ಮದರ್ ತೆರೇಸಾ ಹೀಗಳೆಯುವವರು ಮೂರ್ಖರು ಅಥವಾ ಅಸೂಯಾಪರರು: ಜೆಫ್ರಿ ಆರ್ಚರ್

ಆರ್ ಎಸ್ ಎಸ್ ಮುಖಂಡ ಮೋಹನ್ ಭಾಗವತ್ ಅವರ ಮದರ್ ತೆರೇಸಾ ಬಗೆಗಿನ ಹೇಳಿಕೆಗಳನ್ನು ಖಂಡಿಸಿರುವ ಬ್ರಿಟಿಶ್ ಲೇಖಕ ಜೆಫ್ರಿ ಆರ್ಚರ್,
ಬ್ರಿಟಿಶ್ ಲೇಖಕ ಜೆಫ್ರಿ ಆರ್ಚರ್
ಬ್ರಿಟಿಶ್ ಲೇಖಕ ಜೆಫ್ರಿ ಆರ್ಚರ್
Updated on

ಕೋಲ್ಕತ್ತ: ಆರ್ ಎಸ್ ಎಸ್ ಮುಖಂಡ ಮೋಹನ್ ಭಾಗವತ್ ಅವರ ಮದರ್ ತೆರೇಸಾ ಬಗೆಗಿನ ಹೇಳಿಕೆಗಳನ್ನು ಖಂಡಿಸಿರುವ ಬ್ರಿಟಿಶ್ ಲೇಖಕ ಜೆಫ್ರಿ ಆರ್ಚರ್, ಈ ನೊಬೆಲ್ ಪ್ರಶಸ್ತಿ ಪುರಸ್ಕೃತರನ್ನು ಟೀಕಿಸುವವರು ಅಸೂಯೆಯಿಉಂದ ಮಾಡುತ್ತಾರೆ ಅಥವಾ  ಮೂರ್ಖರು ಎಂದು ಶನಿವಾರ ಹೇಳಿದ್ದಾರೆ.

"ಅಂಥ ಅತ್ಯುತ್ತಮ ಮಹಿಳೆಯನ್ನು ಹೀಗಳೆಯುವವರು ಮೂರ್ಖರಾಗಿರುತ್ತಾರೆ ಅಥವಾ  ಅಸೂಯೆಯಿಂದ ಹೀಗೆ ಹೇಳುತ್ತಾರೆ. ನಾನದ್ದನ್ನು ಖಂಡಿಸುತ್ತೇನೆ" ಎಂದು ಮದರ್ ತೆರೇಸಾ ಬಗ್ಗೆ ವರದಿಯಾದ ವಿವಾದಾತ್ಮಕ ಪ್ರತಿಕ್ರಿಯೆ ಬಗ್ಗೆ ಪ್ರಶ್ನಿಸಿದಾಗ ಹೇಳಿದ್ದಾರೆ.

"ಮೈಟಿಯರ್ ದ್ಯಾನ್ ದ ಸ್ವೋರ್ಡ್" (ಖಡ್ಗಕ್ಕಿಂತ ಮೊನಚು) ಎಂಬ ತಮ್ಮ ಕಾದಂಬರಿಯ ಪ್ರಚಾರಕ್ಕಾಗಿ ಜೆಫ್ರಿ ಆರ್ಚರ್ ಭಾರತ ಪ್ರವಾಸ ಮಾಡುತ್ತಿದ್ದಾರೆ.

"ನಾನು ಇಂಗ್ಲೆಂಡಿನಲ್ಲಿ ಓದಿದೆ (ಪ್ರತಿಕ್ರಿಯೆಯ ಬಗ್ಗೆ ವರದಿ). ಇಂಗ್ಲೆಂಡಿನಾದ್ಯಂತ ಅದು ವರದಿಯಾಗಿತ್ತು. ವಿನ್ಸ್ಟನ್ ಚರ್ಚಿಲ್ (ಯುದ್ಧ ಸಮಯದ ಬ್ರಿಟನ್ ನ ಮೊದಲ ಪ್ರಧಾನ ಮಂತ್ರಿ) ಅವರನ್ನು ಇಷ್ಟ ಪಡದ ಹಲವಾರು ಜನರಿದ್ದಾರೆ, ಮಾರ್ಗರೆಟ್ ತ್ಯಾಚರ್ (ಮಾಜಿ ಪ್ರಧಾನಮಂತ್ರಿ) ಇಷ್ಟ ಪಡದ ಹಲವು ಜನರಿದ್ದಾರೆ. ಅತಿ ಎತ್ತರಕ್ಕೆ ಏರಬೇಕಾದರೆ ಇದು ಯೋಜನೆಯ ಭಾಗ" ಎಂದು ಅವರು ತಿಳಿಸಿದ್ದಾರೆ.

ಜನಪ್ರಿಯ ಕಾದಂಬರಿಗಳಾದ "ನಾಟ್ ಎ ಪೆನ್ನಿ ಮೋರ್, ನಾಟ್ ಎ ಪನ್ನಿ ಲೆಸ್' ಮತ್ತು 'ಕೇನ್ ಅಂಡ್ ಏಬಲ್' ಪುಸ್ತಕಗಳ ಬರಹಗಾರ ಜೆಫ್ರಿ ಆರ್ಚರ್, ೨೦ ವರ್ಷಗಳ ಹಿಂದೆ ಲಂಡನ್ ನಲ್ಲಿ ಏಡ್ಸ್ ರೋಗಿಗಳಿಗೆ ವಸತಿ ಶಿಬಿರ ಸ್ಥಾಪಿಸಲು ಮದರ್ ತೆರೇಸಾ ಅವರು ನನಗೆ ಮನವಿ ಮಾಡಿದ್ದಾಗ ಅತೀವ ಸಂತಸವಾಗಿತ್ತು ಎಂದಿದ್ದಾರೆ.

ಮದರ್ ತೆರೇಸಾ ಜೊತೆಗೆ ತಮ್ಮ ಪುತ್ರ ಕೆಲಸ ಮಾಡಿದ್ದನ್ನು ಕೂಡ ನೆನಪಿಸಿಕೊಂಡಿದ್ದಾರೆ.

"ನನ್ನ ಮಗ ವಿಶ್ವವಿದ್ಯಾಲಯದಲ್ಲಿದ್ದಾಗ ಕೆಲಸಕ್ಕೂ ಸೇರುವ ಮುಂಚೆ ಒಂದಷ್ಟು ಸೇವೆ ಮಾಡಲು ನಿರ್ಧರಿಸಿ ಇಲ್ಲಿಗೆ (ಕೋಲ್ಕತ್ತಾ) ಬಂದಿದ್ದ ಹಾಗೂ ಮದರ್ ತೆರೇಸಾ ಜೊತೆ ಒಂದು ಕೆಲಸ ವರ್ಷ ಮಾಡಿದ್ದ" ಎಂದಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com