ಒಳ್ಳೆಯ ಸಮಾಜಕ್ಕಾಗಿ ನೈತಿಕ ಶಿಕ್ಷಣ ಅಗತ್ಯ: ಆರ್ ಎಸ್ ಎಸ್ ಮುಖಂಡ

ಲೌಖಿಕ ಗೆಲುವಿನಿಂದ ಗಳಿಸಿದ ಆಸ್ತಿ-ಪಾಸ್ತಿಯಿಂದ ಜನರು ಸ್ವಾರ್ಥಿಗಳಾಗುತ್ತಿದ್ದಾರೆ ಎಂದಿರುವ ಆರ್ ಎಸ್ ಎಸ್ ಅಧ್ಯಕ್ಷ ಮೋಹನ್ ಭಾಗವತ್
ಮೋಹನ್ ಭಾಗವತ್
ಮೋಹನ್ ಭಾಗವತ್

ಕಿಶನ್ಗಂಜ್: ಲೌಖಿಕ ಗೆಲುವಿನಿಂದ ಗಳಿಸಿದ ಆಸ್ತಿ-ಪಾಸ್ತಿಯಿಂದ ಜನರು ಸ್ವಾರ್ಥಿಗಳಾಗುತ್ತಿದ್ದಾರೆ ಎಂದಿರುವ ಆರ್ ಎಸ್ ಎಸ್ ಅಧ್ಯಕ್ಷ ಮೋಹನ್ ಭಾಗವತ್ ಜೀವಿಸಲು ಯೋಗ್ಯವಾದ ಸಮಾಜ ಕಟ್ಟಲು ನೈತಿಕ ಶಿಕ್ಷಣ ಅಗತ್ಯ ಎಂದಿದ್ದಾರೆ.

"ಲೌಖಿಕದ ಗೆಲುವಿನಿಂದ ಹೆಚ್ಚೆಚ್ಚು ಅಸ್ತಿ ಗಳಿಸಿ ಜನ ಸ್ವಾರ್ಥಿಗಳಾಗಿದ್ದಾರೆ. ಈ ಸ್ವಾರ್ಥದಿಂದ ಜನರು ಎಲ್ಲಿಗೆ ಹೋಗಿದ್ದಾರೆಂದರೆ ಪ್ರಾಣಿಗಳು ಮತ್ತು ಮನುಷ್ಯರ ನಡುವೆ ವ್ಯತ್ಯಾಸವೇ ಇಲ್ಲದಂತಾಗಿದೆ" ಎಂದು ಕಿಶನ್ಗಂಜ್ ನ ಕಾಲೇಜು ಉದ್ಘಾಟನಾ ಸಮಾರಂಭವೊಂದರಲ್ಲಿ ತಿಳಿಸಿದ್ದಾರೆ.

"ತನ್ನನ್ನು ಉತ್ತಮವಾಗಿಸಿಕೊಳ್ಳುವ ಹಾಗೂ ಸಮಾಜವನ್ನು ಉತ್ತಮಗೊಳಿಸುವಂತಹ ಶಿಕ್ಷಣವನ್ನು ತೆಗೆದುಕೊಳ್ಳುವುದು ಪ್ರತಿಯೊಬ್ಬನ ಕರ್ತವ್ಯ" ಎಂದಿದ್ದಾರೆ ಮೋಹನ್.

ಪರಿಸರದ ಕಾಳಜಿಯ ಬಗ್ಗೆಯೂ ಮಾತನಾಡಿದ ಭಾಗವತ್ ಅಭಿವೃದ್ಧಿಯ ನೆಪದಲ್ಲಿ ಪರಿಸರದ ಜೊತೆಗಿನ ಸಂಘರ್ಷವನ್ನು ಕಡಿಮೆ ಮಾಡುವ ಸೂಕ್ಷ್ಮತೆ ಬೆಳೆಸಿಕೊಳ್ಳಬೇಕು ಎಂದು ಕರೆ ಕೊಟ್ಟಿದ್ದಾರೆ.

"ಅಭಿವೃದ್ಧಿ ಮತ್ತು ಪರಿಸರದ ಮಧ್ಯೆ ಸಂಘರ್ಷ ಮುಂದುವರೆದಿದೆ" ಎಂದು ಭಾಗವತ್ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com