ತಮಿಳರಿಗೆ ಜಾಗ ಹಿಂದಿರುಗಿಸಲು ಮುಂದಾದ ಲಂಕಾ

ಪೂರ್ವ ಪ್ರಾಂತ್ಯದ ಸಂಪುರದಲ್ಲಿ ತಮಿಳು ರೈತರಿಗೆ ೧೦೫೨ ಎಕರೆ ಜಮೀನನ್ನು ಹಿಂದಿರುಗಿಸಲು ಮೈತ್ರಿಪಾಲ ಸಿರಿಸೇನ ಅವರ ಸರ್ಕಾರ
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಕೊಲೊಂಬೋ: ಪೂರ್ವ ಪ್ರಾಂತ್ಯದ ಸಂಪುರದಲ್ಲಿ ತಮಿಳು ರೈತರಿಗೆ ೧೦೫೨ ಎಕರೆ ಜಮೀನನ್ನು ಹಿಂದಿರುಗಿಸಲು ಮೈತ್ರಿಪಾಲ ಸಿರಿಸೇನ ಅವರ ಸರ್ಕಾರ ಚಾಲನೆ ನಿಡಿದೆ. ಏಪ್ರಿಲ್ ಕೊನೆಯ ವಾರದ ವೇಳೆಗೆ ಈ ಯೋಜನೆ ಪೂರ್ಣಗೊಳ್ಳಲಿದ್ದು ಇದು ತಮಿಳು ಹೊಸ ವರ್ಷದ ಕೊಡುಗೆಯಾಗಲಿದೆ. ಈ ೧೦೫೨ ಎಕರೆಗಳಲ್ಲಿ ಶ್ರೀಲಂಕಾ ನೌಕಾದಳ ಹೊಂದಿರುವ ೨೩೪ ಎಕರೆ ಕೂಡ ಸೇರಿಕೊಂಡಿದೆ.

ಆಗಸ್ಟ್ ೨೦೦೬ ರಲ್ಲಿ ತಮಿಳು ಸ್ವಾತಂತ್ರ್ಯ ಹೋರಾಟಗಾರರ ಜೊತೆ ನಡೆದ ಯುದ್ಧದ ವೇಳೆಯಲ್ಲಿ ಈ ಜಾಗವನ್ನು ಶ್ರೀಲಂಕಾ ಸೇನೆ ವಶಪಡಿಸಿಕೊಂಡಿತ್ತು.

ಎಲ್ ಟಿ ಟಿ ಇ ವಿರುದ್ಧದ ಈ ಯುದ್ಧದಲ್ಲಿ ಶ್ರೀಲಂಕಾ ಸೇನೆ ವೈಮಾನಿಕ ದಾಳಿ ನಡೆಸಿತ್ತು. ಈ ವೇಳೆಯಲ್ಲಿ ೮೨೫ ಕುಟುಂಬಗಳು ಸಂಪುರದಿಂದ ಓಡಿ ಹೋಗಿದ್ದವು. ೨೦೦೭ ರಲ್ಲಿ ಈ ಯುದ್ಧ ಮುಗಿದ ನಂತರವೂ ತಮ್ಮ ಜಮೀನನ್ನು ವಾಪಸ್ ಪಡೆಯಲು ಈ ಕುಟುಂಬಗಳು ವಿಫಲವಾಗಿದ್ದವು. ಇದು ಏಕೆಂದರೆ ಸಂಪುರ್ ಅನ್ನು ಅತಿ ಹೆಚ್ಚಿನ ಭದ್ರತಾ ಪ್ರದೇಶ ಎಂದು ಘೋಷಿಸಲಾಗಿತ್ತು. ಇದು ತ್ರಿಂಕೊಮಾಲೇ ನೌಕಾ ಯಾನದ ಎದುರಿಗೇ ಇದ್ದ ಪ್ರದೇಶವಾಗಿತ್ತು.

ಸಂಪುರದಿಂದ ಓಡಿಹೋಗಿದ್ದ ಕುಟುಂಬ ಸದಸ್ಯರನ್ನು ನಿರಾಶ್ರಿತರ ಶಿಬಿರದಲ್ಲಿ  ಇರಿಸಲಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com