
ನವದೆಹಲಿ: ಸಿಂಗಪುರದ ಸಂಸ್ಥಾಪಕ ಪಿತಾಮಹ ಹಾಗೂ ಮೊದಲ ಪ್ರಧಾನಿ ಲೀ ಕೌನ್ ಯೂ ಅವರು ಅಗಲಿಕೆಗೆ ಭಾರತದ ಪ್ರಧಾನಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದಾರೆ ಹಾಗೂ ಲೀ ಅವರು ನಾಯಕರ ನಡುವಿನ ಸಿಂಹ ಎಂದು ಬಣ್ಣಿಸಿದ್ದಾರೆ.
"ದೂರದೃಷ್ಟಿಯಿದ್ದ ಮಹಾನಾಯಕ ಮತ್ತು ನಾಯಕರ ನಡುವಿನ ಸಿಂಹ, ಮಿ. ಲೀ ಕೌನ್ ಯೂ ಅವರ ಜೀವನ ಎಲ್ಲರಿಗೂ ಪಾಠವಾಗಬಲ್ಲದು. ಅವರ ಸಾವಿನ ಸುದ್ದಿ ಅತೀವ ದುಃಖ ತಂದಿದೆ" ಎಂದು ಅವರು ನೀಡಿರುವ ಹೇಳಿಕೆಯಲ್ಲಿ ತಿಳಿಸಿದ್ದಾರೆ.
"ಈ ಶೋಕಾಚರಣೆಯ ಸಂದರ್ಭದಲ್ಲಿ, ಲೀ ಅವರ ಕುಟುಂಬ ಮತ್ತು ಸಿಂಗಪುರದ ಜನತೆಯ ಜೊತೆಗೆ ಪ್ರಾರ್ಥನೆ ಸಲ್ಲಿಸುತ್ತೇನೆ. ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ" ಎಂದು ಪ್ರಧಾನಿ ಮೋದಿ ತಿಳಿಸಿದ್ದಾರೆ. ಲೀ ಅವರು ತೀವ್ರ ನ್ಯುಮೋನಿಯಾ ಖಾಯಿಲೆಯಿಂದ ಬಳಲಿ ಮೃತಪಟ್ಟಿದ್ದಾರೆ.
Advertisement