ಐಐಟಿ ಮದ್ರಾಸ್ ವಿವಾದ: ವಿಶ್ವವಿದ್ಯಾಲಯದ ಆವರಣದ ಹೊರಗೆ ವಿದ್ಯಾರ್ಥಿಗಳ ಪ್ರತಿಭಟನೆ

ಜಾತೀಯತೆಯ ಕಾರಣಗಳಿಗಾಗಿ ಐ ಐ ಟಿ ಮದ್ರಾಸ್ ಸಂಸ್ಥೆಯ ಅಂಬೇಡ್ಕರ್ ಪೆರಿಯಾರ್ ಅಧ್ಯಯನ ಸಂಘಟನೆಯ(ಎ ಪಿ ಎಸ್ ಸಿ) ಮಾನ್ಯತೆಯನ್ನು ರದ್ದುಪಡಿಸಿರುವ
ಐಐಟಿ ಮದ್ರಾಸ್
ಐಐಟಿ ಮದ್ರಾಸ್
Updated on

ಚೆನ್ನೈ: ಜಾತೀಯತೆಯ ಕಾರಣಗಳಿಗಾಗಿ ಐ ಐ ಟಿ ಮದ್ರಾಸ್ ಸಂಸ್ಥೆಯ ಅಂಬೇಡ್ಕರ್ ಪೆರಿಯಾರ್ ಅಧ್ಯಯನ ಸಂಘಟನೆಯ(ಎ ಪಿ ಎಸ್ ಸಿ) ಮಾನ್ಯತೆಯನ್ನು ರದ್ದುಪಡಿಸಿರುವ ಹಿನ್ನಲೆಯಲ್ಲಿ ಬಲಪಂಥೀಯ ಗುಂಪುಗಳು ಹಾಗೂ ಎಡಪಂಥೀಯ ಗುಂಪುಗಳು ವಿಶ್ವವಿದ್ಯಾಲಯದ ಆವರಣದ ಹೊರಗೆ ಶನಿವಾರ ಬೆಳಗ್ಗೆ ಪ್ರತಿಭಟನೆ ನಡೆಸಿದರು.

ಪ್ರತಿಭಟನೆಯನ್ನು ನಿಯಂತ್ರಿಸಲು ಬೆಳಗ್ಗಿನಿಂದಲೆ ವಿಶ್ವವಿದ್ಯಾಲಯವನ್ನು ಪೊಲೀಸರು ದಟ್ಟವಾಗಿ ಸುತ್ತುವರೆದಿದ್ದ ದೃಶ್ಯ ಕಂಡು ಬಂತು.

ಕ್ರಾಂತಿಕಾರಿ ವಿದ್ಯಾರ್ಥಿ ಯುವ ಪಡೆಯ ಸದಸ್ಯರು ವಿಶ್ವವಿದ್ಯಾಲಯದ ಒಳಗೆ ಮನುಧರ್ಮ ತುಂಬಿತುಳುಕುತ್ತಿದೆ ಎಂದು ಬಿಲ್ಲೆಗಳನ್ನು ಹಂಚಿ ಪ್ರತಿಭಟನೆ ಮಾಡಿದರು.

ಸಿ ಪಿ ಎಂ ಯುವ ಘಟಕ, ಡಿ ವೈ ಎಫ್ ಐ ಸದಸ್ಯರು ಕೂಡ ಎ ಪಿ ಎಸ್ ಸಿ ಬೆಂಬಲಿಸಿ ಪ್ರತಿಭಟನೆ ನಡೆಸಿದವು. ಅಲ್ಲೇ ಹತ್ತಿರದ ಮಧ್ಯ ಕೈಲಾಶ್ ವೃತ್ತದ ಬಳಿ ದ್ರಾವಿಡ ಸಂಘಟನೆ ಪೆರಿಯಾರ್ ದ್ರಾವಿಡರ್ ಕಝಾಗಂ ಸದಸ್ಯರು ಕೂಡ ಐಐಟಿ ಆಡಳಿತ ಮಂಡಲಿಯ ವಿರುದ್ಧ ಪ್ರತಿಭಟನೆ ನಡೆಸಿ ಘೋಷಣೆಗಳನ್ನೂ ಕೂಗಿದರು.

ಆಸಕ್ತಿದಾಯಕವಾಗಿ ಬಲಪಂಥೀಯ ಸಂಘಟನೆ 'ಹಿಂದು ಮಕ್ಕಳ ಕಟ್ಚಿ'ಯಾ ಅಧ್ಯಕ್ಷ ಅರ್ಜುನ್ ಸಂಪತ್ ಕೂಡ ಪ್ರತಿಭಟನೆ ನಡೆಸಿ ಸಂಸ್ಥೆಯನ್ನು ಅಂಬೇಡ್ಕರ್ ವಿಶ್ವವಿದ್ಯಾಲಯ ಎಂದು ಮರುನಾಮಕರಣ ಮಾಡುವಂತೆ ಆಗ್ರಹಿಸಿದರು.

ಪ್ರತಿಭಟನಕಾರರನ್ನು ಪೊಲೀಸರು ಬಂಧಿಸಿ ಬಿಡುಗಡೆ ಮಾಡಿದ್ದಾರೆ. ಈ ಮಧ್ಯೆ ಬರಹಗಾರ್ತಿ, ಹೋರಾಟಗಾರ್ತಿ ಅರುಂಧತಿ ರಾಯ್ ಎ ಪಿ ಎಸ್ ಸಿ ಸಂಘಟನೆಗೆ ಇಮೇಲ್ ಮೂಲಕ ಬೆಂಬಲ ವ್ಯಕ್ತಪಡಿಸಿ ಹೋರಾಟ ಜಾರಿಯಲ್ಲಿಡುವಂತೆ ಕಿವಿಮಾತು ಹೇಳಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com