
ನವದೆಹಲಿ: ಅಂತರಾಷ್ಟ್ರೀಯ ಭಯೋತ್ಪಾದಕ ಸಂಸ್ಥೆ ಇಸ್ಲಾಮಿಕ್ ಸ್ಟೇಟ್, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮುಸ್ಲಿಂ ಅವತರಿಣಿಕೆ ಎಂದು ಜನತಾದಳ (ಸಂಯುಕ್ತ) ಪಕ್ಷ ಆರೋಪಿಸಿದೆ.
"ಇಸ್ಲಾಮಿಕ್ ಸ್ಟೇಟ್ ಮತ್ತು ಆರ್ ಎಸ್ ಎಸ್ ಸ್ಪರ್ಧಿಗಳು. ಅಲ್ಲದೆ ಇಸ್ಲಾಮಿಕ್ ಸ್ಟೇಟ್ ಆರ್ ಎಸ್ ಎಸ್ ನ ಮುಸ್ಲಿಂ ಅವತರಿಣಿಕೆ" ಎಂದು ಜೆಡಿಯು ನ ಕೆ ಸಿ ತ್ಯಾಗಿ ಹೇಳಿದ್ದಾರೆ.
ಬಿಜೆಪಿ ಸರ್ಕಾರ ದಂಗೆಯೇಳುತ್ತಿರುವ ಮತಾಂಧರನ್ನು ತಡೆಯಲು ವಿಫಲವಾಗಿದೆ ಎಂದು ದೇಶದ ಬರಹಗಾರರು ಮತ್ತು ಕಲಾವಿದರು ಹೇಳಿದ್ದ ಹಾಗೆಯೇ, ಇತಿಹಾಸಕಾರ ಇರ್ಫಾನ್ ಹಬೀಬ್ ಅವರು ಆರ್ ಎಸ್ ಎಸ್ ಗೆ ಐ ಎಸ್ ಐ ಎಸ್ ಹೋಲಿಸಿದ ಹಿನ್ನಲೆಯಲ್ಲೇ ಜೆಡಿಯು ಈ ಹೇಳಿಕೆ ನೀಡಿದೆ.
ದೇಶದಲ್ಲಿ 'ಹೆಚ್ಚುತ್ತಿರುವ ಅಸಹನೆ'ಯನ್ನು ವಿರೋಧಿಸಿ ಪ್ರತಿಭಟಿಸುತ್ತಿರುವ ಸಾಹಿತಿಗಳು ಮತ್ತು ಚಿಂತಕರಿಗೆ ಕಾಂಗ್ರೆಸ್ ಮತ್ತು ಎಡಪಕ್ಷಗಳ ಬೆಂಬಲವಿದೆ ಎಂಬ ಆರೋಪವನ್ನು ತಳ್ಳಿ ಹಾಕಿದ್ದಾರೆ.
Advertisement