
ವಾರಣಾಸಿ: ವಿಶ್ವದ ಮೊದಲ ಸೌರಚಾಲಿತ ವಿಮಾನ 'ಸೋಲಾರ್ ಇಂಪಲ್ಸ್-೨' ಇಂದು ಸಂಜೆ ಗಂಗಾ ನದಿಯ ಮೇಲೆ ಹಾರಿ ವಾರಣಾಸಿಯಲ್ಲಿ ಇಳಿದು ಸ್ವಚ್ಚತೆ ಮತ್ತು ಸ್ವಚ್ಛ ಇಂಧನದ ಸಂದೇಶ ಸಾರಲಿದೆ. ವಾರಣಾಸಿಯ ಲಾಲ್ ಬಹದ್ದೂರ್ ಶಾಸ್ತ್ರಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಈ ವಿಮಾನ ಇಂದು ಸಂಜೆ ಇಳಿಯಲಿದೆ.
"ಅಹಮದಾಬಾದಿನಿಂದ ನಿಗದಿಯಾದ ಸಮಯಕ್ಕಿಂತ ಎರಡು ಘಂಟೆ ತಡವಾಗಿ ಹಾರಲಿರುವ ವಿಮಾನ ರಾತ್ರಿ ಸುಮಾರು ೯ ಘಂಟೆಗೆ ಇಲ್ಲಿ ಭೂಸ್ಪರ್ಶ ಮಾಡಲಿದೆ" ಎಂದು ವಾರಣಾಸಿ ವಿಮಾನ ನಿಲ್ದಾಣದ ನಿರ್ದೇಶಕ ಕೆ ಮಲಿಕ್ ತಿಳಿಸಿದ್ದಾರೆ.
ಈ ವಿಮಾನ ಗಂಗಾ ನದಿಯ ವೈಮಾನಿಕ ಚಿತ್ರೀಕರಣ ಮಾಡಲು ಜಿಲ್ಲಾಧಿಕಾರಿಗಳು ಅನುಮತಿ ನೀಡಿದ್ದಾರೆ.
"ಈ ವಿಮಾನ ಯೋಜನೆಯ ಸಹ ಸಂಸ್ಥಾಪಕ ಮತ್ತು ವಿಮಾನ ಚಾಲಕ ಆಂಡ್ರೆ ಬಾರ್ಶ್ ಬರ್ಗ್ ಮತ್ತು ಸಹ ವಿಮಾನ ಚಾಲಕ ಹಾಗೂ ಯೋಜನೆಯ ಅಧ್ಯಕ್ಷ ಬರ್ಟ್ರಾಂಡ್ ಪಿಕ್ಕಾರ್ದ್ ಅವರಿಗೆ ವಿಮಾನ ನಿಲ್ದಾಣದಲ್ಲಿ ಸ್ವಾಗತ ನೀಡಲು ನಾವು ಸಿದ್ಧರಾಗಿದ್ದೇವೆ" ಎಂದು ಮಲಿಕ್ ತಿಳಿಸಿದ್ದಾರೆ.
ಯಾವುದೇ ಇಂಧನ ಇಲ್ಲದೆ ಸಂಪೂರ್ಣ ಸೌರ ಶಕ್ತಿಯ ಮೇಲೆ ಚಲಿಸುವ ಈ ವಿಮಾನ ಮುಂಚೆ ಅಹಮದಾಬಾದನ್ನು ೫:೩೦ಕ್ಕೆ ಹೊರಟು ಸುಮಾರು ೮:೩೦ಕ್ಕೆ ವಾರಣಾಸಿಯನ್ನು ತಲಪುವಂತೆ ನಿಗದಿಯಾಗಿತ್ತು.
Advertisement