ಮತ್ತೆ ಮುಖ್ಯಮಂತ್ರಿಯಾದ ಮೊದಲ ದಿನವೇ ೨೦೧ ಅಮ್ಮ ಉಪಹಾರ ಗೃಹಗಳ ಅನಾವರಣ

ಮತ್ತೆ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಮೊದಲ ದಿನವಾದ ಭಾನುವಾರದಂದೆ ತಮಿಳುನಾಡಿನಾದ್ಯಂತ ಜಯಲಲಿತಾ ವಿಡಿಯೋ ಸಮಾವೇಶದ
ಅಮ್ಮ ಕ್ಯಾಂಟೀನ್ ನಲ್ಲಿ ಊಟ ಸವಿಯುತ್ತಿರುವ ಜನ
ಅಮ್ಮ ಕ್ಯಾಂಟೀನ್ ನಲ್ಲಿ ಊಟ ಸವಿಯುತ್ತಿರುವ ಜನ
Updated on

ಚೆನ್ನೈ: ಮತ್ತೆ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಮೊದಲ ದಿನವಾದ ಭಾನುವಾರದಂದೆ ತಮಿಳುನಾಡಿನಾದ್ಯಂತ ಜಯಲಲಿತಾ ವಿಡಿಯೋ ಸಮಾವೇಶದ ಮೂಲಕ ೨೦೧ ಅಮ್ಮ ಉಪಹಾರ ಗೃಹಗಳನ್ನು ಉದ್ಘಾಟಿಸಿದ್ದಾರೆ. ಈಗ ಅಮ್ಮ ಉಪಹಾರ ಗೃಹಗಳ ಸಂಖ್ಯೆ ೨೯೭ ರಿಂದ ೪೯೮ಕ್ಕೆ ಏರಿದೆ.

ಭಾನುವಾರ ಅನಾವರಣಗೊಂಡ ಕ್ಯಾಂಟೀನ್ ಗಳಲ್ಲಿ ೪೫ ಚೆನ್ನೈನಲ್ಲಿ, ಕೊಯಂಬತ್ತೂರು, ಮಧುರೈ, ತಂಜಾವೂರು ಮತ್ತು ಧಿಂಡಿಗಲ್ ಗಳಲ್ಲಿ ತಲಾ ನಾಲ್ಕು ಹಾಗು ೧೨೪ ಮುನ್ಸ್ಲಿಪಾಲಿಟಿಗಳಲ್ಲಿ ೧೨೮ ಕ್ಯಾಂಟೀನ್ ಗಳು ಹಾಗು ೪ ಸರ್ಕಾರಿ ಆಸ್ಪತ್ರೆಗಳಲ್ಲಿ ತಲೆ ಎತ್ತಿವೆ.

ಈ ಜನಸ್ನೇಹಿ ಕ್ಯಾಂಟಿನ್ ಗಳಲ್ಲಿ ಇಡ್ಲಿ ಮತ್ತು ಪೊಂಗಲ್ ಅನ್ನು ಕ್ರಮವಾಗಿ ೧ ರೂ ಮತ್ತು  ೫ ರೂಗಳಿಗೆ ಬೆಳಗಿನ ಉಪಹಾರವಾಗಿ ನೀಡಲಾಗುತ್ತದೆ. ಅನ್ನ ಸಾಂಬಾರು, ಚಿತ್ರಾನ್ನ, ಮತ್ತು ಪುಳಿಯೋಗರೆಗಳನ್ನು ೫ ರುಪಾಯಿಗೆ ಹಾಗು ಮೊಸರನ್ನವನ್ನು ೩ ರುಪಾಯಿಗೆ ಮಧ್ಯಾಹ್ನದ ಊಟಕ್ಕೆ ನೀಡಲಾಗುತ್ತದೆ. ರಾತ್ರಿಯೂಟಕ್ಕೆ ೨ ಚಪಾತಿ ಹಾಗು ಒಂದು ಲೋಟ ಮೊಸರನ್ನು ೩ ರುಪಾಯಿಗೆ ಮಾರಲಾಗುತ್ತದೆ. ಬಡಜನ, ದಿನಗೂಲಿ ಕಾರ್ಮಿಕರು,  ಚಾಲಕರು ಇತ್ಯಾದಿ ಶ್ರಮಿಕ ವರ್ಗಕ್ಕೆ ಈ ಯೋಜನೆ ಬಹಳ ಉಪಕಾರಿಯಾಗಿದೆ.

ಫೆಬ್ರವರಿ ೯ ೨೦೧೩ ರಲ್ಲಿ ಮೊದಲು ಜಾರಿಗೊಂಡ ಯೋಜನೆಯಿಂದ ಇಲ್ಲಿಯವರೆಗೆ ಚನ್ನೈನಲ್ಲಿ ೨೦೭ ಅಮ್ಮ ಉಪಹಾರ ಗೃಹಗಳು ತಲೆ ಎತ್ತಿವೆ.

ಈ ಉಪಹಾರ ಗೃಹಗಳಿಗೆ ಸಿಕ್ಕಿರುವ ಅಭೂತಪೂರ್ವ ಯಶಸನ್ನು ಅಧ್ಯಯನ ಮಾಡಿ ತಮ್ಮ ದೇಶದಲ್ಲೂ ಇಂತಹ ಯೋಹನೆಯನ್ನು ಜಾರಿಗೊಳಿಸಲು ಈಜಿಪ್ಟಿನ ಅಧಿಕಾರಿಗಳು ಸೇರಿದಂತೆ ದೆಹಲಿ, ರಾಜಸ್ಥಾನ, ಕರ್ನಾಟಕ, ಆಂಧ್ರ ಪ್ರದೇಶ ಮತ್ತು ಪಂಜಾಬ್ ರಾಜ್ಯದ ಅಧಿಕಾರಿಗಳು ಕೂಡ ಅಧ್ಯಯನ ಮಾಡಿ ಆ ಯೋಜನೆಯನ್ನು ಪ್ರಶಂಸಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com