ಚಿನ್ನ ಸಂಬಂಧಿತ ಮೂರು ಯೋಜನೆಗಳಿಗೆ ಮೋದಿ ಚಾಲನೆ

ಚಿನ್ನ ಸಂಬಂಧಿ ಮೂರು ಯೋಜನೆಗಳಿಗೆ ಪ್ರಧಾನಿ ನರೇಂದ್ರ ಮೋದಿ ಗುರುವಾರ ಚಾಲನೆ ನೀಡಿದ್ದಾರೆ. ಒಂದು ಕಡೆ ಅಶೋಕ ಚಕ್ರ ಮತ್ತೊಂದು ಕಡೆ ಮಹಾತ್ಮ ಗಾಂಧಿ ಇರುವ 'ಭಾರತ ಚಿನ್ನದ ನಾಣ್ಯ'
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ಚಿನ್ನ ಸಂಬಂಧಿ ಮೂರು ಯೋಜನೆಗಳಿಗೆ ಪ್ರಧಾನಿ ನರೇಂದ್ರ ಮೋದಿ ಗುರುವಾರ ಚಾಲನೆ ನೀಡಿದ್ದಾರೆ. ಒಂದು ಕಡೆ ಅಶೋಕ ಚಕ್ರ ಮತ್ತೊಂದು ಕಡೆ ಮಹಾತ್ಮ ಗಾಂಧಿ ಇರುವ 'ಭಾರತ ಚಿನ್ನದ ನಾಣ್ಯ'ವನ್ನು ಕೂಡ ಬಿಡುಗಡೆ ಮಾಡಿದ್ದಾರೆ.

೫ ಗ್ರಾಂ ತೂಕದ ೧೫೦೦೦ ಚಿನ್ನದ ನಾಣ್ಯಗಳನ್ನೂ  ೧೦ ಗ್ರಾಂ ತೂಗುವ ೨೦೦೦೦ ಚಿನ್ನದ ನಾಣ್ಯಗಳನ್ನು ಮತ್ತು ೨೦ ಗ್ರಾಂ ನ ೩೭೫೦ ಚಿನ್ನದ ಬಾರುಗಳನ್ನು ಎಂ ಎಂ ಟಿ ಸಿ ಅಂಗಡಿಗಳ ಮೂಲಕ ಮಾರಾಟ ಮಾಡಲಾಗುತ್ತದೆ.

ಭಾರತೀಯರ ಮನೆಗಳಲ್ಲಿ ಸುಮ್ಮನೆ ಬಿದ್ದಿರುವ ೨೦,೦೦೦ ಟನ್ ನಷ್ಟು ಚಿನ್ನ ಬಳಕೆಗೆ ಬರಲಿ ಎಂಬುದು ಮತ್ತೊಂದು ಯೋಜನೆಯ ಉದ್ದೇಶ ಎನ್ನಲಾಗಿದೆ. ಬಳಸದೆ ಇರುವ ಚಿನ್ನದಿಂದ ಹಣ ಪಡೆಯಬಹುದಾದ ಈ ಒಂದು ಯೋಜನೆಯಲ್ಲಿ (ಗೋಲ್ಡ್ ಮಾನೆಟೈಸೇಶನ್ ಸ್ಕೀಮ್) ಕನಿಷ್ಟ ೩೦ ಗ್ರಾಂ ಚಿನ್ನದಿಂದ ಪ್ರಾರಂಭಸಿ ಸರ್ಕಾರಿ ಉಳಿತಾಯ ಖಾತೆಯಲ್ಲಿರಿಸಿ ಅದಕ್ಕೆ ಬಡ್ಡಿ ಪಡೆಯಬಹುದಾಗಿದೆ.

ಮತ್ತೊಂದು ಯೋಜನೆಯಾದ ಸಾವರಿನ್ ಗೋಲ್ಡ್ ಬಾಂಡ್ ಸ್ಕೀಮ್ ನಲ್ಲಿ, ಚಿನ್ನದಲ್ಲಿ ಹೂಡಿಕೆ ಮಾಡಲಾಗುವ ಸರ್ಕಾರದ ಬಾಂಡ್ ಗಳನ್ನು ಸಾರ್ವಜನಿಕರು ಖರೀದಿಸಬಹುದಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com