ಬಿಜೆಪಿ ಶಾಸಕ ಕವಿಂದರ್ ಗುಪ್ತ ಜಮ್ಮು ಕಾಶ್ಮೀರ ವಿಧಾನ ಸಭಾಧ್ಯಕ್ಷರಾಗಿ ಆಯ್ಕೆ

ಭಾರತೀಯ ಜನತಾ ಪಕ್ಷದ ಶಾಸಕ ಕವಿಂದರ್ ಗುಪ್ತ ಬುಧವಾರ ಜಮ್ಮು ಕಾಶ್ಮೀರ ರಾಜ್ಯದ ವಿಧಾನ ಸಭಾ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಜಮ್ಮು: ಭಾರತೀಯ ಜನತಾ ಪಕ್ಷದ ಶಾಸಕ ಕವಿಂದರ್ ಗುಪ್ತ ಬುಧವಾರ ಜಮ್ಮು ಕಾಶ್ಮೀರ ರಾಜ್ಯದ ವಿಧಾನ ಸಭಾ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ಬುಧವಾರ ವಿಧಾನಸಭೆಯ ಬಜೆಟ್ ಅಧಿವೇಶನ ಪ್ರಾರಂಭವಾದ ಮೇಲೆ ಹಿರಿಯ ಪಿಡಿಪಿ ನಾಯಕ ಮತ್ತು ಶಿಕ್ಷಣ ಸಚಿವ ನಯೀಮ್ ಅಕ್ತರ್ ಸಭಾಧ್ಯಕ್ಷರ ಸ್ಥಾನಕ್ಕೆ ಕವಿಂದರ್ ಗುಪ್ತಾ ಅವರ ಹೆಸರನ್ನು ಸೂಚಿಸಿದರು. ಜಮ್ಮು ಜಿಲ್ಲೆಯ ಗಾಂಧಿನಗರ ಕ್ಷೇತ್ರದಿಂದ ಶಾಸಕರಾಗಿ ಗುಪ್ತಾ ಆಯ್ಕೆಯಾಗಿದ್ದಾರೆ.

ಉಪಮುಖ್ಯಮಂತ್ರಿ ಮತ್ತು ಹಿರಿಯ ಬಿಜೆಪಿ ನಾಯಕ ನಿರ್ಮಲ್ ಸಿಂಗ್ ಗುಪ್ತ ಅವರ ಹೆಸರನ್ನು ಅನುಮೋದಿಸಿದ ಮೇಲೆ ಗುಪ್ತಾ ಅವಿರೋಧವಾಗಿ ಆಯ್ಕೆಯಾದರು. ಸದ್ಯದ ಸಭಾಧ್ಯಕ್ಷ  ಪ್ರಾದೇಶಿಕ ನ್ಯಾಷನಲ್ ಕಾನ್ಫರೆನ್ಸ್ ಪಕ್ಷದ ಮುಹಮ್ಮದ ಶಫಿ ಅವರನ್ನು ಗುಪ್ತಾ ಬದಲಾಯಿಸಿದ್ದಾರೆ. ಗುಪ್ತಾ ಅವರು ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಹಿರಿಯ ಕಾಂಗ್ರೆಸ್ ನಾಯಕ ರಾಮನ್ ಭಲ್ಲಾ ಅವರನ್ನು ಸೋಲಿಸಿದ್ದರು.

ಚುನಾವಣೆಯ ನಂತರ ಯಾರಿಗೂ ಸ್ಪಷ್ಟ ಬಹುಮತ ಸಿಗದ ಕಾರಣ ಬಿಜೆಪಿ ಮತ್ತು ಪಿಡಿಪಿ ಪಕ್ಷಗಳು ಜಂಟಿಯಾಗಿ ಮಾರ್ಚ್ ೧ ರಂದು ಕಣಿವೆಯಲ್ಲಿ ಅಧಿಕಾರ ಸ್ಥಾಪಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com