ವಿಧಾನ ಪರಿಷತ್ ಸಭಾಧ್ಯಕ್ಷರ ವಜಾ: ಬಿಜೆಪಿ-ಸೇನೆ ಭಿನ್ನಾಭಿಪ್ರಾಯ

ಮಹಾರಾಷ್ಟ್ರ ವಿಧಾನ ಪರಿಷತ್ತಿನ ಸಭಾಧ್ಯಕ್ಷ, ಕಾಂಗ್ರೆಸ್ ಮುಖಂಡ ಶಿವಾಜಿರಾವ್ ದೇಶಮುಖ್ ಅವರನ್ನು ವಜಾ ಮಾಡಲು ಎನ್ ಸಿ ಪಿ ಹೊರಡಿಸಿರುವ ಖಂಡನಾ ನಿರ್ಣಯ
ದೇವೇಂದ್ರ ಫಡ್ನವಿಸ್ ಮತ್ತು ಉದ್ಧವ್ ಠಾಕ್ರೆ
ದೇವೇಂದ್ರ ಫಡ್ನವಿಸ್ ಮತ್ತು ಉದ್ಧವ್ ಠಾಕ್ರೆ

ಮುಂಬೈ: ಮಹಾರಾಷ್ಟ್ರ ವಿಧಾನ ಪರಿಷತ್ತಿನ ಸಭಾಧ್ಯಕ್ಷ, ಕಾಂಗ್ರೆಸ್ ಮುಖಂಡ ಶಿವಾಜಿರಾವ್ ದೇಶಮುಖ್ ಅವರನ್ನು ವಜಾ ಮಾಡಲು ಎನ್ ಸಿ ಪಿ ಹೊರಡಿಸಿರುವ ಖಂಡನಾ ನಿರ್ಣಯ, ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಮೈತ್ರಿ ಪಕ್ಷಗಳಾದ ಬಿಜೆಪಿ ಮತ್ತು ಶಿವಸೇನೆಯಲ್ಲಿ ಭಿನ್ನಾಭಿಪ್ರಾಯ ಸೃಷ್ಟಿಸಿದೆ. ದೇಶಮುಖ್ ವಜಾ ಮಾಡುವ ಪರವಾಗಿ ಬಿಜೆಪಿ ನಿಂತಿದ್ದರೆ, ಸೋಮವಾರ ಬರಲಿರುವ ಈ ಖಂಡನಾ ನಿರ್ಣಯವನ್ನು ವಿರೋಧಿಸಲು ಶಿವಸೇನೆ ಕಂಕಣ ಕಟ್ಟಿ ನಿಂತಿದೆ.

ಗುರುವಾರ ನಡೆದ ಸರ್ವಪಕ್ಷಗಳ ಸಭೆಯಲ್ಲಿ ಈ ಭಿನ್ನಾಭಿಪ್ರಾಯ ಗೋಚರವಾಯಿತು. ಸೇನಾ ಸಚಿವ ರಾಮದಾಸ್ ಕದಂ ಅವರು ದೇಶಮುಖ್ ಒಳ್ಳೆಯ ಕೆಲಸವನ್ನೇ ಮಾಡುತ್ತಿರುವಾಗ ಅವರನ್ನು ವಜಾ ಮಾಡುವ ಔಚಿತ್ಯವೇನು ಎಂದು ಮುಖ್ಯಮಂತ್ರಿ ದೇವೆಂದ್ರ ಫಡ್ನವಿಸ್ ಅವರನ್ನು ಪ್ರಶ್ನಿಸಿದರು.

ಈ ಖಂಡನಾ ನಿರ್ಣಯದ ಬಗ್ಗೆ ಚರ್ಚೆಯನ್ನು ಕೂಡ ರದ್ದು ಮಾಡುವ ಫಡ್ನವಿಸ್ ಯೋಜನೆಯನ್ನು ರಾಮದಾಸ್ ಬಲವಾಗಿ ವಿರೋಧಿಸಿದ್ದಾರೆ.

ಚರ್ಚೆಗೆ ಅವಕಾಶ ನೀಡದಿದ್ದಾರೆ ಸದನದ ಭಾವಿಗೆ ಇಳಿದು ಪ್ರತಿಭಟಿಸುವುದಾಗಿ ರಾಮದಾಸ್ ಎಚ್ಚರಿಸಿದರು. ಕೊನೆಗೆ ಖಂಡನಾ ನಿರ್ಣಯವನ್ನು ಮತಕ್ಕೆ ಹಾಕುವುದಕ್ಕೂ ಮುಂಚೆ ಮೊದಲು ಎರಡು ಘಂಟೆ ಚರ್ಚೆಗೆ ಅವಕಾಶ ನೀಡುವುದಾಗಿ ಮುಖ್ಯಮಂತ್ರಿ ತಿಳಿಸಿದ್ದಾರೆ.

ಈ ಖಂಡನಾ ನಿರ್ಣಯ ಸದನದಲ್ಲಿ ಅನುಮತಿ ಪಡೆದರೆ ಬಿಜೆಪಿ ಪಕ್ಷದ ಪಾಂಡುರಂಗ್ ಫುಂಡ್ಕರ್ ವಿಧಾನಪರಿಷತ್ತಿನ ಸಭಾಧ್ಯಕ್ಷರಾಗಿ ಆಯ್ಕೆಯಾಗಲಿದ್ದಾರೆ ಎನ್ನಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com