ಇಂಡಿಯಾಸ್ ಡಾಟರ್: ಮಾಧ್ಯಮ ವಿಚಾರಣೆ ನ್ಯಾಯಾಧೀಶರನ್ನು ಪ್ರಭಾವಿಸುತ್ತದೆ ಎಂದ ಕೋರ್ಟ್

ಮಾಧ್ಯಮಗಳು ನಡೆಸುವ ವಿಚಾರಣೆ ಅಪ್ರಜ್ಞಾಪೂರ್ವಕವಾಗಿ ನ್ಯಾಯಾಧೀಶರನ್ನು ಒತ್ತಡಕ್ಕೆ ಸಿಲುಕಿಸಿ
ಇಂಡಿಯಾಸ್ ಡಾಟರ್
ಇಂಡಿಯಾಸ್ ಡಾಟರ್

ನವದೆಹಲಿ: ಮಾಧ್ಯಮಗಳು ನಡೆಸುವ ವಿಚಾರಣೆ ಅಪ್ರಜ್ಞಾಪೂರ್ವಕವಾಗಿ ನ್ಯಾಯಾಧೀಶರನ್ನು ಒತ್ತಡಕ್ಕೆ ಸಿಲುಕಿಸಿ ಪ್ರಭಾವಿಸುತ್ತವೆ ಎಂದು ದೆಹಲಿ ಹೈಕೋರ್ಟ್ ಅಭಿಪ್ರಾಯಪಟ್ಟಿದೆ. ಡಿಸೆಂಬರ್ ೧೬ ರಂದು ದೆಹಲಿಯಲ್ಲಿ ನಡೆದ ನಿರ್ಭಯ ರೇಪ್ ಮೇಲೆ ಬಿಬಿಸಿ ನಿರ್ಮಿಸಿದ್ದ ಸಾಕ್ಷ್ಯಚಿತ್ರದ ನಿರ್ಬಂಧದ ವಿವಾದದ ಹಿನ್ನಲೆಯಲಿ ಕೋರ್ಟ್ ಹೀಗೆ ಅಭಿಪ್ರಾಯ ಪಟ್ಟಿದೆ.

ನ್ಯಾಯಾಧೀಶರಾದ ಬಿ ಡಿ ಅಹ್ಮದ್ ಮತ್ತು ಸಂಜೀವ್ ಸಚ್ದೇವ್ ಅವರುಗಳನ್ನು ಒಳಗೊಂಡ ಪೀಠ, ಈ ಸಾಕ್ಷ್ಯಚಿತ್ರ ಪ್ರಸಾರ ಮಾಡುವ ಬಗ್ಗೆ ಮೇಲ್ಮಟ್ಟಕ್ಕೆ ಕೋರ್ಟ್ ನ ತಕಾರಾರು ಏನೂ ಇಲ್ಲ, ಆದರೆ ಸುಪ್ರಿಂ ಕೋರ್ಟ್ ತಪ್ಪಿತಸ್ಥರ ಮನವಿಯ ಬಗ್ಗೆ ತೀರ್ಪು ನೀಡಿದ ನಂತರವಷ್ಟೇ ಅದನ್ನು ಪ್ರಸಾರ ಮಾಡಬೇಕು ಎಂದು ಕೋರ್ಟ್ ತಿಳಿಸಿದೆ.

ನ್ಯಾಯಾಲಯದ ನಡವಳಿಕೆಗೆ ಈ ಸಾಕ್ಷ್ಯಚಿತ್ರ ಹಸ್ತಕ್ಷೇಪ ಮಾಡುತ್ತದೆ ಎಂದಿರುವ ಕೋರ್ಟ್ ಯಾವುದೇ ತಡೆಯಾಜ್ಞೆ ನೀಡಲು ನಿರಾಕರಿಸಿದೆ. ಅದನ್ನು ಮುಖ್ಯ ನ್ಯಾಯಾಧೀಶರನ್ನು ಒಳಗೊಂಡ ನ್ಯಾಯಪೀಠವಷ್ಟೆ ತೀರ್ಪು ನಿಡಲು ಸಾಧ್ಯ ಎಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com