ಅಂತಿಮ ನ್ಯಾಯ ಎಲ್ಲಿದೆ ಅಭಯ?

ಒಂದೆಡೆ ನಿರ್ಭಯಾ ಪ್ರಕರಣಕ್ಕೆ ಸಂಬಂಧಿಸಿದ ಸಾಕ್ಷ್ಯಚಿತ್ರ ದೇಶ ವಿದೇಶದಲ್ಲಿ ಸದ್ದು ಮಾಡುತ್ತಿದೆ. ಮತ್ತೊಂದೆಡೆ ಕಳೆದ ಒಂದು ವರ್ಷದಿಂದ ಸುಪ್ರೀಂ...
ಸುಪ್ರೀಂ ಕೋರ್ಟ್
ಸುಪ್ರೀಂ ಕೋರ್ಟ್
Updated on

ನವದೆಹಲಿ: ಒಂದೆಡೆ ನಿರ್ಭಯಾ ಪ್ರಕರಣಕ್ಕೆ ಸಂಬಂಧಿಸಿದ ಸಾಕ್ಷ್ಯಚಿತ್ರ ದೇಶ ವಿದೇಶದಲ್ಲಿ ಸದ್ದು ಮಾಡುತ್ತಿದೆ. ಮತ್ತೊಂದೆಡೆ ಕಳೆದ ಒಂದು ವರ್ಷದಿಂದ ಸುಪ್ರೀಂ ಕೋರ್ಟ್‍ನಲ್ಲಿ ನಿರ್ಭಯಾ "ಹತ್ಯಾ'ಚಾರದ ಕೇಸು ಒಂದಿಂಚೂ ಅಲುಗದೆ ಕುಳಿತಿದೆ.

ದೆಹಲಿ ಗ್ಯಾಂಗ್‍ರೇಪ್ ಪ್ರಕರಣ ಕುರಿತು ಸಾಕೇತ್‍ನ ವಿಚಾರಣಾ ನ್ಯಾಯಾಲಯ 8 ತಿಂಗಳಲ್ಲಿ ಶಿಕ್ಷೆ ಪ್ರಕಟಿಸಿತ್ತು. ದೆಹಲಿ ಹೈಕೋರ್ಟ್ 6 ತಿಂಗಳೊಳಗೆ ಶಿಕ್ಷೆಯನ್ನು ಎತ್ತಿಹಿಡಿಯಿತು. ಆದರೆ ಸುಪ್ರೀಂ ಕೋರ್ಟ್ ಮಾತ್ರ ಪ್ರಕರಣವನ್ನು ಇನ್ನೂ ಕೈಗೆತ್ತಿಕೊಂಡಿಲ್ಲ.

ಈ ಬಗ್ಗೆ ಈಗ ಸ್ವತಃ ಸುಪ್ರೀಂ ಕೋರ್ಟ್ ಬಾರ್ ಅಸೋಸಿಂಯೇಷನ್(ಎಸ್‍ಸಿಬಿಎ) ಅಧ್ಯಕ್ಷರೇ ಧ್ವನಿಂಯೆತ್ತಿದ್ದು, ಪ್ರಕರಣ ಇತ್ಯರ್ಥಗೊಳಿಸುವಲ್ಲಿ ಆಗುತ್ತಿರುವ ವಿಳಂಬವನ್ನು ಪ್ರಸ್ತಾಪಿಸಿದ್ದಾರೆ.
ಅದಕ್ಕೇ ಇರಬೇಕು ನಿರ್ಭಯಾ ಹೆತ್ತವರು, ನಮಗೆ ಸಾಕ್ಷ್ಯಚಿತ್ರದಿಂದ ಏನೂ ಆಗಬೇಕಾಗಿಲ್ಲ, ನಮಗೆ ಬೇಕಿರುವುದು ನ್ಯಾಯ ಎಂದಿದ್ದು.

ನ್ಯಾಯಾಂಗ ವ್ಯವಸ್ಥೆ ನಮಗೆ ನಿರಾಸೆ ಉಂಟುಮಾಡಿದೆ. 2 ವರ್ಷಗಳಿಂದಲೂ ಕೇಸು ಇತ್ಯರ್ಥವಾಗದೇ ಬಾಕಿ ಉಳಿದಿದೆ. ಇಂತಹ ಪ್ರಕರಣಗಳನ್ನೇ ನ್ಯಾಯಾಲಯ ಇಷ್ಟೊಂದು ಹಗುರವಾಗಿ ಪರಿಗಣಿಸಿದರೆ ಉಳಿದ ಕೇಸುಗಳ ಗತಿಯೇನಾಗಬಹುದು?
-ನಿರ್ಭಯಾ ಹೆತ್ತವರು

ತಡೆ ಬಿಟ್ರೆ ಬೇರೇನೂ

ಇಲ್ಲ ಅಪರಾಧಗಳ ಮೇಲ್ಮನವಿಗೆ ಸಂಬಂಧಿಸಿದ ನಿರ್ಧಾರ ಹೊರಬೀಳುವವರೆಗೂ ಗಲ್ಲುಶಿಕ್ಷೆಗೆ ತಡೆ ಆದೇಶ ಹೊರಡಿಸಿದ್ದಷ್ಟೇ ಸುಪ್ರೀಂ ಕೋರ್ಟ್‍ನ ಸಾಧನೆ. ಅಂದಿನಿಂದ ಇಂದಿನವರೆಗೂ ಪ್ರಕರಣದ ಬಗ್ಗೆ ಒಂದೇ ಒಂದು ವಿಚಾರಣೆಯೂ ನಡೆದಿಲ್ಲ. ವಿಚಾರಣೆಯ ದಿನಾಂಕವೂ ಪ್ರಕಟವಾಗಿಲ್ಲ.

