
ಬೆಂಗಳೂರು: ಟ್ವಿಟರ್ ಮೂಲಕ ತಮಗೆ ಜೀವ ಬೆದರಿಕೆ ಹಾಕಿರುವ ಬಗ್ಗೆ ತಾವು ತಲೆಕೆಡಿಸಿಕೊಂಡಿಲ್ಲ ಎಂದು ಸಾಹಿತಿ ಗಿರೀಶ್ ಕಾರ್ನಾಡ್ ಅವರು ಗುರುವಾರ ಹೇಳಿದ್ದಾರೆ.
ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಟಿಪ್ಪು ಸುಲ್ತಾನ್ ಹೆಸರಿಡಬೇಕು ಎಂದು ಹೇಳುವ ಮೂಲಕ ವಿವಾದ ಸೃಷ್ಟಿಸಿರುವ ಗಿರೀಶ್ ಕಾರ್ನಾಡ್ ಅವರಿಗೆ ನಿನ್ನೆ ರಾತ್ರಿ ಟ್ವಿಟರ್ ಮೂಲಕ ಬೆದರಿಕೆ ಹಾಕಲಾಗಿತ್ತು.
ಇಂದು ಈ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯಿಸಿರುವ ಕಾರ್ನಾಡ್, ಆ ಬಗ್ಗೆ ದುಃಖಿತನಾಗಿದ್ದೇನೆ. ಆದರೂ ತಲೆಕೆಡಿಸಿಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ.
'ಇದು ನಿಜಕ್ಕೂ ಟಿಪ್ಪು ಸುಲ್ತಾನ್ ಕುರಿತ ವಿವಾದ ಅಲ್ಲವೇ ಅಲ್ಲ. ದೇಶದಲ್ಲಿ ನಡೆಯುತ್ತಿರುವ ರಾಜಕೀಯ ಸಂವಾದಕ್ಕೆ ಒಂದು ಉದಾಹರಣೆ ಅಷ್ಟೆ' ಎಂದಿದ್ದಾರೆ.
ರಸ್ತೆಯಲ್ಲಿ ಜನ ಗೂಂಡಾಗಿರಿ ಮಾಡುತ್ತಿಲ್ಲ. ಆದರೆ ಅತಿ ಬುದ್ಧಿ ಇರುವ ರಾಜಕೀಯ ನಾಯಕರು ಈ ಗೂಂಡಾಗಿರಿಯನ್ನು ಮಾಡಿಸುತ್ತಿದ್ದಾರೆ ಎಂದು ಕಾರ್ನಾಡ್ ಆರೋಪಿಸಿದ್ದಾರೆ.
Advertisement