ಎಲ್ ಟಿ ಟಿ ಇ ಮತ್ತೆ ಒಗ್ಗೂಡಬಹುದು ಎಂದು ಎಚ್ಚರಿಸಿದ ಲಂಕಾ ಸಚಿವ

ಯುದ್ಧದಲ್ಲಿ ಸೋತ ಆರು ವರ್ಷದ ನಂತರ ಈಗ ಎಲ್ ಟಿ ಟಿ ಇ ಮತ್ತೆ ಒಗ್ಗೂಡಿ, ಪ್ರತ್ಯೇಕ ತಮಿಳು ರಾಜ್ಯಕ್ಕಾಗಿ ಬೇಡಿಕೆಯಿಟ್ಟು ಮತ್ತೆ ಶ್ರೀಲಂಕಾ ವಿರುದ್ಧ
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಕೊಲೊಂಬೊ: ಯುದ್ಧದಲ್ಲಿ ಸೋತ ಆರು ವರ್ಷದ ನಂತರ ಈಗ ಎಲ್ ಟಿ ಟಿ ಇ ಮತ್ತೆ ಒಗ್ಗೂಡಿ, ಪ್ರತ್ಯೇಕ ತಮಿಳು ರಾಜ್ಯಕ್ಕಾಗಿ ಬೇಡಿಕೆಯಿಟ್ಟು ಮತ್ತೆ ಶ್ರೀಲಂಕಾ ವಿರುದ್ಧ ಯುದ್ಧ ಹೂಡುವ ಗಂಡಾಂತರ ಇದೆ ಎಂದು ಸೋಮವಾರ ಶ್ರೀಲಂಕಾ ಸರ್ಕಾರ ಎಚ್ಚರಿಸಿದೆ.

ಎಲ್ ಟಿ ಟಿ ಇ ಸಂಘಟನೆಯ ಕೆಲವು ಉಪ ಸಂಸ್ಥೆಗಳು ಈ ಕೃತ್ಯಕ್ಕಾಗಿ ಹಣ ಸಂಗ್ರಹಿಸಲು ವಿದೇಶದಲ್ಲಿ ವ್ಯವಾಹಾರ ನಡೆಸುತ್ತಿವೆ ಎಂದು ಉಪ ವಿದೇಶಾಂಗ ಸಚಿವ ಅಜಿತ್ ಪೆರೆರಾ ಹೇಳಿದ್ದಾರೆ.

"ಅವರ ಕೆಲವು ಸಹ ಸಂಘಟನೆಗಳು ಪೆಟ್ರೋಲ್ ಸ್ಟೇಶನ್ ಗಳು, ಸೂಪರ್ ಮಾರ್ಕೆಟ್ ಗಳು ಈ ರೀತಿಯಲ್ಲಿ ವಿದೇಶದಲ್ಲಿ ವ್ಯವಹಾರ ನಡೆಸುತ್ತಿವೆ ಮತ್ತು ಅವರು ಸಾಗಾಣೆ ಸಂಸ್ಥೆಗಳನ್ನು ಹೊಂದಿದ್ದಾರೆ" ಎಂದು ಪೆರೆರಾ ತಿಳಿಸಿದ್ದಾರೆ.

"ಅವರನ್ನು ನಮ್ಮ ನೆಲದ ಮೇಲೆ ಸೋಲಿಸಿದ್ದರು ನಿಜವಾದ ಅಪಾಯವೆಂದರೆ ಅವರು ಮತ್ತೆ ಒಗ್ಗೂಡಲು ಪ್ರಯತ್ನಿಸುತ್ತಿದ್ದಾರೆ" ಎಂದು ಅವರು ತಿಳಿಸಿದ್ದಾರೆ.

ಎಲ್ ಟಿ ಟಿ ಇ ಸಂಸ್ಥೆಯನ್ನು ಭಯೋತ್ಪಾದಕ ಸಂಘಟನೆಗಳ ಪಟ್ಟಿಗೆ ಸೇರಿಸುವಂತೆ ಯುರೋಪಿಯನ್ ಯೂನಿಯನ್ ಮೇಲೆ ಶ್ರೀಲಂಕಾ ಸರ್ಕಾರ ಒತ್ತಡ ಹೇರಿರುವ ಹಿನ್ನಲೆಯಲ್ಲಿ ಪೆರೆರಾ ಈ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com