'ಮೇಕ್ ಇನ್ ಕರ್ನಾಟಕ' ಕ್ಕೆ ಬಂಡವಾಳ ಹೂಡಲು ಸಿದ್ದರಾಮಯ್ಯ ಕರೆ

ಭಾರತದ ವಿಮಾನಯಾನ ಕ್ಷೇತ್ರದಲ್ಲಿ ಬಂಡವಾಳ ಹೂಡಿಕೆ ಮತ್ತು ಇಲ್ಲಿನ ಅವಕಾಶಗಳನ್ನು ಬಳಸಿಕೊಳ್ಳಲು ಅಮೆರಿಕ ವಿಮಾನಯಾನ...
ಮುಖ್ಯಮಂತ್ರಿ ಸಿದ್ದರಾಮಯ್ಯ
ಮುಖ್ಯಮಂತ್ರಿ ಸಿದ್ದರಾಮಯ್ಯ
Updated on

ಬೆಂಗಳೂರು: ಭಾರತದ ವಿಮಾನಯಾನ ಕ್ಷೇತ್ರದಲ್ಲಿ ಬಂಡವಾಳ ಹೂಡಿಕೆ ಮತ್ತು ಇಲ್ಲಿನ ಅವಕಾಶಗಳನ್ನು ಬಳಸಿಕೊಳ್ಳಲು ಅಮೆರಿಕ ವಿಮಾನಯಾನ ಕಂಪನಿಗಳು ಮುಂದಾಗಿವೆ.

