
ಜಮ್ಮು: ಪ್ರತ್ಯೇಕವಾದಿ ಮಾಶರತ್ ಆಲಂ ಬಿಡುಗಡೆಯಿಂದ ಎದ್ದಿರುವ ವಿವಾದದ ಬಗ್ಗೆ ಯಾವುದೇ ಒತ್ತಡಕ್ಕೆ ಒಳಗಾಗದ ಪಿಡಿಪಿ ಪಕ್ಷ ರಾಜಕೀಯ ಖೈದಿಗಳ ಬಗ್ಗೆ ನ್ಯಾಯಾಲಯದ ಸೂಚನೆಗಳನ್ನು ಪಾಲಿಸುತ್ತದೆ ಎಂದಿದ್ದಾರೆ.
"ಸುಪ್ರೀಮ್ ಕೋರ್ಟ್ ಮತ್ತು ಇತರ ಕೋರ್ಟ್ಗಳು ನಮಗೆ ಸೂಚಿಸುವುದನ್ನು ಪಾಲಿಸುತ್ತೇವೆ (ಮುಂದೆ ರಾಜಕೀಯ ಖೈದಿಗಳನ್ನು ಜೈಲಿನಿಂದ ಬಿಡುಗಡೆ ಮಾಡುವ ಬಗ್ಗೆ)" ಎಂದು ಪಿಡಿಪಿ ಮುಖಂಡ ಮತ್ತು ಕ್ರೀಡಾ ಸಚಿವ ಇಮ್ರಾನ್ ರಾಜಾ ಅನ್ಸಾರಿ ವರದಿಗಾರರಿಗೆ ತಿಳಿಸಿದ್ದಾರೆ.
ಮುಫ್ತಿ ಸಯ್ಯದ್ ಸರ್ಕಾರ, ರಾಜಕೀಯ ಖೈದಿಗಳನ್ನು ಸ್ವತಂತ್ರಗೊಳಿಸುವ ಕಾರ್ಯವನ್ನು ತಡೆಹಿಡಿಯಲಾಗುವುದು ಎಂದು ಕೇಂದ್ರ ಸರ್ಕಾರಕ್ಕೆ ಪತ್ರದ ಮೂಲಕ ತಿಳಿಸಲಾಗಿದೆಯೇ ಎಂಬ ಪ್ರಶ್ನೆಗೆ ರಾಜಾ ಅವರು "ಕಾನೂನು ಏನು ಹೇಳುತ್ತದೋ... ಕೋರ್ಟ್ ಏನು ಹೇಳುತ್ತದೋ.. ಅದನ್ನೇ ಮಾಡುತ್ತಾ ಬಂದಿದ್ದೇವೆ" ಎಂದಿದ್ದಾರೆ.
ಜಮ್ಮು ಕಾಶ್ಮೀರದ ಶಾಸಕರು ಸೋಮವಾರ ಮುಫ್ತಿ ಮೊಹಮ್ಮದ್ ಸಯ್ಯದ್ ಅವರ ಮನೆಯ ಮುಂದೆ ಆಲಂನನ್ನು ಮತ್ತೆ ಬಂಧಿಸುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿದರು.
ಅಲ್ಲದೆ ಆಲಂ ಬಿಡುಗಡೆಗೂ ಮುಂಚೆ ಮೈತ್ರಿ ಪಕ್ಷವಾದ ಬಿಜೆಪಿ ಜೊತೆ ಚರ್ಚಿಸಲಾಗಿತ್ತು ಎಂಬುದು ಸುಳ್ಳು ಎಂದು ಕೂಡ ಬಿಜೆಪಿ ಪಕ್ಷ ದೂರಿದೆ.
ಅಲ್ಲದೆ, ಪ್ರತೇಕವಾದಿ ಅಶಾರತ್ ಆಲಂ ಅವರ ಬಿಡುಗಡೆ ನಿರ್ಧಾರವನ್ನು ರಾಜ್ಯಪಾಲರ ಆಳ್ವಿಕೆ ಸಮಯದಲ್ಲೇ ತೆಗೆದುಕೊಳ್ಳಲಾಗಿತ್ತು ಎಂದು ಕೂಡ ಪಿಡಿಪಿ ಪಕ್ಷ ತಿಳಿಸಿದೆ.
Advertisement