ಶ್ರೀಲಂಕಾದಲ್ಲಿ ಸುಮಾರು ೩೦ ಶಾಲಾ ಮಕ್ಕಳಿಗೆ ವಿಷ; ಅಸ್ವಸ್ಥ

ಉತ್ತರ ಶ್ರೀಲಂಕಾದ ಜಾಫ್ನಾದಲ್ಲಿ ನೀರಿನ ಟ್ಯಾಂಕಿನಿಂದ ನೀರು ಕುಡಿದು ಸುಮಾರು ೩೦ ವಿದ್ಯಾರ್ಥಿಗಳು ಅಸ್ವಸ್ಥಗೊಂಡು
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಕೊಲೊಂಬೋ: ಉತ್ತರ ಶ್ರೀಲಂಕಾದ ಜಾಫ್ನಾದಲ್ಲಿ ನೀರಿನ ಟ್ಯಾಂಕಿನಿಂದ ನೀರು ಕುಡಿದು ಸುಮಾರು ೩೦ ವಿದ್ಯಾರ್ಥಿಗಳು ಅಸ್ವಸ್ಥಗೊಂಡು ಆಸ್ಪತ್ರೆ ಸೇರಿರುವ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ನಂತರ ವಿಷಪೂರಿತ ಬಾಟಲ್ ಗಳು ಕಂಡುಬಂದಿವೆ ಎಂದು ಅವರು ತಿಳಿಸಿದ್ದಾರೆ.

ಪೊಲೀಸರ ಪ್ರಕಾರ ಸುಮಾರು ೨೭ ಮಕ್ಕಳನ್ನು ಶಾಲಾ ಅಧಿಕಾರಗಳು ಹತ್ತಿರದ ಆಸ್ಪತ್ರೆಗೆ ಸೇರಿಸಿದ್ದಾರೆ ಎಂದಿದ್ದಾರೆ. ನಂತರ ಆ ನೀರಿನ ಟ್ಯಾಂಕ್ ಹತ್ತಿರ ಎರಡು ವಿಷಪೂರಿತ ಬಾಟಲ್ ಗಳು ಕಂಡುಬಂದವು ಎಂದು ಪೊಲೀಸರು ತಿಳಿಸಿದ್ದಾರೆ.

ದಶಕಗಳಿಂದ ಜಾಫ್ನಾ ತಮಿಳು ಪ್ರತ್ಯೇಕವಾದಿ ಗುಂಪಿನ ಪ್ರಚಾರಕ್ಕೆ ತಾಣವಾಗಿದ್ದು, ೨೦೦೯ರಲ್ಲಿ ಶ್ರೀಲಂಕಾ ಸೇನೆ ಯುದ್ಧದಲ್ಲಿ ಇವರನ್ನು ಮೂಲೆಗುಂಪು ಮಾಡಿತ್ತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com