ನವದೆಹಲಿ: ಬುಧವಾರ ಪಾಕಿಸ್ತಾನದ ಕರಾಚಿಯಲ್ಲಿ ನಡೆದ ಬಸ್ ದಾಳಿಯನ್ನು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ತೀವ್ರವಾಗಿ ಖಂಡಿಸಿದ್ದಾರೆ.
"ಕರಾಚಿಯಲಿ ನಡೆದ ಭಯೋತ್ಪಾದಕ ದಾಳಿಯನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ. ಪ್ರಜ್ಞಾಹೀನ ಈ ಹಿಂಸಾತ್ಮಕ ಕೃತ್ಯದಲ್ಲಿ ಮುಗ್ಧರು ಬಲಿಯಾಗಿದ್ದಾರೆ" ಎಂದು ಗಾಂಧಿ ಹೇಳಿಕೆ ನೀಡಿದ್ದಾರೆ.
ಈ ಪುಕ್ಕಲು ಕೃತ್ಯ ಎಸಗಿದವರ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳುವಂತೆ ಕೂಡ ಕಾಂಗ್ರೆಸ್ ನಾಯಕ ಆಗ್ರಹಿಸಿದ್ದಾರೆ.
ಪಾಕಿಸ್ತಾನ ಬಂದರು ನಗರ ಕರಾಚಿಯಲ್ಲಿ ಶಿಯಾ ಮುಸ್ಲಿಮರನ್ನು ಹೊತ್ತು ಹೊರಟಿದ್ದ ಬಸ್ ಮೇಲೆ ಬಂಧೂಕುದಾರಿಯೊಬ್ಬ ನಡೆಸಿದ ಗುಂಡಿನ ದಾಳಿಗೆ ಕನಿಷ್ಠ ೪೩ ಜನ ಮೃತಪಟ್ಟು ೨೦ ಜನ ಗಾಯಗೊಂಡಿದ್ದರು.
Advertisement