ಮೊನ್ಸ್ಯಾಂಟೊ ವಿರುದ್ಧ ಪ್ಯಾರಿಸ್ ನಲ್ಲಿ ಸಾವಿರಾರು ಜನರ ಪ್ರತಿಭಟನೆ
ಮೊನ್ಸ್ಯಾಂಟೊ ವಿರುದ್ಧ ಪ್ಯಾರಿಸ್ ನಲ್ಲಿ ಸಾವಿರಾರು ಜನರ ಪ್ರತಿಭಟನೆ

ಮೊನ್ಸ್ಯಾಂಟೊ ಮತ್ತು ತಳಿ ಮಾರ್ಪಾಟು ಬೆಳೆಗಳ ವಿರುದ್ಧ ವಿಶ್ವದಾದ್ಯಂತ ಸಾವಿರಾರು ಜನರ ಪ್ರತಿಭಟನೆ

ಅಮೇರಿಕದ ಜೈವಿಕ ತಂತ್ರಜ್ಞಾನ ದೈತ್ಯ ಮೊನ್ಸ್ಯಾಂಟೊ ಮತ್ತು ಅದರ ಜೈವಿಕ ತಳಿ ಮಾರ್ಪಾಟು ಬೆಳೆಗಳು ಹಾಗೂ ಕ್ರಿಮಿನಾಶಕಗಳ ವಿರುದ್ಧದ ಪ್ರತಿಭಟನಾ ನಡಿಗೆಗೆ

ಪ್ಯಾರಿಸ್: ಅಮೇರಿಕದ ಜೈವಿಕ ತಂತ್ರಜ್ಞಾನ ದೈತ್ಯ ಮೊನ್ಸ್ಯಾಂಟೊ ಮತ್ತು ಅದರ ಜೈವಿಕ ತಳಿ ಮಾರ್ಪಾಟು ಬೆಳೆಗಳು ಹಾಗೂ ಕ್ರಿಮಿನಾಶಕಗಳ ವಿರುದ್ಧದ ಪ್ರತಿಭಟನಾ ನಡಿಗೆಗೆ ವಿಶ್ವದಾದ್ಯಂತ ವಿವಿಧ ನಗರಗಳಲ್ಲಿ ಜನರು ಬೀದಿಗಿಳಿದಿದ್ದರು.

ಅಮೆರಿಕಾದ 'ಆಕ್ಯುಪೈ ಮೂವ್ ಮೆಂಟ್' ನ ಅಂಗವಾದ ಮೊನ್ಸ್ಯಾಂಟೊ ವಿರುದ್ಧದ ಮೂರನೇ ವಾರ್ಷಿಕ ಪ್ರತಿಭಟನಾ ಮೆರವಣಿಗೆ ೪೦ ದೇಶಗಳ ಸುಮಾರು ೪೦೦ ನಗರಗಳಲ್ಲಿ ಹಮ್ಮಿಕೊಳ್ಳಲಾಗಿತ್ತು. ಅಮೇರಿಕಾದಿಂದ ಆಫ್ರಿಕಾದವರೆಗೆ ಹಾಗೂ ಹಲವಾರು ಯೂರೋಪ್ ದೇಶಗಳ ನಗರಗಳಲ್ಲಿ ನೆನ್ನೆ ಈ ಮೆರವಣಿಗೆ ನಡೆದಿದೆ. ಈ ಸಂಸ್ಥೆಯ ಯೂರೋಪಿನ ಕೆಂದ್ರ ಸ್ಥಳವಾದ ಸ್ವಿಸ್ ನಗರಗಳಾದ ಬೆಸೆಲ್ ಮತ್ತು ಮಾರ್ಗ್ಸ್ ನಲ್ಲಿ ಸುಮಾರು ೨೫೦೦ ಕ್ಕೂ ಹೆಚ್ಚು ಜನ ಮೊನ್ಸ್ಯಾಂಟೊ ವಿರುದ್ಧದ ಪ್ರತಿಭಟನೆಗಳಲ್ಲಿ ಭಾಗಿಯಾಗಿದ್ದರು.

ಪ್ಯಾರಿಸ್ ನಲ್ಲಿ ಸುಮಾರು ೩೦೦೦ ಸಾವಿರಕ್ಕೂ ಹೆಚ್ಚು ಜನ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಾಗಿ ತಿಳಿದುಬಂದಿದೆ. ಮೊನ್ಸ್ಯಾಂಟೊದ ಒಂದು ಕ್ರಿಮಿನಾಶಕದಲ್ಲಿ ಕಂಡು ಬರುವ ಒಂದು ವಸ್ತು ಮನುಷ್ಯನಿಗೆ ಕ್ಯಾನ್ಸರ್ ತರುವುದಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಪಟ್ಟಿ ಮಾಡಿರುವ ಹಿನ್ನಲೆಯಲ್ಲಿ ಜನರ ಆಕ್ರೋಶ ಹೆಚ್ಚಾಗಿದೆ.

ಮೊನ್ಯಾಂಟೊ ವಿರುದ್ಧ ಸ್ವತಂತ್ರ ತನಿಖೆ ನಡೆಸಬೇಕೆಂದು ಪ್ರತಿಭಟನಕಾರರು ಆಗ್ರಹಿಸಿದ್ದಾರೆ.

Related Stories

No stories found.

Advertisement

X
Kannada Prabha
www.kannadaprabha.com