
ಬ್ರಸ್ಸಲ್ಸ್: ವಿವಾದಾತ್ಮ ಊಬರ್ ಟ್ಯಾಕ್ಸಿ ಸೇವೆಯನ್ನು ಕಾನೂನು ಬಾಹಿರ ಹಾಗೂ ಈ ಸಂಸ್ಥೆ ಟ್ಯಾಕ್ಸಿ ಸೇವೆ ನಡೆಸಲು ಪಾಲಿಸಬೇಕಿರುವ ಎಲ್ಲ ನಿಯಮಗಳನ್ನು ಗಾಳಿಗೆ ತೂರಿದೆ ಎಂದು ಬ್ರಸ್ಸಲ್ಸ್ ಕೋರ್ಟ್ ತೀರ್ಪು ನೀಡಿದೆ.
ಸೋಮವಾರ ಊಬರ್ ಸಂಸ್ಥೆಯ ಚಾಲಕನೊಬ್ಬ ಟ್ಯಾಕ್ಸಿ ನಿಯಮಗಳನ್ನು ಪಾಲಿಸದೇ ಇದ್ದದ್ದಕ್ಕೆ ಸೋಮವಾರ ತಪ್ಪಿತಸ್ಥ ಎಂದು ಸಾಬೀತಾಗಿದ್ದಾನೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.
ಈ ಚಾಲಕ ತನ್ನ ಕಾರನ್ನು ಸಾರ್ವಜನಿಕ ಸಾರಿಗೆಗೆ ಲಭ್ಯಮಾಡುವುದು ಕಾನೂನುಬಾಹಿರ ಎಂದು ಕೋರ್ಟ್ ತೀರ್ಪು ನೀಡಿದೆ.
ಊಬರ್ ನ ಚಾಲಕನೊಬ್ಬ ಬೆಲ್ಜಿಯಂನಲ್ಲಿ ಕೋರ್ಟ್ ಗೆ ಹಾಜರಾಗಿದ್ದು ಇದೇ ಮೊದಲ ಬಾರಿ. ಮುಂದಿನ ತಿಂಗಳುಗಳಲ್ಲಿ ಸುಮಾರು ೪೦ ಜನ ಚಾಲಕರು ಕೋರ್ಟ್ ಗೆ ಹಾಜರಾಗಬೇಕಿದೆ.
ವಿಶ್ವದಾದ್ಯಂತ ಊಬರ್ ಸೇವೆ ವಿವಾದ ಸೃಷ್ಟಿಸಿದೆ. ಗ್ರಾಹಕರು ಆಪ್ ಮೂಲಕ ಚಾಲಕನನ್ನು ಹುಡುಕಿ ಟಾಕ್ಸಿ ಪಡೆಯಬಹುದಾಗಿದೆ.
೨೦೧೪ ಫೆಬ್ರವರಿಯಲ್ಲಿ ಮೊದಲ ಬಾರಿಗೆ ಊಬರ್ ಬೆಲ್ಜಿಯಂ ನಲ್ಲಿ ತನ್ನ ಸೇವೆ ಪ್ರಾರಂಭಿಸಿತ್ತು. ಈ ಸೇವೆ ಕಾನೂನುಬಾಹಿರವಾಗಿದ್ದರೂ ಜನರು ಹೆಚ್ಚೆಚ್ಚು ಸಂಖ್ಯೆಯಲ್ಲಿ ಈ ಸೇವೆಯನ್ನು ಬಳಸುತ್ತಿದ್ದಾರೆ.
Advertisement