ಗಿನ್ನಿಸ್ ದಾಖಲೆ ಪುಸ್ತಕ ಸೇರಿದ ಎಐಡಿಎಂಕೆ ಕ್ಯಾನ್ಸರ್ ಶಿಬಿರ

ಮಾರ್ಚ್ ೬ರಂದು ಎಐಡಿಎಂಕೆ ಮಹಿಳಾ ಘಟಕ ಆಯೋಜಿಸಿದ್ದ ಸ್ತನ ಕ್ಯಾನ್ಸರ್ ತಪಾಸಣಾ ಶಿಬಿರ ಗಿನ್ನಿಸ್ ವಿಶ್ವ ದಾಖಲೆಗಳ ಪುಸ್ತಕಕ್ಕೆ
ಪುಷ್ಪಾ ಗಿನ್ನಿಸ್ ಪ್ರಮಾಣಪತ್ರ ಪಡೆದ ಶಶಿಕಲಾ ಪುಷ್ಪಾ
ಪುಷ್ಪಾ ಗಿನ್ನಿಸ್ ಪ್ರಮಾಣಪತ್ರ ಪಡೆದ ಶಶಿಕಲಾ ಪುಷ್ಪಾ

ಚೆನ್ನೈ: ಮಾರ್ಚ್ ೬ರಂದು ಎಐಡಿಎಂಕೆ ಮಹಿಳಾ ಘಟಕ ಆಯೋಜಿಸಿದ್ದ ಸ್ತನ ಕ್ಯಾನ್ಸರ್ ತಪಾಸಣಾ ಶಿಬಿರ ಗಿನ್ನಿಸ್ ವಿಶ್ವ ದಾಖಲೆಗಳ ಪುಸ್ತಕಕ್ಕೆ ಪ್ರವೇಶ ಪಡೆದಿದೆ.

ಧರ್ಮಪುರಿಯ ಈ ಶಿಬಿರದಲ್ಲಿ ಸುಮಾರು ೨೦೩೭ ಜನ ಮಹಿಳೆಯರು ತಪಾಸಣೆ ಮಾಡಿಸಿಕೊಂಡು, ಅತಿ ಹೆಚ್ಚು ಮಹಿಳೆಯರು ಒಂದೇ ಬಾರಿಗೆ ಈ ಪರೀಕ್ಷೆ ಮಾಡಿಸಿಕೊಂಡ ದಾಖಲೆ ಮಾಡಿದೆ. ಈ ಹಿಂದಿನ ದಾಖಲೆ ಸಂಖ್ಯೆ ೯೭೧ ಆಗಿತ್ತು.

"ಇದರ ಮೂಲಕ ತಮಿಳುನಾಡು ವಿಶ್ವಕ್ಕೇ ಸಂದೇಶ ನೀಡಿದೆ" ಎಂದು ಗಿನ್ನಿಸ್ ವಿಶ್ವ ದಾಖಲೆಗಳ ಪ್ರತಿನಿಧಿ ಲೂಸಿಯಾ ಸಿನಿಗಾಗ್ಲೆಸಿ ತಿಳಿಸಿದ್ದಾರೆ. ಇಲ್ಲಿಯವರೆಗೂ ಎಐಡಿಎಂಕೆ ಮಹಿಳಾ ಘಟಕ ನಡೆಸಿರುವ ಇಂಥ ೧೦ ಶಿಬಿರಗಳಿಂದ ೧೬ ಸಾವಿರ ಮಹಿಳೆಯಲು ತಪಾಸಣೆ ಮಾಡಿಸಿಕೊಂಡು ಪಲಾನುಭವಿಗಳಾಗಿದ್ದಾರೆ ಎಂದು ತಿಳಿದುಬಂದಿದೆ.  

ಪಕ್ಷದ ಅಧಿನಾಯಕಿ ಜೆ ಜಯಲಲಿತಾ ಪರವಾಗಿ ಮಹಿಳಾ ಘಟಕದ ಕಾರ್ಯದರ್ಶಿ ಶಶಿಕಲಾ ಪುಷ್ಪಾ ಗಿನ್ನಿಸ್ ಪ್ರಮಾಣಪತ್ರವನ್ನು ಲೂಸಿಯಾ ಸಿನಿಗಾಗ್ಲೆಸಿ ಅವರಿಂದ ಪಡೆದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com