ಇಳಿಕೆ ಕಂಡ ದಂಗೆ: ತ್ರಿಪುರ ರಾಜ್ಯದ್ಯಂತ ಎ ಎಫ್ ಎಸ್ ಪಿ ಎ ತೆರವು

ಚಾರಿತ್ರಿಕ ನಿರ್ಣಯದಲ್ಲಿ, ತ್ರಿಪುರಾ ಸರ್ಕಾರ ವಿವಾದಾತ್ಮಕ ಭದ್ರತಾ ಪಡೆಗಳ ವಿಶೇಷ ಅಧಿಕಾರ ಕಾಯ್ದೆಯನ್ನು (ಎ ಎಫ್ ಎಸ್ ಪಿ ಎ) ರಾಜ್ಯಾದ್ಯಂತ ತೆರವುಗೊಳಿಸಲು
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ಚಾರಿತ್ರಿಕ ನಿರ್ಣಯದಲ್ಲಿ, ತ್ರಿಪುರಾ ಸರ್ಕಾರ ವಿವಾದಾತ್ಮಕ ಭದ್ರತಾ ಪಡೆಗಳ ವಿಶೇಷ ಅಧಿಕಾರ ಕಾಯ್ದೆಯನ್ನು (ಎ ಎಫ್ ಎಸ್ ಪಿ ಎ) ರಾಜ್ಯಾದ್ಯಂತ ತೆರವುಗೊಳಿಸಲು ನಿರ್ಧರಿಸಿದೆ.

ವರದಿಗಳ ಪ್ರಕಾರ ಕಳೆದ ಅರ್ಧ ವರ್ಷದ ಪರಾಮರ್ಶೆಯ ನಂತರ ಈ ಕಾಯ್ದೆಯನ್ನು ವಿಸ್ತರಿಸುವ ಅಗತ್ಯ ಇಲ್ಲ ಪೊಲೀಸರು ಸರ್ಕಾರಕ್ಕೆ ತಿಳಿಸಿದ್ದಾರೆ ಎಂದು ತಿಳಿದುಬಂದಿದೆ.

ಎ ಎಫ್ ಎಸ್ ಪಿ ಎ ಹಿಂತೆಗೆದುಕೊಳ್ಳಲು ರಾಜ್ಯಸರ್ಕಾರ ಕೆಂದ್ರ ಗೃಹ ಸಚಿವಾಲಯದ ಮೊರೆ ಹೋಗಲಿದೆ ಎಂದು ತಿಳಿದುಬಂದಿದೆ.

೧೯೯೭ ಫೆಬ್ರವರಿಯಲ್ಲಿ ೪೦ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಈ ಕಾಯ್ದೆಯನ್ನು ಜಾರಿ ಮಾಡಲಾಗಿತ್ತು. ರಾಜ್ಯದಲ್ಲಿ ದಂಗೆಗಳು ಕಡಿಮೆಯಾಗುತ್ತಾ ಬಂದಂತೆ ಜೂನ್ ೨೦೧೩ ರಲ್ಲಿ ೯ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಈ ಕಾಯ್ದೆಯನ್ನು ರಾಜ್ಯ ಸರ್ಕಾರ ಹಿಂತೆಗೆದುಕೊಂಡಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com