ಸೃಷ್ಠಿಕರ್ತ ಗುರುಮೂರ್ತಿ ಸಂಸ್ಥೆಗೆ ಬೀಗ ಜಡಿದ ಸರ್ಕಾರ

ಕೆ.ಟಿ ಗುರುಮೂರ್ತಿ
ಕೆ.ಟಿ ಗುರುಮೂರ್ತಿ

ಬೆಂಗಳೂರು: ಸಂತಾನಹೀನತೆಯಿಂದ ಬಳಲುತ್ತಿರುವವರಿಗೆ ಸಂತಾನ ಭಾಗ್ಯ ಕಲ್ಪಿಸುವುದಾಗಿ ನಂಬಿಸಿ ಲಕ್ಷಾಂತರ ರುಪಾಯಿ ಪಡೆದು ವಂಚಿಸುತ್ತಿದ್ದ ಸೃಷ್ಠಿ ಗ್ಲೋಬಲ್ ಟ್ರಸ್ಟ್ ಮುಖ್ಯಸ್ಥ ಕೆ.ಟಿ ಗುರುಮೂರ್ತಿ ವಿರುದ್ಧ ಕೊನೆಗೂ ರಾಜ್ಯ ಸರ್ಕಾರ ಕ್ರಮ ತೆಗೆದುಕೊಂಡಿದೆ.

ಬೆಂಗಳೂರು ನಗರ ಜಿಲ್ಲಾ ಆರೋಗ್ಯಾಧಿಕಾರಿ ಡಾ.ರಜನಿ ಆದೇಶದಂತೆ ಶುಕ್ರವಾರ ಸೃಷ್ಠಿ ಗ್ಲೋಬಲ್ ಸಂಸ್ಥೆಗೆ ಅಧಿಕೃತವಾಗಿ ಬೀಗ ಹಾಕಿದ್ದಾರೆ.

ವಂಚನೆಗೊಳಗಾದ
20ಕ್ಕೂ ಹೆಚ್ಚು ಮಂದಿ ಗುರುಮೂರ್ತಿ ವಿರುದ್ಧ ದೂರು ದಾಖಲಿಸಿದ್ದರು.
ಬಸವೇಶ್ವರ ನಗರದಲ್ಲಿರುವ ಸೃಷ್ಠಿ ಗ್ಲೋಬಲ್ ಮೆಡಿಕೇರ್ ಸಂಸ್ಥೆ ಬಂಜೆತನ ನಿವಾರಣೆ ಮಾಡುವುದಾಗಿ ಹೇಳಿ, ಸಾವಿರಾರು ಜನರಿಗೆ ವಂಚಿಸಿತ್ತು.

ಕೆ.ಟಿ.ಗುರುಮೂರ್ತಿಯ ಸೃಷ್ಠಿ ಗ್ಲೋಬಲ್ ಸಂಸ್ಥೆಯ ವಿರುದ್ಧದ ಆರೋಪದ ಬಗ್ಗೆ ಡಾ.ವೀರಭದ್ರಯ್ಯ ನೇತೃತ್ವದ ಸಮಿತಿ ತನಿಖೆ ನಡೆಸಿದಾಗ, ಸೃಷ್ಠಿಕರ್ತನ ವಂಚನೆ ಬಯಲಾಗಿತ್ತು.

ಪ್ರಕರಣ ಸಂಬಂಧ ಸಂಸ್ಥೆಯ ಸಂಸ್ಥಾಪಕ ಕೆ.ಟಿ.ಗುರುಮೂರ್ತಿ ಸೇರಿದಂತೆ ಹಲವರ ವಿರುದ್ದ ಸಿಟಿ ಕ್ರೈಂಬ್ರ್ಯಾಂಚ್ ಪೊಲೀಸರು ಕ್ರಿಮಿನಲ್ ಮೊಕದ್ದಮೆ ದಾಖಲಿಸಿದ್ದು, ಸದ್ಯಗುರುಮೂರ್ತಿ ನ್ಯಾಯಾಂಗ ಬಂಧನಲ್ಲಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com