ಆಪ್ ಪಕ್ಷದ ಮುಖ್ಯ ವಕ್ತಾರನ ಸ್ಥಾನ ಕಳೆದುಕೊಳ್ಳಲಿರುವ ಯೋಗೇಂದ್ರ ಯಾದವ್?

ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ಶಿಸ್ತು ಸಮಿತಿಯಿಂದ ಪ್ರಶಾಂತ್ ಭೂಷಣ್ ಅವರನ್ನು ಉಚ್ಛಾಟಿಸಿದ ಮೇಲೆ ಈಗ ಯೋಗೇಂದ್ರ ಯಾದವ್ ಅವರು
ಯೋಗೇಂದ್ರ ಯಾದವ್
ಯೋಗೇಂದ್ರ ಯಾದವ್

ನವದೆಹಲಿ: ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ಶಿಸ್ತು ಸಮಿತಿಯಿಂದ ಪ್ರಶಾಂತ್ ಭೂಷಣ್ ಅವರನ್ನು ಉಚ್ಛಾಟಿಸಿದ ಮೇಲೆ ಈಗ ಯೋಗೇಂದ್ರ ಯಾದವ್ ಅವರು ಪಕ್ಷದ ಮುಖ್ಯ ವಕ್ತಾರನ ಸ್ಥಾನ ಕಳೆದುಕೊಳ್ಳುವ ಸಾಧ್ಯತೆ ದಟ್ಟವಾಗಿದೆ.

ಯಾದವ್ ಅವರ ಹೆಸರಿರದ,  ಪಕ್ಷದ ವಕ್ತಾರರ ಹೊಸ ಪಟ್ಟಿಯನ್ನು ಆಪ್ ಬಿಡುಗಡೆ ಮಾಡಲಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ. "ನಾವು ನೂತನ ವಕ್ತಾರರ ಪಟ್ಟಿಯನ್ನು ಬಿಡುಗಡೆ ಮಾಡಲಿದ್ದೇವೆ. ಅದರಲ್ಲಿ ಯೋಗೇಂದ್ರ ಯಾದವ್ ಹೆಸರು ಇರುವುದಿಲ್ಲ" ಎಂದು ಹೆಸರು ಹೇಳಲಿಚ್ಛಿಸದ ಪಕ್ಷದ ನಾಯಕರೊಬ್ಬರು ಹೇಳಿದ್ದಾರೆ.

ಯಾದವ್ ಮತ್ತು ಪ್ರಶಾಂತ್ ಅವರನ್ನು ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಿಂದ ಕಿತ್ತೊಗೆದ ಮೇಲೆ ಹಾಗೂ ರಾಷ್ಟ್ರೀಯ ಶಿಸ್ತು ಸಮಿತಿಯಿಂದ ಪ್ರಶಾಂತ್ ಭೂಷಣ್ ಅವರನ್ನು ಉಚ್ಛಾಟಿಸಿದ ಮೇಲೆ ಈ ನಡೆಯನ್ನು ನಿರೀಕ್ಷಿಸಲಾಗಿತ್ತು.

ವಿಶೇಷವೆಂದರೆ ಪಕ್ಷದ ವಕ್ತಾರರ ಸಮಿತಿಯಲ್ಲಿ ಸದ್ಯಕ್ಕೆ ಯಾದವ್ ಒಬ್ಬರೇ ಮುಖ್ಯ ವಕ್ತಾರ ಎಂದು ನೇಮಕವಾಗಿರುವುದು. ಭಾನುವಾರ ಭೂಷಣ್ ಅವರನ್ನು ರಾಷ್ಟ್ರೀಯ ಶಿಸ್ತು ಸಮಿತಿಯಿಂದ ಉಚ್ಛಾಟಿಸಿ, ಕೇಜ್ರಿವಾಲ್ ಗೆ ಸಮೀಪದ ಮೂವರು ನಾಯಕರನ್ನು ಸಮಿತಿಗೆ ನೇಮಿಸಲಾಗಿದೆ.

ಆಪ್ ಪಕ್ಷದ ಆಂತರಿಕ ಲೋಕಪಾಲ್ ಅಡ್ಮಿರಲ್ (ಮಾಜಿ) ಎಲ್ ರಾಮದಾಸ್ ಅವರನ್ನು ಕೂಡ ಪಕ್ಷದ ವಿರುದ್ಧ ಮಾತನಾಡಿದ್ದಕ್ಕೆ ಹೊರಕಳುಹಿಸಲಾಗಿದೆ. ಈಗ ಲೋಕಪಾಲ್ ಸಮಿತಿಯನ್ನು ಇಬ್ಬರು ಮಾಜಿ ಐಪಿಎಸ್ ಅಧಿಕಾರಿಗಳು ಮತ್ತು ಒಬ್ಬ ಶೈಕ್ಷಣಿಕ ತಜ್ಞನಿಂದ ಬದಲಾಯಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com