
ನವದೆಹಲಿ: ರಾಷ್ಟ್ರದ ಪರಮೋನ್ನತ ಗೌರವವಾದ ಭಾರತ ರತ್ನ ಪ್ರಶಸ್ತಿಯನ್ನು ಹಾಕಿ ದಂತಕತೆ ಧ್ಯಾನ್ ಚಂದ್ ಮತ್ತು ಬಿಎಸ್ಪಿ ಸಂಸ್ಥಾಪಕ ಕಾನ್ಶಿ ರಾಮ್‌ಗೆ ನೀಡಿ ಎಂಬ ಕೂಗು ಮಂಗಳವಾರ ರಾಜ್ಯಸಭೆಯಲ್ಲಿ ಕೇಳಿಬಂದಿದೆ.
ಶೂನ್ಯವೇಳೆಯಲ್ಲಿ ಮಾತನಾಡಿದ ಬಿಜೆಡಿ ಸಂಸದ ದಿಲೀಪ್ ಕುಮಾರ್ ತಿರ್ಕೆ, ಧ್ಯಾನ್‌ಚಂದ್ ಅವರು 1928, 1932 ಮತ್ತು 1936ರ್ಲಲಿ ನಡೆದ ಒಲಿಂಪಿಕ್ಸ್ ಪಂದ್ಯದಲ್ಲಿ ಭಾರತವನ್ನು ಗೆಲ್ಲಿಸಿದ್ದರು. ತಮ್ಮ ವೃತ್ತಿ ಜೀವನದಲ್ಲಿ 185 ಪಂದ್ಯಗಳನ್ನಾಡಿರುವ ಅವರು 570 ಗೋಲುಗಳನ್ನು ದಾಖಲಿಸಿದ್ದರು. ಎರಡು ಒಲಿಂಪಿಕ್ಸ್ ಪಂದ್ಯಗಳಲ್ಲಿ ಅತೀ ಹೆಚ್ಚು ಗೋಲು ಬಾರಿಸಿದ ಕ್ರೀಡಾಪಟು ಅವರು. 1936ರಲ್ಲಿ ನಡೆದ ಬರ್ಲಿನ್ ಒಲಿಂಪಿಕ್ಸ್‌ನಲ್ಲಿ ಅವರ ಪ್ರದರ್ಶನ ಕಂಡು ಹಿಟ್ಲರ್, ಜರ್ಮನ್ ಸೇನಾಪಡೆಯಲ್ಲಿ ಕರ್ನಲ್ ಹುದ್ದೆ ಸ್ವೀಕರಿಸುವಂತೆ ಪ್ರಸ್ತಾಪ ನೀಡಿದ್ದರು. ಅಗಸ್ಟ್ 26 ಧ್ಯಾನ್‌ಚಂದ್ ಅವರ ಹುಟ್ಟಿದ ದಿನ. ಆ ದಿನವನ್ನು ಖೇಲ್ ದಿವಸ್ ಎಂದು ಆಚರಿಸಲಾಗುತ್ತದೆ. 20ನೇ ಶತಮಾನದ ಮಹಾನ್ ಆಟಗಾರ ಅವರು. ಆದ್ದರಿಂದ ಅವರಿಗೆ ಭಾರತರತ್ನ ಪ್ರಶಸ್ತಿ ನೀಡಬೇಕೆಂದು ನಾನು ಬಯಸುತ್ತೇನೆ ಎಂದಿದ್ದಾರೆ.
ಅದೇ ವೇಳೆ ಬಹುಜನ್ ಸಮಾಜ ಪಕ್ಷದ ಸಂಸದ ನರೇಂದ್ರ ಕುಮಾರ್ ಕಶ್ಯಪ್ ಅವರು ಪಕ್ಷದ ಸಂಸ್ಥಾಪಕ ಕಾನ್ಶಿ ರಾಮ್ ಅವರಿಗೂ ಭಾರತ ರತ್ನ ನೀಡಬೇಕೆಂಬ ಬೇಡಿಕೆಯನ್ನೊಡಿದರು.
Advertisement