'ಇಂಡಿಯಾಸ್ ಡಾಟರ್' ನಿಷೇಧಕ್ಕೆ ಪ್ರಧಾನಿ ಮೋದಿ ನೀಡಿದ ಮೂರು ಕಾರಣಗಳು

ಟೈಮ್ ನಿಯತಕಾಲಿಕೆಗೆ ಪ್ರಧಾನಿ ನರೇಂದ್ರ ಮೋದಿ ನೀಡಿರುವ ಸಂದರ್ಶನದಲ್ಲಿ ದೆಹಲಿಯ ನಿರ್ಭಯ ರೇಪ್ ಬಗ್ಗೆ ನಿರ್ಮಿಸಿದ
ನಿರ್ಭಯ ತಾಯಿಯನ್ನು ನರೇಂದ್ರ ಮೋದಿ ಭೇಟಿ ಮಾಡಿದ ಸಂದರ್ಭ
ನಿರ್ಭಯ ತಾಯಿಯನ್ನು ನರೇಂದ್ರ ಮೋದಿ ಭೇಟಿ ಮಾಡಿದ ಸಂದರ್ಭ

ನವದೆಹಲಿ: ಟೈಮ್ ನಿಯತಕಾಲಿಕೆಗೆ ಪ್ರಧಾನಿ ನರೇಂದ್ರ ಮೋದಿ ನೀಡಿರುವ ಸಂದರ್ಶನದಲ್ಲಿ ದೆಹಲಿಯ ನಿರ್ಭಯ ರೇಪ್ ಬಗ್ಗೆ ನಿರ್ಮಿಸಿದ ಸಾಕ್ಷ್ಯಚಿತ್ರ 'ಇಂಡಿಯಾಸ್ ಡಾಟರ್' ನಿಷೇಧಿಸಿದ್ದು ಕಾನೂನಾತ್ಮಕ ಕ್ರಮ. ಇದು ಅಭಿವ್ಯಕ್ತಿ ಸ್ವಾತಂತ್ರ್ಯದ ಹರಣ ಅಲ್ಲ ಎಂದಿದ್ದಾರೆ.

"ನೀವು, ಸಾಕ್ಷ್ಯಚಿತ್ರದಲ್ಲಿ ಬಿತ್ತಿಸಿರುವ ಪ್ರಕರಣ ಗಮನಿಸಿದರೆ, ಅಭಿವ್ಯಕ್ತಿ ಸ್ವಾತಂತ್ರ್ಯ ಹರಣ ಮಾಡಿದ್ದು ಏನೂ ಇಲ್ಲ. ಅದು ಕಾನೂನಾತ್ಮಕ ಕ್ರಮ ಅಷ್ಟೇ" ಎಂದಿದ್ದಾರೆ ಮೋದಿ.

ಹಾಗೆಯೇ ನಿಷೇಧಕ್ಕೆ ಮೂರೂ ಕಾರಣಗಳನ್ನು ನರೇಂದ್ರ ಮೋದಿ ತಿಳಿಸಿದ್ದು "ಇದಕ್ಕೆ ಎರಡರಿಂದ ಮೂರು ಆಯಾಮಗಳಿವೆ. ಒಂದು ರೇಪ್ ಸಂತ್ರಸ್ತಳ ಬಗ್ಗೆ ವಿವರ ನೀಡುವುದು ಸರಿಯಲ್ಲ. ಆ ಸಾಕ್ಷ್ಯಚಿತ್ರ ಬಿತ್ತರವಾಗಿದ್ದರೆ ಇದು ಸಾಧ್ಯವಾಗಿತ್ತು"

"ಎರಡನೆಯದು ಈ ಪ್ರಕರಣ ಇನ್ನೂ ನ್ಯಾಯಾಲಯದಲ್ಲಿದೆ. ಆರೋಪಿಯ ಜೊತೆಗಿನ ಮಾತುಕತೆ ಕಾನೂನು ಕ್ರಮದ ಮಧ್ಯೆ ಬರಬಾರದು"

"ಮೂರನೆಯದು, ಸಂತ್ರಸ್ತರನ್ನು ರಕ್ಷಿಸಿವುದು ನಮ್ಮ ಕರ್ತವ್ಯ. ನಾವು ಸಾಕ್ಷ್ಯಚಿತ್ರದ ಬಿತ್ತರಕ್ಕೆ ಅವಕಾಶ ನೀಡಿದ್ದರೆ, ಸಂತ್ರಸ್ತಳ ಘನತೆಗೆ ಹಾನಿ ಮಾಡಿದಂತಾಗುತ್ತಿತ್ತು" ಎಂದು ತಿಳಿಸಿದ್ದಾರೆ.

೨೧೦೧೨ ರ ದೆಹಲಿ ನಿರ್ಭಯ ಗ್ಯಾಂಗ್ ರೇಪ್ ಪ್ರಕರಣದ ಮೇಲೆ ಲೆಸ್ಲೀ ಉಡ್ವಿನ್ 'ಇಂಡಿಯಾಸ್ ಡಾಟರ್' ಹೆಸರಿನಲ್ಲಿ ಸಾಕ್ಷ್ಯಚಿತ್ರ ನಿರ್ಮಿಸಿದ್ದರು. ಇದರಲ್ಲಿ ರೇಪ್ ಆರೋಪಿ ಮುಖೇಶ್ ಸಿಂಗ್ ಪ್ರತಿಕ್ರಿಯೆಗಳನ್ನು ನೀಡಿದ್ದ.  

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com