ಕಡ್ಡಾಯ ಮತಕ್ಕೆ ಶೇ 89ರ ಜಯ

ರಾಜ್ಯದಲ್ಲಿ ಶುಕ್ರವಾರ ನಡೆದ ಮೊದಲ ಹಂತದ ಗ್ರಾಮ ಪಂಚಾಯ್ತಿ ಚುನಾವಣೆಯಲ್ಲಿ ಈ ವರ್ಷವೂ ದಾಖಲೆ ಮತದಾನ ನಡೆದಿದೆ...
ಮತ ಚಲಾಯಿಸಿದ ನಾಗರಿಕರು
ಮತ ಚಲಾಯಿಸಿದ ನಾಗರಿಕರು
Updated on

ಬೆಂಗಳೂರು: ರಾಜ್ಯದಲ್ಲಿ ಶುಕ್ರವಾರ ನಡೆದ ಮೊದಲ ಹಂತದ ಗ್ರಾಮ ಪಂಚಾಯ್ತಿ ಚುನಾವಣೆಯಲ್ಲಿ ಈ ವರ್ಷವೂ ದಾಖಲೆ ಮತದಾನ ನಡೆದಿದೆ.

ಮತದಾನ ಮುಗಿದ ನಂತರ ಲಭ್ಯವಾದ ಪ್ರಾಥಮಿಕ ವರದಿಗಳ ಪ್ರಕಾರ ಶೇ 89ರಷ್ಟು ಜನರು ತಮ್ಮ ಹಕ್ಕು ಚಲಾಯಿಸಿದ್ದಾರೆ. ಆದರೆ, ಇದು ಅಂತಿಮ ಮಾಹಿತಿಯಿಲ್ಲ. ರಾತ್ರಿ 10 ಗಂಟೆಯ ನಂತರವೂ ಮಾಹಿತಿ ಸಂಸ್ಕರಣೆ ನಡೆಯಿತು. ಕಳೆದ ಬಾರಿ ಶೇ 83ರಷ್ಟು ಮತದಾನವಾಗಿತ್ತು. ಈ ಬಾರಿ ಕಡ್ಡಾಯ ಮತದಾನ ಜಾರಿಯಾಗಿದ್ದು, ಇದರಿಂದ ಮತದಾ ಸುಮಾರು ಶೇ 6ರಷ್ಟು ಹೆಚ್ಚಳವಾಗಿದೆ ಎನ್ನಲಾಗಿದೆ.

ರಾಜ್ಯದಲ್ಲಿ ಅಲ್ಲಲ್ಲಿ ಸಣ್ಣಪುಟ್ಟ ಅಹಿತಕರ ಘಟನೆ ನಡೆದಿರುವುದು ಬಿಟ್ಟರೆ ಮತದಾನ ಬಹುತೇಕ ಶಾಂತಿಯುತವಾಗಿತ್ತು. ಬೆಳಗ್ಗೆ ಮಂದಗತಿಯಿಂದ ಆರಂಭವಾದ ಮತದಾನ, ಸಂಜೆ ವೇಳೆ ಬಿರುಸು ಪಡೆಯಿತು. ಕೆಲವೆಡೆ ಮಳೆ ಸುರಿಯಿತಾದರೂ, ಅದರಿಂದ ಮತದಾನದ ಉತ್ಸಾಹಕ್ಕೆ ಭಂಗವೇನೂ ಆಗಲಿಲ್ಲ. ಕೆಲವು ಗ್ರಾಮ ಪಂಚಾಯತಿಗಳಲ್ಲಿ ಮತಪತ್ರದಲ್ಲಿ ಅಭ್ಯರ್ಥಿಗಳ ಚಿಹ್ನೆ ಹಾಗೂ ಹೆಸರು ಅದಲು ಬದಲಾಗಿರುವ ಪ್ರಕರಣಗಳು ನಡೆದಿವೆ. ಅಂಥ ಕಡೆಗಳಲ್ಲಿ ಮೇ 31ರಂದು ಮರು ಮತದಾನ ನಡೆಯಲಿದೆ. ಮೊದಲ ಹಂತದಲ್ಲಿ ಆಗಿರುವ ಮತದಾನ ಪ್ರಮಾಣದ ಸ್ಪಷ್ಟ ಮಾಹಿತಿ ಶನಿವಾರ ಲಭ್ಯವಾಗಲಿದೆ.

