ನೇಪಾಳದಲ್ಲಿ ಒಬ್ಬಳನ್ನು ಕೊಂದು ಒಂಬತ್ತು ಜನರನ್ನು ಗಾಯಗೊಳಿಸಿದ ರೈನೋ

ಮಧ್ಯ ನೇಪಾಳದ ಕಾರ್ಯನಿರತ ಮಾರುಕಟ್ಟೆಗೆ ದಾಳಿಯಿಟ್ಟ ಕಾಡು ಪ್ರಾಣಿ ರೈನೋಸರಸ್ ಒಂದು ೬೧ ವರ್ಷದ ಮುದುಕಿಯನ್ನು ಕೊಂದದ್ದಲ್ಲದೆ,
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಖಟ್ಮಂಡು: ಮಧ್ಯ ನೇಪಾಳದ ಕಾರ್ಯನಿರತ ಮಾರುಕಟ್ಟೆಗೆ ದಾಳಿಯಿಟ್ಟ ಕಾಡು ಪ್ರಾಣಿ ರೈನೋಸರಸ್ ಒಂದು ೬೧ ವರ್ಷದ ಮುದುಕಿಯನ್ನು ಕೊಂದದ್ದಲ್ಲದೆ, ೮ ಜನರನ್ನು ಸೋಮವಾರ ಗಾಯಗೊಳಿಸಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮುದುಕಿ ತೀವ್ರ ಗಾಯಗೊಂಡಿದ್ದರು. ಅವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದ ಹೊರತಾಗಿಯೂ ಮೃತಪಟ್ಟಿದ್ದಾರೆ ಎಂದು ಪೋಲಿಸ್ ಅಧಿಕಾರಿ ತಿಳಿಸಿದ್ದಾರೆ. ಈ ದಾಳಿಯಲ್ಲಿ ಹಸುವೊಂದು ಕೂಡ ಗಂಭೀರವಾಗಿ ಗಾಯಗೊಂಡಿದೆ.

ರೈನೋ ಮತ್ತು ಮಾನವರ ಸಂಘರ್ಷ ಸಾಮನ್ಯವಾಗಿ ವಿರಳ. ಆದರೆ ನೇಪಾಳದಲ್ಲಿ ಎಗ್ಗಿಲ್ಲದಂತೆ ನಡೆದಿರುವ ಅರಣ್ಯ ನಾಶ ಈ ಕಾಡುಪ್ರಾಣಿಗಳು ಗ್ರಾಮಗಳೊಳಗೆ ನುಗ್ಗುವಂತೆ ಮಾಡಿದೆ. ಈ ಭಾಗದಲ್ಲಿ ಅತಿ ಹೆಚ್ಚಾಗಿದ್ದ ಒಂದು ಕೊಂಬಿನ ರೈನೋಗಳು, ಅರಣ್ಯ ನಾಶ ಮತ್ತು ಬೇಟೆಯಿಂದ ಗಣನೀಯವಾಗಿ ಇಳಿಮುಖ ಕಂಡಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com