ಅಸ್ಸಾಂಜೆ ಬಂಧನಕ್ಕೆ ವಿರೋಧಿಸಿ ಮನವಿ: ಸ್ವೀಡನ್ ಕೋರ್ಟ್ ತಿರಸ್ಕಾರ

ವಿಕಿಲೀಕ್ಸ್ ಸಂಸ್ಥಾಪಕ ಜೂಲಿಯನ್ ಅಸ್ಸಾಂಜೆ ತಮ್ಮ ವಿರುದ್ಧ ಇರುವ ಲೈಂಗಿಕ ಕಿರುಕುಳ ಆರೋಪದಲ್ಲಿ ಬಂಧನ ವಾರೆಂಟ್ ರದ್ದು ಮಾಡುವಂತೆ
ಜೂಲಿಯನ್ ಅಸ್ಸಾಂಜೆ
ಜೂಲಿಯನ್ ಅಸ್ಸಾಂಜೆ

ಸ್ಟಾಕ್ ಹಾಂ: ವಿಕಿಲೀಕ್ಸ್ ಸಂಸ್ಥಾಪಕ ಜೂಲಿಯನ್ ಅಸ್ಸಾಂಜೆ ತಮ್ಮ ವಿರುದ್ಧ ಇರುವ ಲೈಂಗಿಕ ಕಿರುಕುಳ ಆರೋಪದಲ್ಲಿ ಬಂಧನ ವಾರೆಂಟ್ ರದ್ದು ಮಾಡುವಂತೆ ಕೇಳಿಕೊಂಡಿದ್ದ ಮನವಿಯನ್ನು ಸ್ವೀಡನ್ ಸುಪ್ರೀಮ್ ಕೋರ್ಟ್ ತಿರಸ್ಕರಿಸಿದೆ.

ಅಸ್ಸಾಂಜೆ ಯೂರೋಪಿಯನ್ ಬಂಧನ ವಾರೆಂಟ್ ವಿರುದ್ಧ ಹೋರಾಡುತ್ತಿದ್ದು, ಕಳೆದ ತಿಂಗಳಷ್ಟೇ ಇದರ ವಿರುದ್ಧ ಮನವಿಯನ್ನು ವಿಚಾರಣೆ ಮಾಡಲು ಸ್ವೀಡನ್ ಸುಪ್ರೀಂ ಕೋರ್ಟ್ ಒಪ್ಪಿಗೆ ನೀಡಿತ್ತು.

ಆದರೆ ಸೋಮವಾರ ಈ ಮನವಿಯನ್ನು ತಿರಸ್ಕರಿಸಿ ನ್ಯಾಯಧೀಶರು ತೀರ್ಪು ನೀಡಿದ್ದಾರೆ. ಸ್ಟಾಕ್ ಹಾಂ ನ ಇಬ್ಬರು ಮಹಿಳೆಯರಲ್ಲಿ ಒಬ್ಬರು ರೇಪ್ ಮತ್ತೊಬ್ಬರು ಲೈಂಗಿಕ ದೌರ್ಜನ್ಯ ದೂರನ್ನು ಅಸ್ಸಾಂಜೆ (೪೩) ವಿರುದ್ಧ ನೀಡಿದ್ದರು.

"ಸ್ವೀಡನ್ ತನಿಕಾಧಿಕಾರಿಗಳು ಜೂಲಿಯನ್ ಅಸ್ಸಾಂಜೆ ಅವರನ್ನು ಪ್ರಶ್ನಿಸಲು ಕಾರ್ಯ ಪ್ರಾರಂಭಿಸಿದ್ದಾರೆ ಎಂದು ಸುಪ್ರೀಮ್ ಕೋರ್ಟ್ ತಿಳಿದಿದೆ. ಬಂಧನ್ ವಾರೆಂಟ್ ರದ್ದುಪಡಿಸಲು ಸುಪ್ರೀಮ್ ಕೋರ್ಟ್ ಗೆ ಯಾವುದೇ ಕಾರಣ ಸಿಕ್ಕಿಲ್ಲ" ಎಂದು ಕೋರ್ಟ್ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಈಗ ಸ್ವೀಡನ್ ಅಧಿಕಾರಿಗಳು ಲಂಡನ್ನಿನ ಆಸ್ಟ್ರೇಲಿಯಾ ಮತ್ತು ಈಕ್ವೆಡಾರ್ ರಾಯಬಾರಿ ಕಚೇರಿಗೆ ಭೇಟಿ ನೀಡಿ ಚರ್ಚಿಸಲಿದ್ದಾರೆ. ಅಸ್ಸಾಂಜೆ ಈ ದೇಶಗಳಲ್ಲಿ ಎರಡು ವರ್ಷಗಳಿಂದ ರಾಜಕೀಯ ಆಶ್ರಯ ಪಡೆದಿದ್ದಾರೆ.

ಈ ಆರೋಪಗಳನ್ನು ಕೋರ್ಟ್ ನಲ್ಲಿ ಎದುರಿಸಲು ಅಸ್ಸಾಂಜೆ ಸ್ವೀಡನ್ ಗೆ ತೆರಳಲು ನಿರಾಕರಿಸಿದ್ದಾರೆ ಏಕೆಂದರ್ ಸ್ವೀಡನ್ ವಿಕಿಲೀಕ್ಸ್ ಆರೋಪದ ಮೇಲೆ ಅವರನ್ನು ಅಮೆರಿಕಾಕ್ಕೆ ಗಡಿಪಾರು ಮಾಡುವ ಸಾಧ್ಯತೆ ಇದೆ ಎಂದು ಅವರು ದೂರಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com