡಲಿದೆ ಎಂದು ಅಂದಾಜಿಸಲಾಗಿದೆ.
೯೦೦ ಮೆಗಾ ಹರ್ಟ್ಜ್ ಬ್ಯಾಂಡ್, ೧೮೦೦ ಮೆಗಾ ಹರ್ಟ್ಜ್, ಮತ್ತು ೮೦೦ ಮೆಗಾ ಹರ್ಟ್ಜ್ ನ ಮೂರು ಬ್ಯಾಂಡುಗಳಲ್ಲಿ ಒಟ್ಟು ೩೮೦.೭೫ ಮೆಗಾ ಹರ್ಟ್ಜ್ ತರಂಗಾಂತರವನ್ನು ಅಲ್ಲದೆ ೨೧೦೦ ಮೆಗಾ ಹರ್ಟ್ಜ್ ಬ್ಯಾಂಡ್ ನಲ್ಲಿ ೫ ಮೆಗಾ ಹರ್ಟ್ಜ್ ತರಂಗಾಂತರವನ್ನು ಮಾರಾಟಕ್ಕೆ ಇಡಲಾಗಿದೆ. ಇದು ದೇಶದ ೨೨ ಟೆಲಿಕಾಂ ಪ್ರದೇಶಗಳ ಪೈಕಿ ೧೭ ಪ್ರದೇಶಗಳ ವ್ಯಾಪ್ತಿಯನ್ನು ಹೊಂದಿದೆ.
ಸದ್ಯಕ್ಕೆ ಹರಾಜಾಗುತ್ತಿರುವ ಈ ತರಂಗಾಂತರಗಳ ಹೆಚ್ಚಿನದನ್ನು ಏರ್ ಟೆಲ್, ವೊಡಾಫೋನ್, ಐಡಿಯಾ ಸೆಲ್ಲ್ಯುಲಾರ್ ಮತ್ತು ರಿಲಾಯೆನ್ಸ್ ಟೆಲಿಕಾಮ್ ಹೊಂದಿದ್ದು, ಇದರ ಪರವಾನಗಿ ೨೦೧೫-೧೬ ಕ್ಕೆ ಕೊನೆಗೊಳ್ಳಲಿದೆ. ತಮ್ಮ ಸೇವೆಯನ್ನು ಮುಂದುವರೆಸಲು ಈ ಸಂಸ್ಥೆಗಳು ಕೂಡ ಹರಾಜು ಪ್ರಕ್ರಿಯೆಯಲ್ಲಿ ಭಾಗಿಯಾಗಬೇಕಿದೆ.
Advertisement