ಅಮ್ಮ ಬಿಡುಗಡೆ ವಿರುದ್ಧ ಸ್ವಾಮಿ ಸುಪ್ರೀಮ್ ಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸುವ ಸಾಧ್ಯತೆ

ಮಿತಿಮೀರಿದ ಆಸ್ತಿ ಪ್ರಕರಣದಲ್ಲಿ ಎ ಐ ಡಿ ಎಂ ಕೆ ಅಧಿನಾಯಕಿ ಜೆ ಜಯಲಲಿತಾ ಅವರನ್ನು ನಿರ್ದೋಷಿ ಎಂದು ಕರ್ನಾಟಕ ಹೈಕೋರ್ಟ್ ನೀಡಿರುವ
ಸುಬ್ರಮಣ್ಯನ್ ಸ್ವಾಮಿ
ಸುಬ್ರಮಣ್ಯನ್ ಸ್ವಾಮಿ

ಚೆನ್ನೈ: ಮಿತಿಮೀರಿದ ಆಸ್ತಿ ಪ್ರಕರಣದಲ್ಲಿ ಎ ಐ ಡಿ ಎಂ ಕೆ ಅಧಿನಾಯಕಿ ಜೆ ಜಯಲಲಿತಾ ಅವರನ್ನು ನಿರ್ದೋಷಿ ಎಂದು ಕರ್ನಾಟಕ ಹೈಕೋರ್ಟ್ ನೀಡಿರುವ ತೀರ್ಪಿನ ವಿರುದ್ಧ ಸುಪ್ರೀಮ್ ಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸುವ ಸೂಚನೆಯನ್ನು ಬಿಜೆಪಿ ನಾಯಕ ಸುಬ್ರಮಣ್ಯನ್ ಸ್ವಾಮಿ ನೀಡಿದ್ದಾರೆ.

"ನಾನು ಸುಪ್ರೀಮ್ ಕೋರ್ಟ್ ಗೆ ಸಲ್ಲಿಸಲಿರುವ ಮೇಲ್ಮನಿವಿಯಿಂದ ಜಯಲಲಿತಾ ಮಿತಿಮೀರಿದ ಆಸ್ತಿ ಪ್ರಕರಣದಲ್ಲಿ ಕರ್ನಾಟಕ ಹೈಕೋರ್ಟ್ ನೀಡಿರುವ ತೀರ್ಪು 'ಅಂಕಗಣಿತದ ತಪ್ಪುಗಳ ದುರಂತ' ಎಂದು ಸಾಬೀತುಪಡಿಸಲಿದೆ. ಅವರು ಮತ್ತೆ ಮುಖ್ಯಮಂತ್ರಿಯಾದರೆ ರಾಜೀನಾಮೆ ನೀಡಬೇಕಗುತ್ತದೆ" ಎಂದು ಸ್ವಾಮಿ ಟ್ವೀಟ್ ಮಾಡಿದ್ದಾರೆ.


ಈ ತೀರ್ಪು ಜಯಲಲಿತ ಮತ್ತೆ ಮುಖ್ಯಮಂತ್ರಿಯಾಗುವುದಕ್ಕೆ ಹಾದಿಯನ್ನು ಸುಗಮಗೊಳಿಸಿದೆ.

ಈ ಪ್ರಕರಣದ ಮೂಲ ದೂರುದಾರ ಸ್ವಾಮಿ. ೧೯೯೬ ರಲ್ಲೇ ಜಯಲಲಿತಾ ವಿರುದ್ಧ ಸ್ವಾಮಿ ದೂರು ಸಲ್ಲಿಸಿದ್ದರು. ತದನಂತರ ಡಿ ಎಂ ಕೆ ೬೬.೫ ಕೋಟಿಯ ಮಿತಿಮೀರಿದ ಆಸ್ತಿ ಪ್ರಕರಣವನ್ನು ದಾಖಲಿಸಿತ್ತು. ಇದರಿಂದ ವಿಷೇಶ ನ್ಯಾಯಾಲಯ ಜಯಲಲಿತಾ ತಪ್ಪಿತಸ್ಥರೆಂದು ಕಳೆದ ಸೆಪ್ಟಂಬರ್ ನಲ್ಲಿ ತೀರ್ಪು ನೀಡಿತ್ತು.

ಕರ್ನಾಟಕ ಉಚ್ಛ ನ್ಯಾಯಾಲಯ ವಿಶೇಷ ನ್ಯಾಯಲಾಯದ ತೀರ್ಪನ್ನು ಬದಲಿಸಿ ಜಯಾ ನಿರ್ದೋಷಿ ಎಂದು ನೆನ್ನೆ ತೀರ್ಪು ನೀಡಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com