ದೀಪಾವಳಿ ಅಂಚೆಚೀಟಿಗೆ ಅಮೇರಿಕಾ ಸೆನೆಟ್ ನಲ್ಲಿ ಮಸೂದೆ ಮಂಡನೆ

ದೀಪಾವಳಿ ಹಬ್ಬದ ಸಂಭ್ರಮಾಚರಣೆಗೆ ಅಮೇರಿಕಾ ಅಂಚೆ ಸೇವೆ, ಸ್ಮಾರಕ ಅಂಚೆ ಚೀಟಿ ಬಿಡುಗಡೆ ಮಾಡಲು ಇಬ್ಬರು ಪ್ರಬಲ ಅಮೇರಿಕಾ ಕಾನೂನು ಸಲಹೆಗಾರರು,
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ವಾಶಿಂಗ್ಟನ್: ದೀಪಾವಳಿ ಹಬ್ಬದ ಸಂಭ್ರಮಾಚರಣೆಗೆ ಅಮೇರಿಕಾ ಅಂಚೆ ಸೇವೆ, ಸ್ಮಾರಕ ಅಂಚೆ ಚೀಟಿ ಬಿಡುಗಡೆ ಮಾಡಲು ಇಬ್ಬರು ಪ್ರಬಲ ಅಮೇರಿಕಾ ಕಾನೂನು ಸಲಹೆಗಾರರು, ಅಮೇರಿಕಾ ಸೆನೆಟ್ ನಲ್ಲಿ ಮಸೂದೆ ಮಂಡಿಸಿದ್ದಾರೆ. "ಮೂರು ದಶಲಕ್ಷಕ್ಕೂ ಹೆಚ್ಚಿರುವ ಭಾರತೀಯ ಅಮೇರಿಕನ್ನರಿಗೂ ಹಾಗೂ ಒಂದು ಬಿಲಿಯನ್ ಜಾಗತಿಕ ಭಾರತೀಯರಿಗೂ ಈ ಸ್ಮಾರಕ ಅಂಚೆಚೀಟಿ ಪ್ರಮುಖ ಗೌರವವಾಗಲಿದೆ" ಎಂದಿರುವ ಸೆನೆಟರ್ ಮಾರ್ಕ್ ವಾರ್ನರ್, ಸೆನೆಟರ್ ಜಾನ್ ಕಾರ್ನಿನ್ ಜೊತೆಗೆ ಮಸೂದೆಯನ್ನು ಮಂಡಿಸಿದ್ದಾರೆ.

"ದೀಪಾವಳಿಯ ನೆನಪಿನ ಅಂಚೆಚೀಟಿ, ಟೆಕ್ಸಾಸ್ ಮತ್ತು ಅಮೆರಿಕದಾದ್ಯಂತ ನೆಲೆಸಿರುವ ಭಾರತೀಯ ಅಮೆರಿಕನ್ನರು ಆಚರಿಸುವ ದೀಪಾವಳಿ ಹಬ್ಬಕ್ಕೆ ನೀಡುವ ಅರ್ಥಪೂರ್ಣ ಗೌರವ" ಎಂದಿದ್ದಾರೆ ಕಾರ್ನಿನ್.

ಅಮೇರಿಕಾ ಅಂಚೆ ಸೇವೆ ಇಂತಹ ಸ್ಮಾರಕ ಅಂಚೆ ಚೀಟಿಗಳನ್ನು ಕ್ರಿಸ್ಮಸ್, ಈದ್, ಕ್ವಾನ್ಜಾ ಮತ್ತು ಹನ್ನುಕಃ ಧಾರ್ಮಿಕ ಹಬ್ಬಗಳಿಗೆ ಬಿಡುಗಡೆ ಮಾಡಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com