ಪಾಕಿಸ್ತಾನ ರಾಷ್ಟೀಯ ದಿನ ಸಮಾರಂಭದಲ್ಲಿ ಭಾಗಿಯಾಗಲಿರುವ ಹುರಿಯತ್ ಅಧ್ಯಕ್ಷ

ಜಮ್ಮು ಕಾಶ್ಮೀರದ ಪ್ರತ್ಯೇಕವಾದಿ ಸಂಘಟನೆ ಹುರಿಯತ್ ಕಾನ್ಫರೆನ್ಸ್ ಅಧ್ಯಕ್ಷ ಮಿರ್ವೈಜ್ ಉಮರ್ ಫಾರುಕ್ ಒಳಗೊಂಡಂತೆ ಏಳು ಜನ ಪ್ರತ್ಯೇಕವಾದಿಗಳು
ಮಿರ್ವೈಜ್ ಉಮರ್ ಫಾರುಕ್
ಮಿರ್ವೈಜ್ ಉಮರ್ ಫಾರುಕ್

ನವದೆಹಲಿ: ಜಮ್ಮು ಕಾಶ್ಮೀರದ ಪ್ರತ್ಯೇಕವಾದಿ ಸಂಘಟನೆ ಹುರಿಯತ್ ಕಾನ್ಫರೆನ್ಸ್ ಅಧ್ಯಕ್ಷ ಮಿರ್ವೈಜ್ ಉಮರ್ ಫಾರುಕ್ ಒಳಗೊಂಡಂತೆ ಏಳು ಜನ ಪ್ರತ್ಯೇಕವಾದಿಗಳು ಸೋಮವಾರ ದೆಹಲಿಯ ಪಾಕಿಸ್ತಾನಿ ರಾಯಭಾರಿ ಕಚೇರಿಯಲ್ಲಿ ನಡೆಯಲಿರುವ ಪಾಕಿಸ್ತಾನ ರಾಷ್ಟ್ರೀಯ ದಿನ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ.

ಪಾಕಿಸ್ತಾನದ ರಾಯಭಾರಿ ಅಬ್ದುಲ್ ಬಸಿತ್ ಅವರನ್ನು ಭೇಟಿ ಮಾಡಿರುವ ಫಾರುಕ್, ಪಾಕಿಸ್ತಾನ ಮತ್ತು ಭಾರತದ ನಡುವಿನ ಮಾತುಕತೆಯ ವಿವರಗಳನ್ನು ತಿಳಿದುಕೊಂಡದ್ದಲ್ಲದೆ, ಕಾಶ್ಮೀರದ ಪರಿಸ್ಥಿತಿಯನ್ನು ರಾಯಭಾರಿಗಳಿಗೆ ವಿವರಿಸಿದ್ದಾರೆ ಎಂದು ತಿಳಿದುಬಂದಿದೆ.

"ಭೇಟಿ ಫಲಪ್ರದವಾಗಿತ್ತು, ಎರಡೂ ರಾಷ್ಟ್ರಗಳ ನಡುವಿನ ಬಾಂಧವ್ಯದ ಬಗ್ಗೆ ಚರ್ಚಿಸಿದೆವು" ಎಂದು ಹುರಿಯತ್ ಕಾನ್ಫರೆನ್ಸ್ ನ ಅಧ್ಯಕ್ಷ ತಿಳಿಸಿದ್ದಾರೆ,

ಈ ಘಟನೆಯ ಮಹತ್ವವನ್ನು ಅಲ್ಲಗೆಳೆದ ಗೃಹ ಮಂತ್ರಿ ರಾಜನಾಥ್ ಸಿಂಗ್, ತನ್ನ ರಾಷ್ಟ್ರೀಯ ದಿನಾಚರಣೆಗೆ ಪಾಕಿಸ್ತಾನ ಯಾರನ್ನು ಬೇಕಾದರೂ ಆಹ್ವಾನಿಸಬಹುದು ಎಂದಿದ್ದಾರೆ.

ಫಾರುಕ್ ಅಲ್ಲದೆ ಅಬ್ದುಲ್ ಘನಿ ಭಟ್, ಮೌಲಾನ ಅಬ್ಬಾಸ್ ಅನ್ಸಾರಿ, ಬಿಲಾಲ್ ಘನಿ ಲೋನ್, ಆಗ ಸಯ್ಯದ್ ಹಸ್ಸನ್, ಮುಸ್ಸಾದಿಕ್ ಆದಿಲ್ ಮತ್ತು ಮುಕ್ತರ್ ಅಹ್ಮದ ವಾಜಾ ಇವರುಗಳು ಕೂಡ ಸಂಭ್ರಮಗಳಲ್ಲಿ ಭಾಗವಹಿಸಲಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com