ನಿಷೇಧ ಹಿಂಪಡೆಯಿರಿ
ಬಿಬಿಸಿ ಸಾಕ್ಷ್ಯಚಿತ್ರ ಪ್ರಸಾರಕ್ಕೆ ಹೇರಿದ ನಿರ್ಬಂಧವನ್ನು ಹಿಂಪಡೆಯಿರಿ ಎಂದು ಭಾರತದ ಎಡಿಟರ್ಸ್ ಗಿಲ್ಡ್ ಕೇಂದ್ರ ಸರ್ಕಾರವನ್ನು ಆಗ್ರಹಿಸಿದೆ. ಏತನ್ಮಧ್ಯೆ, ಲೆಸ್ಲಿ ಉಡ್ವಿನ್ ಅವರಿಗೆ ತಿಹಾರ್ ಜೈಲಿನೊಳಗೆ ಚಿತ್ರೀಕರಣಕ್ಕೆ ಅವಕಾಶ ಮಾಡಿಕೊಡುವ ಸಂದರ್ಭದಲ್ಲಿ ಭಾರತ ಸರ್ಕಾರ ತನ್ನದೇ ಆದೇಶವನ್ನು ಉಲ್ಲಂಘಿಸಿತ್ತು ಎಂಬ ವಿಚಾರ ಈಗ ಬಹಿರಂಗವಾಗಿದೆ.

ಅಪರಾಧಿಗಳು ಮಹಿಳೆಯರ ಬಗ್ಗೆ ನಕಾರಾತ್ಮಕ  ಭಾವನೆ ಹೊಂದಿದ್ದಾರೆ ಎಂಬುದು ಸಾಮಾನ್ಯ ಅಭಿಪ್ರಾಯ. ಆದರೆ ಅದು ಬಂದಿ ದ್ದಾದರೂ ಎಲ್ಲಿಂದ? ಶೇ.20ರಷ್ಟು ಮಹಿಳೆಯರು ಮಾತ್ರ ಸಭ್ಯರು ಎಂಬು ದನ್ನು ಅವರಿಗೆ ಕಲಿಸಿ ಕೊಟ್ಟವರು ಯಾರು?'
- ಲೆಸ್ಲೀ ಉಡ್ವಿನ್, ಸಾಕ್ಷ್ಯಚಿತ್ರ ನಿರ್ಮಾಪಕಿ

ನಿರ್ಭಯಾ ಹತ್ಯೆ ಇಡೀ ಭಾರತೀಯ ಸಮಾಜದ ಆತ್ಮಸಾಕ್ಷಿಯನ್ನೇ ಕದಡಿತ್ತು. ಆದರೆ ಇದು ಸುಪ್ರೀಂ ನ್ಯಾಯಮೂರ್ತಿಗಳ ಮನಃಸಾಕ್ಷಿಯನ್ನು ಕದಡಿಲ್ಲ ಎಂಬುದು ಅಚ್ಚರಿಯ ವಿಚಾರ.
- ದುಶ್ಯಂತ್ ದಾವೆ, ಸುಪ್ರೀಂ ಕೋರ್ಟ್ ಬಾರ್ ಅಸೋಸಿಯೇಷನ್ ಅಧ್ಯಕ್ಷ

ಪ್ರಕರಣ ಈವರೆಗೆ
ತ್ವರಿತಗತಿ ನ್ಯಾಯಾಲಯ (8 ತಿಂಗಳ ಅಧಿ)
ಜನವರಿ 17, 2013: ವಿಚಾರಣೆ ಆರಂಭ
ಸೆಪ್ಟೆಂಬರ್ 13, 2013: ಎಲ್ಲ ಐದು ಅಪರಾಧಿಗಳಿಗೆ ಮರಣದಂಡನೆ
ದೆಹಲಿ ಹೈಕೋರ್ಟ್: (6 ತಿಂಗಳ ವಿಚಾರಣೆ)
ಸೆ. 23, 2013: ವಿಚಾರಣೆ ಆರಂಭ
ಮಾ. 13, 2014: ಮರಣದಂಡನೆ ಖಚಿತ
ಸುಪ್ರೀಂಕೋರ್ಟ್‍ನಲ್ಲಿ (ಒಂದು ವರ್ಷದಿಂದ ಇತ್ಯರ್ಥವಾಗಿಲ್ಲ)
ಮಾರ್ಚ್ 15, 2014: ಮುಕೇಶ್ ಹಾಗೂ ಪವನ್ ಗುಪ್ತಾ ಮರಣದಂಡನೆಗೆ ತಡೆ
ಜೂನ್ 2, 2014: ವಿನಯ್ ಹಾಗೂ ಅಕ್ಷಯ್ ಮರಣದಂಡನೆಗೂ ತಡೆಯಾಜ್ಞೆ
ಆಗಸ್ಟ್ 25, 2014: ಮರಣದಂಡನೆ ಶಿಕ್ಷೆ ಹಿನ್ನೆಲೆ ಯಲ್ಲಿ ಮೂವರು ಜಡ್ಜ್‍ಗಳನ್ನು ಹೊಂದಿರುವ ಪೀಠ ಅಪಾದನೆಗಳನ್ನು ಆಲಿಸಿ ತೀರ್ಮಾನಿಸಬೇಕೆಂದು, ಇಬ್ಬರಿದ್ದ ನ್ಯಾಯಪೀಠದಿಂದ ತೀರ್ಮಾನ. ಆ ಬಳಿಕ ವಿಚಾರಣೆ ನಡೆದಿಲ್ಲ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com