ತಂಬಾಕು ನಿಷೇಧ ಕಾಯ್ದೆ ಪಾಲಿಸದಿದ್ದರೆ ಜಾಮೀನು ರಹಿತ 10 ವರ್ಷ ಜೈಲು ಶಿಕ್ಷೆ

ಸಿಗರೇಟ್ ಮತ್ತು ಇತರೆ ತಂಬಾಕು ಉತ್ಪನ್ನಗಳ ಮಾರಾಟಗಳನ್ನು ನಿಷೇಧಿಸಿರುವ ಮಹಾರಾಷ್ಟ್ರ ಇದೀಗ ಕಾಯ್ದೆ ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಿದ್ದು, ತಂಬಾಕು ಮಾರಾಟಗಾರರಿಗೆ 10 ವರ್ಷ ಜಾಮೀನು ರಹಿತ ಜೈಲು ಶಿಕ್ಷೆ ನೀಡಲು ಮುಂದಾಗಿದೆ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ಸಿಗರೇಟ್ ಮತ್ತು ಇತರೆ ತಂಬಾಕು ಉತ್ಪನ್ನಗಳ ಮಾರಾಟಗಳನ್ನು ನಿಷೇಧಿಸಿರುವ ಮಹಾರಾಷ್ಟ್ರ ಇದೀಗ ಕಾಯ್ದೆ ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಿದ್ದು, ತಂಬಾಕು ಮಾರಾಟಗಾರರಿಗೆ 10 ವರ್ಷ ಜಾಮೀನು ರಹಿತ ಜೈಲು ಶಿಕ್ಷೆ ನೀಡಲು ಮುಂದಾಗಿದೆ.

ಮಹಾರಾಷ್ಟ್ರದಲ್ಲಿ ತಂಬಾಕು ಮಾರಾಟವನ್ನು ನಿಷೇಧಗೊಳಿಸಿದ್ದರೂ ಅನಧಿಕೃತವಾಗಿ ತಂಬಾಕು ಮಾರಾಟಗಳು ಎಗ್ಗಿಲ್ಲದೇ ನಡೆಯುತ್ತಿರುವುದರ ಕುರಿತು ಅಧಿವೇಶನದಲ್ಲಿ ಮಾತನಾಡಿದ ಕಾಂಗ್ರೆಸ್ ನಾಯಕ ಮಹಮ್ಮದ್ ಆರಿಫ್ ನಸೀಮ್ ಖಾನ್ ಅವರು, ತಂಬಾಕು ನಿಷೇಧವಾಗಿದೆ ಎಂದು ಯಾರು ಹೇಳಿದ್ದು, ಪ್ರತ್ಯಕ್ಷವಾಗಿ ತಂಬಾಕು ಮಾರಾಟ ಮಾಡುತ್ತಿರುವವರನ್ನು ವಿಧಾನಭವನದ ಎದುರೇ ಕಾಣಬಹುದು ಎಂದು ಹೇಳಿದರು.

ಇದಕ್ಕುತ್ತರಿಸಿದ ಬಿಜೆಪಿ ನಾಯಕ ಮಂಗಲ್ ಪ್ರಬಾತ್ ಅವರು ತಂಬಾಕು ಮಾರಾಟಕ್ಕೆ ಪ್ರತ್ಯೇಕವಾದ ಪರವಾನಗಿ ಎಂದು ಎಲ್ಲೂ ಇಲ್ಲ. ಸರ್ಕಾರ ಮಾರಾಟ ಮಾಡುವ ಅಂಗಡಿಗಳ ಪರವಾನಗಿಯನ್ನೇ ರದ್ದುಗೊಳಿಸುವ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.

ನಂತರ ಮಾತನಾಡಿದ ಮಹಾರಾಷ್ಟ್ರ ಆಹಾರ ಮತ್ತು ಔಷಧಿ ಸಚಿವ ಗಿರೀಶ್ ಬಪತ್ ಅವರು.ಈಗಾಗಲೇ 72 ಸಾವಿರ ಅಂಗಡಿಗಳಲ್ಲಿ 32 ಕೋಟಿ ತಂಬಾಕು ಪದಾರ್ಥಗಳನ್ನು ಸರ್ಕಾರ ವಶಪಡಿಸಿಕೊಂಡಿದೆ. 1,538 ಪ್ರಕರಣಗಳ ವಿಚಾರಣೆ ಇಂದಿಗೂ ನ್ಯಾಯಾಲಯದ ಆವರಣದಲ್ಲಿದೆ. ಅನಧಿಕೃತ ಮಾರಾಟದ ಕುರಿತಂತೆ ದೂರು ನೀಡಲು ಸಾರ್ವಜನಿಕರಿಗಾಗಿ ಆಹಾರ ಮತ್ತು ಔಷಧ ಆಡಳಿತ ಮಂಡಳಿಯು ಟೋಲ್ ಫ್ರೀ ನಂಬರ್ ಸಹ ನೀಡಿದೆ. ತಂಬಾಕು ನಿಷೇಧ ಕುರಿತಂತೆ ಕಾನೂನನ್ನು ಮತ್ತಷ್ಟು ಬಲ ಪಡಿಸುವಂತೆ ಕಾನೂನು ಮತ್ತು ನ್ಯಾಯಾಂಗ ಇಲಾಖೆಗೂ ಸಲಹೆ ನೀಡಲಾಗಿದೆ.

ನಿಷೇಧ ಹೇರಿದ್ದರೂ ಅನಧಿಕೃತವಾಗಿ ಮಾರಾಟ ಮಾರುವವರ ವಿರುದ್ಧ ಐಪಿಸಿ ಸೆಕ್ಷನ್ 328 ರ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಬಂಧಿಸುವಂತೆ ಪೊಲೀಸರಿಗೆ ಸೂಚನೆ ನೀಡಲಾಗಿದೆ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com