ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಉಮಾಶ್ರೀ
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಉಮಾಶ್ರೀ

ಅಂಗನವಾಡಿಗಳ ಖಾಸಗೀಕರಣ ಇಲ್ಲ

ಅಂಗನವಾಡಿಗಳನ್ನು ಖಾಸಗೀಕರಣ ಮಾಡಲಾಗುತ್ತದೆ ಎನ್ನುವ ಆತಂಕ ಬೇಡ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಉಮಾಶ್ರೀ ಹೇಳಿದರು...

ಸುಳ್ಯ: ಅಂಗನವಾಡಿಗಳನ್ನು ಖಾಸಗೀಕರಣ ಮಾಡಲಾಗುತ್ತದೆ ಎನ್ನುವ ಆತಂಕ ಬೇಡ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಉಮಾಶ್ರೀ ಹೇಳಿದರು.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಲ್ಲಿ ಹಲವು ಸುಧಾರಣೆಗಳನ್ನು ತರಲಾಗುತ್ತಿದೆ. ಅದರಲ್ಲಿ ಅಂಗನವಾಡಿ ವ್ಯವಸ್ಥೆಯ ಪುರನ್ ರಚನೆಯೂ ಸೇರಿದೆ. ಇದಕ್ಕೆ ಖಾಸಗೀಕರಣ ಎಂಬ ವ್ಯಾಖ್ಯಾನ ನೀಡಲಾಗುತ್ತಿದೆ. ಇದು ಸರಿಯಲ್ಲ ಎಂದು ಅರು ಹೇಳಿದರು.

ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯ ಕರ್ತೆಯರ ಮತ್ತು ಸಹಾಯಕಿಯರ ರಾಜ್ಯ ಸಮ್ಮೇಳನ ಸ್ನೇಹ ಸಂಗಮವನ್ನು ಪಟ್ಟಣದಲ್ಲಿ ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು. ಅಮಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಬೇಡಿಕೆ ಹೊಸತೇನೂ ಅಲ್ಲ. ಎಲ್ಲ ರಾಜ್ಯಗಳು ನೀಡುವ ಸವಲತ್ತುಗಳನ್ನು ತುಲನಾತ್ಮಕವಾಗಿ ಅಧ್ಯಯನ ನಡೆಸಿ ನಮ್ಮಲಮಲಿಯೂ ಹಂತಹಂತವಾಗಿ ಈಡೇರಿಸುತ್ತೇವೆ.

ಅಂಗನವಾಡಿ ಸಮಯದ ಬದಲಾವಣೆ, ಕೇಂದ್ರ ರಾಜ್ಯಗಳ ಗೌರವಧನ ಒಟ್ಟಾಗಿ ನೀಡುವ ವ್ಯವಸ್ಥೆ ಮತ್ತಿತರ ಬೇಡಿಕೆಗಳ ಕುರಿತು ಪರಿಶೀಲಿಸಲಾಗುವುದು ಎಂದು ಭರವಸೆ ನೀಡಿದ ಅವರು, ನಮ್ಮ ಸರ್ಕಾರ ಮಹಿಳಾ ಪರವಾಗಿದೆ.

ಆದರೆ, ನಿಮ್ಮಲ್ಲೇ ತಾಳಮೇಳವಿಲ್ಲ. ಹಾಗಾಗಬಾರದು ಎಂದು ಕಿವಿಮಾತು ಹೇಳಿದರು. ಅಧ್ಯಕ್ಷತೆವಹಿಸಿದ್ದ ಶಾಸಕ ಎಸ್. ಅಂಗಾರ ಮಾತನಾಡಿ, ಕೇಂದ್ರದ ಯೋಜನೆಗಳನ್ನು ಯಶಸ್ವಿಗೊಳಿಸಲು ರಾಜ್ಯ ಸರ್ಕಾರಗಳು ಹೆಚ್ಚು ಬದ್ಧತೆಯಿಂದ ಕೆಲಸ ಮಾಡಬೇಕು ಎಂದರು.

ಅಂಗನವಾಡಿ ಕಾರ್ಯಕರ್ತೆಯರನ್ನು ಸರ್ಕಾರಿ ನೌಕರರೆಂದು ಪರಿಗಣಿಸಿ ಸಿ ಮತ್ತು ಡಿ ಗ್ರೂಪ್ ಸವಲತ್ತು ನೀಡಬೇಕು. ಇಲ್ಲದೇ ಹೋದರೆ ಹಿಂದಿನಂತೆಯೇ ಮಧ್ಯಾಹ್ನದವರೆಗೆ ಮಾತ್ರ ಅಂಗನವಾಡಿ ಸಮಯ ಮೀಸಲಿಡಬೇಕು ಎಂದು ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಸಂಘದ ರಾಜ್ಯಾಧ್ಯಕ್ಷೆ ಜಯಲಕ್ಷ್ಮಿ ಬಿ.ಆರ್ ಆಗ್ರಹಿಸಿದರು.

Related Stories

No stories found.

Advertisement

X
Kannada Prabha
www.kannadaprabha.com