
ಮುಂಬೈ: ಸರ್ಕಾರ ಅನುಮೋದಿಸಿರುವ ಆದಿ ಶಂಕಾರಾಚಾರ್ಯರ ಜನ್ಮ ವರ್ಷ 'ತಪ್ಪು ಮಾಹಿತಿ' ಎಂದು ತಮಿಳುನಾಡಿನ ಕಂಚೀಪುರಂ ಮಠದ ಶ್ರೀ ಜಯೇಂದ್ರ ಸರಸ್ವತಿ ಸ್ವಾಮಿ ಸೋಮವಾರ ಹೇಳಿದ್ದಾರೆ.
"ಇಡೀ ಪ್ರಸ್ತಾವನೆಯಲ್ಲಿ ಒಂದೇ ತಪ್ಪೆಂದರೆ ಆದಿ ಶಂಕಾರಾಚಾರ್ಯರ ಜನ್ಮ ವರ್ಷದ ಮಾಹಿತಿ. ವಿದೇಶಿಗರು ತಾವು ಸರ್ವೋಚ್ಚವೆಂದು ಸಾಧಿಸಲು ಶಂಕಾರಾಚಾರ್ಯರು ಜೀಸಸ್ ಕ್ರಿಸ್ತನ ನಂತರ ಹುಟ್ಟಿದ್ದು ಎಂದು ಸಾಧಿಸುತ್ತಾರೆ" ಎಂದು ಕಂಚಿ ಸ್ವಾಮಿ ಹೇಳಿದ್ದಾರೆ.
ತಮ್ಮ ಆಪ್ತಬಳಗದ ಬಿ ಶ್ರೀಧರ್ ಮೂಲಕ ಈ ಹೇಳಿಕೆ ನೀಡಿರುವ ಸ್ವಾಮೀಜಿ ಕಂಚಿ ಮಠ ಹಾಗೂ ದ್ವಾರಕ, ಶೃಂಗೇರಿ, ಪೂರಿ ಮತ್ತು ಬದರಿಯಲ್ಲಿ ಮಠಗಳನ್ನು ಸ್ಥಾಪಿಸದ ಆದಿ ಶಂಕರಾಚಾರ್ಯ ಹುಟ್ಟಿದ್ದು ಕಿರ್ಸ್ತಪೂರ್ವ ೫೦೯ರಲ್ಲಿ, ಕ್ರಿಸ್ತಶಕ ೭೮೮ರಲ್ಲಿ ಅಲ್ಲ ಎಂದಿದ್ದಾರೆ.
ಎಲ್ಲ ನಾಲ್ಕು ಮಠಗಳಿಂದ ಇಲ್ಲಿಯವರೆಗೆ ೭೦ಕ್ಕೂ ಹೆಚ್ಚು ಉತ್ತರಾಧಿಕಾರಿ ಸ್ವಾಮೀಜಿಗಳು ಬಂದು ಹೋಗಿರುವುದಲ್ಲದೆ, ಕೇರಳದ ಕಲಾಡಿ ನದಿ ವೈಜ್ಞಾನಿಕ ಸಂಶೋಧನೆಗಳ ಪ್ರಕಾರ ೨೫೦೦ ವರ್ಷಗಳ ಹಿಂದೆ ಹರಿಯುತ್ತಿತ್ತು ಎಂದು ಅವರು ತಿಳಿಸಿ ಇದು ಕ್ರಿಶ್ಚಿಯನ್ ಧರ್ಮಕ್ಕೂ ಮುಂಚಿನದ್ದು ಎಂದಿದ್ದಾರೆ.
"ಶಂಕರಾಚಾರ್ಯರು ತಮ್ಮ ತಾಯಿ ಸ್ನಾನ ಮಾಡಲು ಅನುವಾಗಲು ನದಿಯನ್ನು ತಮ್ಮ ಜನ್ಮ ಸ್ಥಾನವಾದ ಕೇರಳದ ಕಲಾಡಿಗೆ ಹರಿಸಿದ್ದರು" ಎಂದು ಕೂಡ ಅವರು ತಿಳಿಸಿದ್ದಾರೆ.
ಮುಂದಿನ ವರ್ಷದಿಂದ ಶಂಕಾರ್ಚಾರ್ಯರ ಜನ್ಮ ದಿನವನ್ನು "ತತ್ವಶಾಸ್ತ್ರಜ್ಞರ ದಿನ' ಎಂದು ಆಚರಿಸಲು ಸರ್ಕಾರ ನಿರ್ಧರಿಸಿದೆ.
Advertisement