ತಮಿಳುನಾಡಿನಲ್ಲಿ ಬಿಜೆಪಿ ಯಾರಿಗೂ ತಿಳಿಯದ ಪಕ್ಷ: ಖುಷ್ಬೂ

ಕಾಂಗ್ರೆಸ್ ಪಕ್ಷದ ರಾಷ್ಟೀಯ ವಕ್ತಾರರಾಗಿ ನೇಮಕಗೊಂಡಿರುವ ನಂತರ ನಟಿಯಿಂದ ರಾಜಕಾರಣಿಯಾಗಿರುವ ಖುಷ್ಬೂ ಬುಧವಾರ ಬಿಜೆಪಿ ವಿರುದ್ಧ ಹರಿಹಾಯ್ದು,
ಖುಷ್ಬೂ
ಖುಷ್ಬೂ

ಚೆನ್ನೈ: ಕಾಂಗ್ರೆಸ್ ಪಕ್ಷದ ರಾಷ್ಟೀಯ ವಕ್ತಾರರಾಗಿ ನೇಮಕಗೊಂಡಿರುವ ನಂತರ ನಟಿಯಿಂದ ರಾಜಕಾರಣಿಯಾಗಿರುವ ಖುಷ್ಬೂ ಬುಧವಾರ ಬಿಜೆಪಿ ವಿರುದ್ಧ ಹರಿಹಾಯ್ದು, ಕೆಲವು ಪ್ರದೇಶಗಳನ್ನು ಹೊರತುಪಡಿಸಿದರೆ ಈ ಕೇಸರಿ ಪಕ್ಷದ ಬಗ್ಗೆ ತಮಿಳುನಾಡಿನಲ್ಲಿ ಯಾರಿಗೂ ತಿಳಿದಿಲ್ಲ ಎಂದಿದ್ದಾರೆ.

"ಇತ್ತೀಚಿಗೆ ನಡೆದ ಉಪಚುನಾವಣೆಗಳಿಂದ(ಶ್ರೀರಂಗಂ) ತಿಳಿಯುತ್ತದೆ ರಾಜ್ಯದಲ್ಲಿ ಆ ಪಕ್ಷದ ಅಸ್ತಿತ್ವ. ಚೆನ್ನೈ, ಕನ್ಯಾಕುಮಾರಿ ಮತ್ತು ಕೊಯಂಬತ್ತೂರು ಹೊರತುಪಡಿಸಿದರೆ ಅ ಪಕ್ಷದ ಬಗ್ಗೆ ಯಾರಿಗೂ ತಿಳಿದಿಲ್ಲ" ಎಂದು ತಮ್ಮ ಮೊದಲ ಅಧಿಕೃತ ಪತ್ರಿಕಾವರದಿಯಲ್ಲಿ ತಿಳಿಸಿದ್ದಾರೆ. ಚುನಾವಣಾ ಪ್ರಚಾರ ವೇಳೆ ನೀಡಿದ್ದ ಪ್ರಮಾಣವಚನವನ್ನು ಪೂರೈಸಲು ಮೋದಿ ಸರ್ಕಾರ ವಿಫಲವಾಗಿದೆ, ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಒಂದು ಕಾರ್ಖಾನೆ ಕೂಡ ಸ್ಥಾಪನೆಯಾಗಿಲ್ಲ, ಹಾಗೂ ದೆಹಲಿ ಚುನಾವಾಣಾ ಫಲಿತಾಂಶ ಮೋದಿ ಅಲೆ ಕೊನೆಗೊಂಡಿರುವುದನ್ನು ತೋರಿಸುತ್ತದೆ ಎಂದಿದ್ದಾರೆ.

ಎಐಡಿಎಂಕೆ ಪಕ್ಷವನ್ನು ಹಲವು ಸ್ಥರಗಳಲ್ಲಿ ಟೀಕಿಸಿರುವ ಖುಷ್ಬೂ ತಮ್ಮ ಹಿಂದಿನ ಪಕ್ಷ ಡಿಎಂಕೆ ಬಗ್ಗೆ ಮಾತನಾಡುವುದರಿಂದ ದೂರ ಉಳಿದಿದ್ದಾರೆ. ಕಾಂಗ್ರೆಸ್ ಮತ್ತು ಡಿಎಂಕೆ ಪಕ್ಷದ ನಡುವಿನ ಭಿನ್ನಾಭಿಪ್ರಾಯಗಳ ಬಗ್ಗೆ ಪ್ರಶ್ನಿಸಿದಾಗ "ನನಗೆ ಕೆಸರೆರಚಾಟದಲ್ಲಿ ಭಾಗಿಯಾಗುವುದಕ್ಕೆ ಇಷ್ಟವಿಲ್ಲ. ನಾನು ಆ ಪಕ್ಷವನ್ನು ತೊರೆದಿದ್ದಕ್ಕೆ ಕಾರಣಗಳನ್ನು ನೀಡಿದ್ದೇನೆ. ಅವುಗಳನ್ನು ಮತ್ತೆ ಹೇಳುವುದಿಲ್ಲ. ಆದರೆ ಡಾ. ಕಲೈಗ್ನರ್ (ಕರುಣಾನಿಧಿ) ಬಗೆಗೆ ಅಪಾರ ಪ್ರೀತಿ ಗೌರವ ಇದೆ" ಎಂದಿದ್ದಾರೆ ಖುಷ್ಬೂ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com