ಕಾಬುಲ್ ನಲ್ಲಿ ಸ್ಫೋಟ; ಕನಿಷ್ಠ ಐದು ಸಾವು

ಕಾಬುಲ್ ನಲ್ಲಿ ಮಂಗಳವಾರ ಮಧ್ಯಾಹ್ನ ನಡೆದ ಬಾಂಬ್ ಸ್ಫೋಟದಲ್ಲಿ ಕನಿಷ್ಠ ೫ ಜನ ಮೃತಪಟ್ಟಿದ್ದು ೪೦ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಕಾಬುಲ್: ಕಾಬುಲ್ ನಲ್ಲಿ ಮಂಗಳವಾರ ಮಧ್ಯಾಹ್ನ ನಡೆದ ಬಾಂಬ್ ಸ್ಫೋಟದಲ್ಲಿ ಕನಿಷ್ಠ ೫ ಜನ ಮೃತಪಟ್ಟಿದ್ದು ೪೦ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಆಪ್ಘಾನಿಸ್ಥಾನದ ರಾಜಧಾನಿಯ ಪಿಡಿ೨ ಜಿಲ್ಲೆಯಲ್ಲಿ ನ್ಯಾಯ ಸಚಿವಾಲದ ನಿಲುಗಡೆ ಜಾಗದಲ್ಲಿ ನಿಲ್ಲಿಸಿದ್ದ ಟೋಯೋಟಾ ಕಾರಿನಲ್ಲಿ ತುಂಬಲಾಗಿದ್ದ ಸ್ಪೋಟಕಗಳು ಸ್ಫೋಟಿಸಿವೆ. ಸಚಿವಾಲಯದ ಅಧಿಕಾರಿಗಳು ಕಚೇರಿಯಿಂದ ಹೊರಡಬೇಕಾದರೆ ಈ ಘಟನೆ ನಡೆದಿದೆ ಎಂದು ತಿಳಿಯಲಾಗಿದೆ.

ಈ ಸ್ಫೋಟ ಮೈಲುಗಟ್ಟಲೆ ದೂರಕ್ಕೂ ಕೇಳಿಸಿದ್ದು, ಹತ್ತಿರದಲ್ಲಿದ್ದ ಕಟ್ಟಡಗಳೂ ಹಾನಿಗೊಂಡಿವೆ.

ಈ ಘಟನೆ ನಡೆದ ಕೆಲವೇ ನಿಮಿಷಗಳಲ್ಲಿ ಭದ್ರತಾ ಪಡೆ ಮತ್ತು ತುರ್ತು ನಿರ್ವಹಣಾ ಪಡೆ ಸ್ಥಳಕ್ಕೆ ಧಾವಿಸಿದವು ಎಂದು ತಿಳಿದುಬಂದಿದೆ. ಭದ್ರತಾ ಪಡೆಗಳು ಸ್ಥಳವನ್ನು ಸುತ್ತುವರೆದಿವೆ.

ಈ ಘಟನೆ ಸುಮಾರು ಮಧ್ಯಾಹ್ನ ೩:೪೫ಕ್ಕೆ ನಡೆದಿದ್ದು ತಾಲಿಬಾನ್ ಭಯೋತ್ಪಾದಕ ಸಂಘಟನೆಯು ಒಳಗೊಂಡಂತೆ ಯಾವುದೇ ಸಂಘಟನೆ ಈ ಘಟನೆಯ ಹೊಣೆ ಹೊತ್ತಿಲ್ಲ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com