
ಚೆನ್ನೈ: ಮಹಾತ್ಮಾ ಗಾಂಧಿ ಬ್ರಿಟಿಶ್ ಏಜೆಂಟರಾಗಿದ್ದರು ಎಂದು ತಮ್ಮ ಬ್ಲಾಗ್ ಬರಹದಲ್ಲಿ ಬರೆದು ವಿವಾದ ಸೃಷ್ಟಿಸಿದ್ದ ಸುಪ್ರೀಮ್ ಕೋರ್ಟ್ ನಿವೃತ್ತ ನ್ಯಾಯಾಧೀಶ ಮಾರ್ಕಂಡೆಯ ಕಾಟ್ಜು ಮೇಲೆ ಗಾಂಧಿವಾದಿ ತಮಿಳುರವಿ ಮಣಿಯನ್ ಬುಧವಾರ ಮಾನನಷ್ಟ ಮೊಕದ್ದಮೆ ಅರ್ಜಿ ಸಲ್ಲಿಸಿದ್ದು ಈ ಹೇಳಿಕೆಗಳಿಗೆ ಕಾಟ್ಜು ವಿರುದ್ಧ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.
ತಾವು ಸಲ್ಲಿಸಿರುವ ಈ ಅರ್ಜಿಯಲ್ಲಿ ನಿವೃತ್ತ ನ್ಯಾಯಾಧೀಶರು ಬರೆದಿರುವ ಈ ಬ್ಲಾಗ್ ಬರಹದಲ್ಲಿ ಮಹಾತ್ಮ ಗಾಂಧಿ ಅವರ ಬಗ್ಗೆ ನೀಡಿರುವ ಹೇಳಿಕೆಗಳು ಅಘಾತಕಾರಿಯಾಗಿವೆ ಮತ್ತು ನಿಂದನೀಯ ಹಾಗು ಇದು ನ್ಯಾಯಧೀಶರು ಸಾಮಾಜಿಕ ಹಾಗು ಸಾಂವಿಧಾನಿಕ ಮೌಲ್ಯಗಳನ್ನು ಗೌರವಿಸುವುದಿಲ್ಲ ಎಂಬುದನ್ನು ತಿಳಿಸುತ್ತದೆ ಎಂದಿದ್ದಾರೆ.
"ನ್ಯಾಯಯುತವಾದ ಟೀಕೆಗೆ ಎಲ್ಲ ನಾಗರಿಕರಿಗೂ ಅವಕಾಶವಿದೆ ಆದರೆ ಸಾರ್ವಜನಿಕ ಹಿತಾಸಕ್ತಿಯನ್ನು ಮೀರಿ ವೈಯಕ್ತಿಕ ಹಿತಾಸಕ್ತಿಯಿಂದ ನೀಡುವ ಹೇಳಿಕೆಗಳು ಕೆಸರೆರಚುವಂತಹವೆ ಇರುತ್ತವೆ" ಎಂದಿರುವ ಮಣಿಯನ್ "ಕಾಟ್ಜು ಅವರು ಈ ಕೀಳುಮಟ್ಟದ ಹೇಳಿಕೆಗಳನ್ನು ದುರುದ್ದೇಶದಿಂದ ನೀಡಿದ್ದಾರೆ ಮತ್ತು ಇದು ಸಾಮಾನ್ಯವಾಗಿ ಕಾನೂನಿನ ಬಗ್ಗೆ ಹಾಗೂ ಇತರರ ಹಕ್ಕುಗಳ ಬಗ್ಗೆ ಅವರಿಗಿರುವ ಅಗೌರವದ ಮನೋಭಾವವನ್ನು ತೋರಿಸುತ್ತದೆ" ಎಂದಿದ್ದಾರೆ.
ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾದ ಅಧ್ಯಕ್ಷರೂ ಆಗಿದ್ದ ಅವರಿಗೆ ಬ್ಲಾಗ್ ಮತ್ತು ಸಾಮಾಜಿಕ ಜಾಲತಾಣಗಳ ಪರಿಣಾಮದ ಅರಿವು ಬಹಳ ಚೆನ್ನಾಗಿದೆ. ಆದುದರಿಂದ ಅವರ ವಿರುದ್ದ ಕ್ರಮ ಕೈಗೊಳ್ಳುವಂತೆ ಎಗ್ಮೋರ್ ನ ಮೆಟ್ರೋಪಾಲಿಟನ್ ಮೆಜೆಸ್ಟ್ರೇಟ್ ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ.
Advertisement