 ರಾಜ್ಯದ 15 ಜಿಲ್ಲೆಗಳ 3,154 ಗ್ರಾಮ ಪಂಚಾಯ್ತಿಗಳಿಗೆ ಶುಕ್ರವಾರ ಮತದಾನ ನಡೆದಿದೆ. ಉಳಿದ ಗ್ರಾಮ ಪಂಚಾಯ್ತಿಗಳಿಗೆ ಜೂನ್ 2ರಂದು ಚುನಾವಣೆ ನಡೆಯಲಿದೆ. ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಮೈಸೂರು ಜಿಲ್ಲೆ ಸಿದ್ದರಾಮನಹುಂಡಿ ಮತಗಟ್ಟೆಯಲ್ಲಿ ಮತ ಚಲಾಯಿಸಿದರು. ಗುರುತಿನ ಚೀಟಿ ಮರೆತು ಬಂದಿದ್ದರೂ ಚುನಾವಣಾಧಿಕಾರಿ ಅವರಿಗೆ ಮತದಾನಕ್ಕೆ ಅವಕಾಶ ಮಾಡಿಕೊಟ್ಟರು. ಹಾಸನ ಜಿಲ್ಲೆ ಮಾರಗೌಡನಹಳ್ಳಿ ಪಂಚಾಯ್ತಿಯ ಪಡುವನಹಿಪ್ಪೆ ಗ್ರಾಮದಲ್ಲಿ ಅವಿರೋಧ ಆಯ್ಕೆ ನಡೆದ ಕಾರಣ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಮತ್ತು ಕುಟುಂಬ ಸದಸ್ಯರು ಈ ಸಲ ಮತದಾನದಿಂದ ದೂರ ಉಳಿಯಬೇಕಾಯಿತು.

ಶನಿವಾರ ಮರು ಮತದಾನ:
ಚುನಾವಣೆಗೆ ಮೈಸೂರು ಮತ್ತು ಬೆಳಗಾವಿ ವಿಭಾಗದ 15 ಜಿಲ್ಲೆಗಳಲ್ಲಿ ಶುಕ್ರವಾರ ಮತದಾನ ನಡೆದಿದ್ದು, 11 ಮತಗಟ್ಟೆಗಳಲ್ಲಿ ಮರು ಮತದಾನಕ್ಕೆ ರಾಜ್ಯ ಚುನಾವಣೆ ಆಯೋಗ ಆದೇಶಿಸಿದೆ. ಹಲವು ಕಾರಣಗಳಿಂದ ಮತಗಟ್ಟೆಗಳಲ್ಲಿ ಮತದಾನ ಸ್ಥಗಿತಗೊಂಡಿದ್ದು, ಜಿಲ್ಲಾಧಿಕಾರಿಗಳು ಮರು ಮತದಾನಕ್ಕೆ ರಾಜ್ಯ ಚುನಾವಣೆ ಆಯೋಗ ಆದೇಶಿಸಿದೆ. ಹಲವು ಕಾರಣಗಳಿಂದ ಮತಗಟ್ಟೆಗಳಲ್ಲಿ ಮತದಾನ ಸ್ಥಗಿತಗೊಂಡಿದ್ದು, ಜಿಲ್ಲಾಧಿಕಾರಿಗಳು ಮರು ಮತದಾನ ನಡೆಸಲು ಆಯೋಗಕ್ಕೆ ಪ್ರಸ್ತಾವನೆ ಸಲ್ಲಿಸಿದ್ದಾರೆ.

ಅದರಂತೆ ಮೇ 31ರಂದು ಮರು ಮತದಾನ ನಡೆಸಲು ಆಯೋಗಕ್ಕೆ ಪ್ರಸ್ತಾವನೆ ಸಲ್ಲಿಸಿದ್ದಾರೆ. ಅದರಂತೆ ಮೇ 31ರಂದು ಮರು ಮತದಾನ ನಡೆಸಲು ಆದೇಶಿಸಲಾಗಿದೆ. ಅಂದು ಬೆಳಿಗ್ಗೆ 7ರಿಂದ ಸಂಜೆ 5ರವರೆಗೆ ಮತದಾನ ನಡೆಯಲಿದ್ದು, ಮತದಾರರ ಬಲಗೈ ಹೆಬ್ಬೆರಳಿಗೆ ಶಾಯಿ ಹಚ್ಚಲಾಗುತ್ತದೆ ಎಂದು ಚುನಾವಣೆ ಆಯೋಗದ ಅಧೀನ ಕಾರ್ಯದರ್ಶಿ ಆರ್. ಚಂದ್ರಶೇಖರ್ ತಿಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com