ಶ್ರೀನಗರ-ಜಮ್ಮು ಹೈವೇ ಮೂರು ದಿನದ ನಂತರ ಏಕಮಾರ್ಗಕ್ಕೆ ತೆರವು

ಶ್ರೀನಗರ-ಜಮ್ಮು ರಾಷ್ಟ್ರೀಯ ಹೆದ್ದಾರಿ ಇಂದು ಏಕಮಾರ್ಗ ಚಾಲನೆಗೆ ತೆರವುಗೊಂಡಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಶ್ರೀನಗರ: ಶ್ರೀನಗರ-ಜಮ್ಮು ರಾಷ್ಟ್ರೀಯ ಹೆದ್ದಾರಿ ಇಂದು ಏಕಮಾರ್ಗ ಚಾಲನೆಗೆ ತೆರವುಗೊಂಡಿದೆ. ಭಾರಿ ಮಳೆ ಮತ್ತು ಭೂಕುಸಿತಗಳಿಂದ ಕಳೆದ ಮೂರು ದಿನಗಳಿಂದ ರಸ್ತೆಯನ್ನು ಓಡಾಟಕ್ಕೆ ಸ್ಥಗಿತಗೊಳಿಸಲಾಗಿತ್ತು.

"ಲಘು ಮೋಟಾರ್ ವಾಹನಗಳಿಗೆ ಇಂದು ಏಕಮಾರ್ಗವಾಗಿ ರಸ್ತೆಯನ್ನು ತೆರವುಗೊಳಿಸಲಾಗಿದೆ. ಜಮ್ಮುವಿನಿಂದ ಶ್ರೀನಗರದ ಕಡೆಗೆ ವಾಹನಗಳು ಚಲಿಸಬಹುದಾಗಿದೆ" ಎಂದು ಸಂಚಾರಿ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಆದರೆ ಇದರ ವಿರುದ್ಧ ದಿಕ್ಕಿನಲ್ಲಿ ಯಾವುದೇ ವಾಹನ ಚಲಿಸುವಂತಿಲ್ಲ ಎಂದು ಅಧಿಕಾರಿ ತಿಳಿಸಿದ್ದಾರೆ.

ಎಲ್ಲ ಕಾಲಗಳಿಗೂ ಕಾಶ್ಮೀರ ಮತ್ತು ದೇಶದ ಉಳಿದ ಭಾಗಗಳನ್ನು ಸಂಪರ್ಕಿಸಲು ಇರುವ ಒಂದೆ ಮಾರ್ಗ ಈ ೩೦೦ ಕಿಮೀ ಹೆದ್ದಾರಿ. ಕಣಿವೆಗೆ ಅಗತ್ಯ ವಸ್ತುಗಳ ಸರಕನ್ನು ಹೊತ್ತಿರುವ ಸುಮಾರು ೨೦೦೦ ವಾಹನಗಳು ರಸ್ತೆಯಲ್ಲಿ ಸ್ಥಗಿತಗೊಂಡಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com