ಅಲ್ಪಸಂಖ್ಯಾತರಲ್ಲಿ ಭಯದ ವಾತಾವರಣ ಸೃಷ್ಟಿಸಬೇಡಿ: ಜಾತ್ಯಾತೀತರಿಗೆ ನಖ್ವಿ ಕಿವಿಮಾತು
ನವದೆಹಲಿ: 'ರಾಜಕೀಯ ಜಾತ್ಯಾತೀತವಾದಿಗಳು' ದೇಶದಲ್ಲಿ ಅಲ್ಪಸಂಖ್ಯಾತರ ನಡುವೆ ಭಯಭೀತಿಯ ವಾತಾವರಣ ಸೃಷ್ಟಿಸುವುದರಿಂದ ದೂರ ಉಳಿಯಬೇಕು ಎಂದು ಕೇಂದ್ರ ಸಚಿವ ಮುಖ್ತಾರ್ ಅಬ್ಬಾಸ್ ನಕ್ವಿ ಹೇಳಿದ್ದಾರೆ.
"'ರಾಜಕೀಯ ಜಾತ್ಯಾತೀತವಾದಿಗಳು' ದೇಶದಲ್ಲಿ ಅಲ್ಪಸಂಖ್ಯಾತರ ನಡುವೆ ಭಯಭೀತಿಯ ವಾತಾವರಣ ಸೃಷ್ಟಿಸುವುದರಿಂದ ಹಾಗು ತಮ್ಮ ರಾಜಕೀಯ ಹಿತಾಸಕ್ತಿಗೆ ಅವರನ್ನು ತಪ್ಪು ದಾರಿಗೆ ಎಳೆಯುವುದರಿಂದ ದೂರ ಉಳಿಯಬೇಕು" ಎಂದು ಕೇಂದ್ರ ವಕ್ಫ್ ಭವನದ ಉದ್ಘಾಟನಾ ಸಮಾರಂಭದ ವೇಳೆಯಲ್ಲಿ ತಿಳಿಸಿದ್ದಾರೆ.
ಭಾರತದಲ್ಲಿ ದಶಕಗಳಿಂದ ಅಲ್ಪಸಂಖ್ಯಾತರ ಸಾಮಾಜಿಕ-ಆರ್ಥಿಕ ಮತ್ತು ಶೈಕ್ಷಣಿಕ ಅಭಿವೃದ್ಧಿಗೆ ಯಾವುದೇ ಪ್ರಾಮಾಣಿಕ ಪ್ರಯತ್ನಗಳು ನಡೆದಿಲ್ಲ ಎಂದು ಅಲ್ಪಸಂಖ್ಯಾತರ ವ್ಯವಹಾರಗಳ ಸಚಿವ ನಕ್ವಿ ಹೇಳಿದ್ದಾರೆ.
"ಈ ಸಮುದಾಯದವರನ್ನು ದುರುಪಯೋಗಪಡಿಸಿಕೊಳ್ಳಲು ಜಾತ್ಯಾತೀತರು ಎನಿಸಿಕೊಂಡವರು ಸ್ಪರ್ಧೆಗೆ ಬಿದ್ದಿದ್ದಾರೆ. ಇಂತಹ ನಡೆಯಿಂದ ಅಲ್ಪಸಂಖ್ಯಾತರ ಅಭಿವೃದ್ಧಿ ಅದರಲ್ಲೂ ಮುಸ್ಲಿಮರದ್ದು ಬರೀ ಕಾಗದದ ಮೇಲೆ ಉಳಿದಿದೆ" ಎಂದು ತಮ್ಮ ಅಧಿಕೃತ ಟ್ವಿಟ್ಟರ್ ಖಾತೆಯ ಮೂಲಕ ಹಂಚಿಕೊಂಡ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ದೇಶದ ಅಭಿವೃದ್ಧಿಯಲ್ಲಿ ಭಾಗವಹಿಸುವುದರ ಮೂಲಕ ಅಲ್ಪಸಂಖ್ಯಾತರಿಗೆ ಸಮಪಾಲು ನೀಡಲು ಮೋದಿ ಸರ್ಕಾರ ಶ್ರಮಿಸುತ್ತಿದೆ ಎಂದು ಅವರು ತಿಳಿಸಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