ಅಮೆರಿಕಾ ಅಧ್ಯಕ್ಷ ರೇಸ್ ನಲ್ಲಿ ಎಚ್ ಪಿ ಮಾಜಿ ಸಿಇಒ

ಹೆವ್ಲೆಟ್ ಪ್ಯಾಕಾರ್ಡ್ (ಎಚ್ ಪಿ) ಸಂಸ್ಥೆಯ ಮಾಜಿ ಮುಖ್ಯ ನಿರ್ವಹಣಾ ಅಧಿಕಾರಿ ಕ್ಯಾರ್ಲಿ ಫಿಯೋರಿನಾ ಅಮೆರಿಕಾ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುತ್ತಿರುವಾಗಿ
ಕ್ಯಾರ್ಲಿ ಫಿಯೋರಿನಾ
ಕ್ಯಾರ್ಲಿ ಫಿಯೋರಿನಾ

ವಾಶಿಂಗ್ಟನ್: ಹೆವ್ಲೆಟ್ ಪ್ಯಾಕಾರ್ಡ್ (ಎಚ್ ಪಿ) ಸಂಸ್ಥೆಯ ಮಾಜಿ ಮುಖ್ಯ ನಿರ್ವಹಣಾ ಅಧಿಕಾರಿ ಕ್ಯಾರ್ಲಿ ಫಿಯೋರಿನಾ ಅಮೆರಿಕಾ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುತ್ತಿರುವಾಗಿ ಸೋಮವಾರ ತಿಳಿಸಿದ್ದಾರೆ. ಇವರು ೨೦೧೬ರ ವೈಟ್ ಹೌಸ್ ರೇಸಿಗೆ ರಿಪಬ್ಲಿಕನ್ ಪಕ್ಷದಿಂದ ಸ್ಪರ್ಧಿಸುತ್ತಿರುವ ಒಬ್ಬಳೇ ಮಹಿಳೆಯಾಗಿದ್ದಾರೆ.

ಒಂದು ಕಾಲಕ್ಕೆ ಅಮೇರಿಕಾ ಕಾರ್ಪೊರೇಟ್ ಬಳಗದಲ್ಲಿ ಅತಿ ಪ್ರಭಾವಶಾಲಿ ವ್ಯಕ್ತಿಯಾಗಿದ್ದ ಫಿಯೋರಿನಾ, ಈ ನಿರ್ಧಾರವನ್ನು ಸುದ್ದಿ ವಾಹಿನಿಯ ಕಾರ್ಯಕ್ರಮವೊಂದರಲ್ಲಿ ಘೋಷಿಸಿದ್ದಾರೆ.

"ಹೌದು ನಾನು ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುತ್ತಿದ್ದೇನೆ. ನಾನು ಈ ಸ್ಥಾನಕ್ಕೆ ಅತಿ ಹೆಚ್ಚು ಸೂಕ್ತ ವ್ಯಕ್ತಿ ಏಕೆಂದರೆ ಆರ್ಥಿಕ ವ್ಯವಸ್ಥೆ ಹೇಗೆ ಕೆಲಸ ಮಾಡುತ್ತದೆ ಎಂಬುದನ್ನು ಚೆನ್ನಾಗಿ ಬಲ್ಲೆ. ನಾನು ವಿಶ್ವವನ್ನು ಅರ್ಥ ಮಾಡಿಕೊಂಡಿದ್ದೇನೆ, ಅಲ್ಲಿ ಯಾರ್ಯಾರು ಇದ್ದಾರೆ ಹಾಗೂ ಜಗತ್ತು ಹೇಗೆ ಕೆಲಸ ಮಾಡುತ್ತದೆ ಎಂಬುದು ನನಗೆ ತಿಳಿದಿದೆ" ಎಂದು ಅವರು ಹೇಳಿದ್ದಾರೆ.

ಯಾವತ್ತೂ ಸಾರ್ವಜನಿಕ ಕಛೇರಿಯನ್ನು ಹೊಂದದ ಫಿಯೋರಿನಾ ಸ್ಪರ್ಧಿಸುತ್ತಿರುವ ರಿಪಬ್ಲಿಕನ್ ಅಭ್ಯರ್ಥಿಗಳಲ್ಲಿ ಅತಿ ಕಡಿಮೆ ಜನಪ್ರಿಯತೆ ಹೊಂದಿದ್ದಾರೆ ಎನ್ನಲಾಗಿದೆ.

ಕಾಂಪಾಕ್ ಸಂಸ್ಥೆಯ ಜೊತೆಗೂಡಿದ ೧೯ ಬಿಲಿಯನ್ ಡಾಲರ್ ಡೀಲಿನಲ್ಲಿ ಬಳಲಿದ್ದ ಎಚ್ ಪಿ ಸಂಸ್ಥೆ ೨೦೦೫ ರಲ್ಲಿ ಫಿಯೋರಿನಾ ಅವರಿಗೆ ರಾಜೀನಾಮೆ ನೀಡುವಂತೆ ಒತ್ತಡ ಹೇರಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com