ಇಲ್ಲಿನ ಖಾಸಗಿ ಹೊಟೇಲ್‍ನಲ್ಲಿ ಯುಎಸ್ ಟ್ರೇಡ್ ಅಂಡ್ ಡೆವಲೆಪ್‍ಮೆಂಟ್ ಏಜೆನ್ಸಿಯಿಂದ ಕೇಂದ್ರ ಸರ್ಕಾರದ ನೆರವಿನಿಂದ ಆಯೋಜಿಸಿರುವ 3 ದಿನಗಳ ಅಮೆರಿಕ ಭಾರತ ವಿಮಾನಯಾನ ಶೃಂಗ ಸಭೆಯಲ್ಲಿ ಭಾರತದ ವಿಮಾನ ಯಾನ ಕ್ಷೇತ್ರದ ಅಭಿವೃದ್ಧಿ, ಬಂಡವಾಳ ಹೂಡಿಕೆಗೆ ಸಂಬಂಧಿಸಿ ಇರುವ ಅವಕಾಶಗಳ ಕುರಿತು ಚರ್ಚೆ ನಡೆದಿದೆ.
ಭಾರತದಲ್ಲಿ 100 ಸ್ಮಾರ್ಟ್ ಸಿಟಿಗಳ ಸ್ಥಾಪನೆ, 100 ವಿಮಾನ ನಿಲ್ದಾಣ ಸ್ಥಾಪನೆಯಂತಹ ಯೋಜನೆಗಳು ಪ್ರಕಟಗೊಂಡ ಬೆನ್ನಲ್ಲೇ ಅಮೆರಿಕದ ವಿಮಾನ ಕಂಪನಿಗಳು ಭಾರತದತ್ತ ಚಿತ್ತ ಹರಿಸಿವೆ ಎಂಬ ಮಾತುಗಳು ಶೃಂಗ ಸಭೆಯಲ್ಲಿ ಕೇಳಿಬಂತು. 
ವಿಮಾನಯಾನ ಕ್ಷೇತ್ರದ ತಂತ್ರಜ್ಞಾನ ಅಭಿವೃದ್ಧಿಯಲ್ಲಿ ಅಮೆರಿಕ ಮತ್ತು ಭಾರತ ಒಟ್ಟಾಗಿ ಹೆಜ್ಜೆ ಹಾಕುವುದು, ಭಾರತದ ವಿಮಾನಯಾನ ಕ್ಷೇತ್ರದ ಮೂಲಸೌಕರ್ಯ ಅಭಿವೃದ್ಧಿಗೆ ಬಂಡವಾಳ ಹೂಡಿಕೆ ಅಮೆರಿಕಾದ ಕಂಪೆನಿಗಳು ಆಸಕ್ತಿ ತಳೆದಿವೆ. ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಸಿಎಂ ಸಿದಟಛಿರಾಮಯ್ಯ, ಅಂತರಿಕ್ಷಯಾನ ಕ್ಷೇತ್ರದ 'ಪಥ ನಿರ್ಮಾಪಕ' ಎನಿಸಿರುವ ಕರ್ನಾಟಕದಲ್ಲಿ ಬಂಡವಾಳ ಹೂಡಿಕೆ ಮಾಡುವ ಮೂಲಕ 'ಮೇಕ್ ಇನ್ ಕರ್ನಾಟಕ' ಪಾಲುದಾರರಾಗಿ ಎಂದು ಜಾಗತಿಕ ಬಂಡವಾಳ ಹೂಡಿಕೆದಾರರಿಗೆ ಕರೆ ನೀಡಿದರು.
ಬಿಇಎಲ್, ಗ್ಯಾಸ್ ಟರ್ಬೈನ್ ಸಂಶೋಧನ ಘಟಕ, ಇಸ್ರೋ, ಏರೋನಾಟಿಕಲ್ ಡೆವೆಲೆಪ್‍ಮೆಂಟ್ ಏಜನ್ಸಿ, ಡಿಆರ್‍ಡಿಓ, ಹಾಗೂ ಐಐಎಸ್ಸಿಗಳನ್ನು ಹೊಂದುವ ಮೂಲಕ ಕರ್ನಾಟಕವು ಭಾರತ ಅಂತರಿಕ್ಷಯಾನ ಉದ್ಯಮದಲ್ಲಿ ಅಗ್ರಸ್ಥಾನದಲ್ಲಿದೆ. ಬೋಯಿಂಗ್, ಏರ್‍ಬಸ್, ಎಚ್‍ಸಿಎಲ್, ಹನಿವೆಲ್ ಸೇರಿದಂತೆ ಅಂತಾರಾಷ್ಟ್ರೀಯ ಮಟ್ಟದ ದೊಡ್ಡ ಕಂಪೆನಿಗಳು ಕರ್ನಾಟದಲ್ಲಿವೆ ಎಂದು ಹೇಳಿದ ಸಿಎಂ ಸಿದ್ದರಾಮಯ್ಯ, ಅಂತರಿಕ್ಷಯಾನ ಕ್ಷೇತ್ರದಲ್ಲಿ ಬಂಡವಾಳ ಹೂಡಿಕೆಗೆ ಕರ್ನಾಟಕ ಪ್ರಶಸ್ತ ತಾಣ ಎಂದು ಸಮರ್ಥಿಸಿಕೊಂಡರು.
ಕೇಂದ್ರ ವಿಮಾನಯಾನ ಸಚಿವ ಅಶೋಕ್ ಗಜಪತಿರಾಜು ಮಾತನಾಡಿ, ಯುವ ಭಾರತವನ್ನು ಕೌಶಲ್ಯ ಭಾರತ ಮಾಡುವುದು ನಮ್ಮ ಗುರಿ. ಯುವಕರಲ್ಲಿ ಕೌಶಲ್ಯಗಳನ್ನು ಬೆಳಸಲು ಸರ್ಕಾರ ಸಾಕಷ್ಟು ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಿದೆ. ದೇಶಿ ವಿಮಾನಯಾನ ವ್ಯವಸ್ಥೆ ಮತ್ತಷ್ಟು ಸುಧಾರಿಸುವುದು ನಮ್ಮ ಆದ್ಯತೆ. 
ಅದಕ್ಕೆ ಪೂರಕವಾಗಿ ನೀತಿ ರೂಪಿಸಲಾಗುವುದು ಎಂದರು. ಭಾರತದ ಅಮೇರಿಕಾ ರಾಯಭಾರಿ ರಿಚರ್ಡ್ ರಾಹುಲ್ ವರ್ಮಾ ಮತ್ತಿತರರು ಇದ್ದರು. ಯುಎಸ್ ಟ್ರೇಡ್ ಆ್ಯಂಡ್ ಡೆವಲೆಪ್‍ಮೆಂಟ್ ಏಜನ್ಸಿ ನಿರ್ದೇಶಕಿ ಲೀಸಾ ಅವರು ವಿಮಾನಯಾನ ಕ್ಷೇತ್ರದಲ್ಲಿನ ಅವಕಾಶವನ್ನು ವಿವರಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com