ಧಾರ್ಮಿಕ ಹಾಗೂ ಮತ್ತಿತರ ಕಾರ್ಯಕ್ರಮಗಳಲ್ಲಿ ಆನೆಗಳನ್ನು ಹಿಂಸಿಸಬೇಡಿ: ಸುಪ್ರೀಮ್ ಕೋರ್ಟ್

ಹಬ್ಬಗಳಲ್ಲಿ ಹಾಗು ಧಾರ್ಮಿಕ ಕಾರ್ಯಕ್ರಮಗಳಲ್ಲಿ ಆನೆಗಳನ್ನು ಬಳಸುವಾಗ ಅವುಗಳಿಗೆ ಹಿಂಸೆಯಾಗದಂತೆ ನೋಡಿಕೊಳ್ಳಬೇಕು ಎಂದು ಆನೆಗಳ ಮಾಲೀಕರಿಗೆ ಸುಪ್ರೀಂ
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ಹಬ್ಬಗಳಲ್ಲಿ ಹಾಗು ಧಾರ್ಮಿಕ ಕಾರ್ಯಕ್ರಮಗಳಲ್ಲಿ ಆನೆಗಳನ್ನು ಬಳಸುವಾಗ ಅವುಗಳಿಗೆ ಹಿಂಸೆಯಾಗದಂತೆ ನೋಡಿಕೊಳ್ಳಬೇಕು ಎಂದು ಆನೆಗಳ ಮಾಲೀಕರಿಗೆ ಸುಪ್ರೀಂ ಕೋರ್ಟ್ ಸೂಚಿಸಿದೆ. ಇದ್ದನ್ನು ಉಲ್ಲಂಘಿಸಿದರೆ ನ್ಯಾಯಾಂಗ ನಿಂದನೆಗೆ ಗುರಿಯಾಗುತ್ತೀರಿ ಎಂದು ಎಚ್ಚರಿಸೆ ಕೂಡ.

"ಮಧ್ಯಂತರ ಕ್ರಮವಾಗಿ ಎಲ್ಲ ಆಯೋಜಕರು, ಆನೆಗಳ ಮಾಲೀಕರು ಮತ್ತು ಹಬ್ಬಗಳ ಸಮನ್ವಯ ಸಮಿತಿಗಳಿಗೆ ಸೂಚಿಸುವುದೇನೆಂದರೆ, ಹಬ್ಬಗಳಲ್ಲಿ ಧಾರ್ಮಿಕ ಆಚರಣೆಗಳಲ್ಲಿ ಪ್ರದರ್ಶನ ನಿಡುವ ಆನೆಗಳನ್ನು ಹಿಂಸೆಗೆ ಗುರಿಪಡಿಸಬಾರದು" ಎಂದು ನ್ಯಾಯಾಧೀಶ ದೀಪಕ್ ಮಿಶ್ರಾ ಮತ್ತು ಪ್ರಫುಲ್ ಸಿ ಪಂಥ್ ಒಳಗೊಂಡ ವಿಭಾಗೀಯ ಪೀಠ ಹೇಳಿದೆ.

"ಇಂತಹ ಹಬ್ಬದ ಸಮಾರಂಭಗಳಲ್ಲಿ ಆನೆಗಳನ್ನು ಹಿಂಸೆಗೆ ಗುರಿಪಡಿಸಲಾಗುತ್ತಿದೆ ಎಂದು ನ್ಯಾಯಾಲಯದಲ್ಲಿ ಸಾಬೀತುಪಡಿಸಲಾಗಿದೆ. ಇಂತಹ ಆಯೋಜಕರು, ಸಮಿತಿ ಸದಸ್ಯರು ಹಾಗೂ ಭಾಗಿಯಾದ ಇತರರನ್ನು ನ್ಯಾಯಂಗ ನಿಂದನೆ ಆರೋಪದಡಿ ವಿಚಾರಣೆಗೆ ಒಳಪಡಿಸಲಾಗುತ್ತದೆ" ಎಂದಿರುವ ಕೋರ್ಟ್ ಜುಲೈ ೧೪ ಕ್ಕೆ ಮುಂದಿನ ವಿಚಾರಣೆ ನಡೆಸುವುದಾಗಿ ತಿಳಿಸಿದೆ.

ಕೇರಳದಲ್ಲಿ ನಡೆಯುವ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಆನೆಗಳು ಪ್ರದರ್ಶನ ನೀಡಂದತೆ ತಡೆಹಾಕಲು ಗೌರಿ ಮೌಲೇಕೇಶಿ ಸಲ್ಲಿಸಿದ್ದ ಈ ಅರ್ಜಿಯ ವಿಚಾರಣೆ ನಡೆಸಿದ ಕೋರ್ಟ್ ಈ ಮಧ್ಯಂತರ ಆದೇಶ ನೀಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com