

ನವದೆಹಲಿ: ಕಾಶ್ಮೀರಿ ವಲಸಿಗರಿಗೆ ಪುನರ್ವಸತಿ ಕಲ್ಪಿಸುವುದಕ್ಕೆ 2 ,000 ಕೋಟಿ ರೂಪಾಯಿ ಮೀಸಲಿಡುವ ಪ್ರಸ್ತಾವನೆಗೆ ಕೇಂದ್ರ ಸಚಿವ ಸಂಪುಟ ಒಪ್ಪಿಗೆ ಸೂಚಿಸಿದೆ.
ಪಂಡಿತರಿಗೆ ಪುನರ್ವಸತಿ ಕಲ್ಪಿಸುವುದರೊಂದಿಗೇ ಜಮ್ಮು ಭಾಗದ ಗುಡ್ಡಗಾಡು ಪ್ರದೇಶಗಳ ವಲಸಿಗರಿಗರಿಗೂ ಪರಿಹಾರ ನೀಡುವುದಕ್ಕೆ, ಕೇಂದ್ರ ಸರ್ಕಾರ ನಿರ್ಧರಿಸಿದೆ. 13 .45 ಕೋಟಿ ರೂಪಾಯಿ ಮೌಲ್ಯದಲ್ಲಿ ಕಾಶ್ಮೀರಿ ಪಂಡಿತರ ಪುನರ್ವಸತಿ ಪ್ರದೇಶದ ಭಾಗದಲ್ಲೇ ವಲಸಿಗರಿಗೂ ಪರಿಹಾರ ನೀಡಲಾಗುತ್ತದೆ.
ಕಾಶ್ಮೀರ ಕಣಿವೆಯಲ್ಲಿ ಭಯೋತ್ಪಾದನೆಯಿಂದಾಗಿ ಕಾಶ್ಮೀರಿ ಪಂಡಿತರು, ಸಿಖ್ ಸಮುದಾಯದವರು ಕಾಶ್ಮೀರ ಕಣಿವೆಯನ್ನು ತೊರೆದು ವಲಸೆ ಹೋಗಿದ್ದರು. ಪ್ರಸ್ತುತ 62 ,000 ನೋಂದಾಯಿತ ವಲಸೆ ಕಾಶ್ಮೀರಿ ಕುಟುಂಬಗಳು ಪಂಡಿತರು ಜಮ್ಮು, ದೆಹಲಿ ಹಾಗೂ ದೇಶದ ಇನ್ನಿತರ ಪ್ರದೇಶಗಳಲ್ಲಿ ವಾಸಿಸುತ್ತಿದ್ದಾರೆ.
Advertisement