ರಾಹುಲ್ ಗಾಂಧಿ
ರಾಹುಲ್ ಗಾಂಧಿ

ಭೂ ಸ್ವಾಧೀನ ಕಾಯ್ದೆಯ ವಿರುದ್ಧದ ಪ್ರತಿಭಟನೆಗೆ ಏಪ್ರಿಲ್ ೧೯ಕ್ಕೆ ಹಿಂದಿರುಗಲಿದ್ದಾರೆಯೇ ರಾಹುಲ್?

ರಾಜಕೀಯದಿಂದ ವಿರಾಮ ತೆಗೆದುಕೊಂಡಿರುವ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ, ಏಪ್ರಿಲ್ ೧೯ಕ್ಕೆ ನಡೆಯಲಿರುವ ಎನ್ ಡಿ ಎ ಸರ್ಕಾರದ ಭೂಕಾಯ್ದೆ

ನವದೆಹಲಿ: ರಾಜಕೀಯದಿಂದ ವಿರಾಮ ತೆಗೆದುಕೊಂಡಿರುವ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ, ಏಪ್ರಿಲ್ ೧೯ಕ್ಕೆ ನಡೆಯಲಿರುವ ಎನ್ ಡಿ ಎ ಸರ್ಕಾರದ ಭೂ ಸ್ವಾಧೀನ ಕಾಯ್ದೆ ಸುಗ್ರೀವಾಜ್ಞೆಯ ವಿರುದ್ಧದ ಕಾಂಗ್ರೆಸ್ ಪ್ರತಿಭಟನಾ ರ್ಯಾಲಿಯ ನೇತೃತ್ವ ವಹಿಸಲು ಹಿಂದಿರುಗಲಿದ್ದಾರೆ ಎನ್ನುತ್ತವೆ ಮೂಲಗಳು.

'ಮಹಾ ಕಿಸಾನ್ ರ್ಯಾಲಿ'ಯ ಬಗ್ಗೆ ಮಾತನಾಡಿದ ಕಾಂಗ್ರೆಸ್ ಮುಖಂಡ "ಇದರ ಪ್ರಮುಖ ಗುರಿ ಭೂ ಸ್ವಾಧೀನ ಸುಗ್ರೀವಾಜ್ಞೆ ವಿರುದ್ಧ ಪ್ರತಿಭಟಿಸುವುದು" ಎಂದಿದ್ದಾರೆ. ರಾಹುಲ್ ಈ ರ್ಯಾಲಿಯಲ್ಲಿ ಪಾಲ್ಗೊಳ್ಳುವರೆ ಎಂಬ ಪ್ರಶ್ನೆಗೆ "ಎಲ್ಲ ಹಿರಿಯ ನಾಯಕರೂ ಪಾಲ್ಗೊಳ್ಳಲಿದ್ದಾರೆ" ಎಂದು ಉತ್ತರಿಸಿದ್ದಾರೆ.

ಕಾಂಗ್ರೆಸ್ ನ ಸೋಲಿನ ಬಗ್ಗೆ ಆತ್ಮ ವಿಮರ್ಶೆಗಾಗಿ ರಾಹುಲ್ ಗಾಂಧಿ ರಾಜಕೀಯದಿಂದ ಕೆಲವು ದಿನಗಳ ಬಿಡುವು ತೆಗೆದುಕೊಂಡಿದ್ದಾರೆ ಎಂದು ಪಕ್ಷ ತಿಳಿಸಿತ್ತು. ಫೆಬ್ರವರಿ ೨೨ ರಿಂದ ರಜ ತೆಗೆದುಕೊಂಡಿದ್ದ ರಾಹುಲ್, ಬಜೆಟ್ ಅಧಿವೇಶನದಲ್ಲೂ ಭಾಗವಹಿಸಿರಲಿಲ್ಲ.

Related Stories

No stories found.

Advertisement

X
Kannada Prabha
www.kannadaprabha.com