ಶಿಕ್ಷಣ ಇಲಾಖೆಯ ದ್ವಂದ್ವ ನಿಲುವು: ಕಳಪೆ ಸಾಧನೆಗೆ ಕಠಿಣ ಕ್ರಮವೂ ಶೂನ್ಯ

ಶೂನ್ಯ ಫಲಿತಾಂಶ ಗಳಿಸಿರುವ ಶಿಕ್ಷಣ ಸಂಸ್ಥೆಗಳ ವಿರುದ್ಧ ಕ್ರಮ ಕೈಗೊಳ್ಳಲು ಶಿಕ್ಷಣ ಇಲಾಖೆಯ ಎರಡು ಪ್ರಮುಖ ಇಲಾಖೆಗಳೇ ದ್ವಂದ್ವ ನಿಲುವು ತಳೆದಿವೆ.
ಫಲಿತಾಂಶ ವೀಕ್ಷಿಸುತ್ತಿರುವ ವಿದ್ಯಾರ್ಥಿಗಳು (ಸಾಂದರ್ಭಿಕ ಚಿತ್ರ)
ಫಲಿತಾಂಶ ವೀಕ್ಷಿಸುತ್ತಿರುವ ವಿದ್ಯಾರ್ಥಿಗಳು (ಸಾಂದರ್ಭಿಕ ಚಿತ್ರ)

ಬೆಂಗಳೂರು: ಎಸ್.ಎಸ್.ಎಲ್.ಸಿ ಹಾಗೂ ಪಿ.ಯು.ಸಿ ಯಲ್ಲಿ ಶೂನ್ಯ ಫಲಿತಾಂಶ  ಗಳಿಸಿರುವ ಶಿಕ್ಷಣ ಸಂಸ್ಥೆಗಳ ವಿರುದ್ಧ ಕ್ರಮ ಕೈಗೊಳ್ಳಲು ಶಿಕ್ಷಣ ಇಲಾಖೆಯ ಎರಡು ಪ್ರಮುಖ ಇಲಾಖೆಗಳೇ ದ್ವಂದ್ವ ನಿಲುವು ತಳೆದಿವೆ.

ಎಸ್.ಎಸ್.ಎಲ್.ಸಿಯಲ್ಲಿ ಶೂನ್ಯ ಫಲಿತಾಂಶ  ಧಾಖಲಿಸಿರುವ ಪ್ರೌಢಶಾಲೆಗಳ ಮಾನ್ಯತೆ ರದ್ದುಪಡಿಸಲು ಸಾರ್ವಜನಿಕ ಶಿಕ್ಷಣ ನಿರ್ಧರಿಸಿದ್ದರೆ, ಈ ಬಗ್ಗೆ ಕ್ರಮ ತೆಗೆದುಕೊಳ್ಳಲು ಪದವಿಪೂರ್ವ ಶಿಕ್ಷಣ ಇಲಾಖೆ ಕಾಲಾವಕಾಶ ಕೇಳಿದೆ. ಈ ಮೂಲಕ  ಶಿಕ್ಷಣ ಇಲಾಖೆಯಲ್ಲೇ ದ್ವಂದ್ವ  ನಿಲುವು ಉಂಟಾಗಿದೆ.  

ಎಸ್.ಎಸ್.ಎಲ್.ಸಿಯಲ್ಲಿ 36 ಶಾಲೆಗಳು ಶೂನ್ಯ ಫಲಿತಾಂಶ ದಾಖಲಿಸಿವೆ. ಪಿಯು  ಫಲಿತಾಂಶದಲ್ಲಿ ರಾಜ್ಯದ 47 ಕಾಲೇಜುಗಳು ಶೂನ್ಯ ಫಲಿತಾಂಶ ಪಡೆದಿವೆ. ಈ ಪೈಕಿ ಒಂದು ಸರ್ಕಾರಿ ಎರಡು ವಿಭಜಿತ, 44 ಖಾಸಗಿ ಕಾಲೇಜುಗಳಿವೆ. ಪ್ರತಿ ಬಾರಿ ಶೂನ್ಯ ಫಲಿತಾಂಶ ದಾಖಲಾದಾಗಲೂ ಸಂಸ್ಥೆಗಳ ವಿರುದ್ಧ  ಶಿಕ್ಷಣ ಇಲಾಖೆ ಕ್ರಮ ಕೇವಲ ನೋಟೀಸ್ ಗೆ ಸೀಮಿತವಾದ ಕಾರಣ ಈ ಬಾರಿ ಕಳೆದ ಬಾರಿಗಿಂತ 3  ಹೆಚ್ಚಿನ  ಕಾಲೇಜುಗಳಲ್ಲಿ ಶೂನ್ಯ ಫಲಿತಾಂಶ  ಬಂದಿದೆ.

ಶಿಕ್ಷಣ ಇಲಾಖೆ ಕ್ರಮ ಫಲಿತಾಂಶಗಳಂತೆಯೇ ಕಳಪೆಯಾಗಿರುವ ಪರಿಣಾಮ ಕಳೆದ 5  ವರ್ಷಗಳಿಂದಲೂ ಶೂನ್ಯ ಫಲಿತಾಂಶ ಗಳಿಸುತ್ತಿರುವ ಶಿಕ್ಷಣ ಸಂಸ್ಥೆಗಳ ಸಾಧನೆ ಯಥಾ ಸ್ಥಿತಿಯಲ್ಲೇ ಸಾಗಿದೆ. ಈಗಾಗಲೇ ಎಸ್.ಎಸ್.ಎಲ್.ಸಿ ಫಲಿತಾಂಶ ಪ್ರಕಟವಾಗಿ ಪಿ.ಯು.ಸಿ ಪ್ರವೇಶ ಪ್ರಕ್ರಿಯೆಯೂ ಪ್ರಾರಂಭವಾಗಿದೆ. ಆದರೆ ಮಾನ್ಯತೆ ರದ್ದುಗೊಳಿಸಲು ಶಿಕ್ಷಣ ಇಲಾಖೆ ತಳೆದಿರುವ ದ್ವಂದ್ವ ನಿಲುವಿನಿಂದ ಶೂನ್ಯ ಸಾಧನೆ ಮಾಡಿದ್ದ ಶಿಕ್ಷಣ ಸಂಸ್ಥೆಗಳಿಗೆ ವರದಾನವಾಗಿ ಪರಿಣಮಿಸಿದೆ. ಪ್ರವೇಶ ಪ್ರಕ್ರಿಯೆ ಮುಕ್ತಾಯಗೊಳ್ಳುವುದಕ್ಕೂ ಮುನ್ನ ಶೂನ್ಯ ಫಲಿತಾಂಶ ಕಾಲೇಜುಗಳ ಮಾನ್ಯತೆ ರದ್ದುಗೊಳಿಸದೇ ಇದ್ದರೆ, ಮತ್ತೆ ವಿದ್ಯಾರ್ಥಿಗಳು ಪ್ರವೇಶ ಪಡೆಯುವ ಸಾಧ್ಯತೆ ಇದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com