ಭಾರತದಿಂದ ಪೃಥ್ವಿ-೨ ಅಣು ಸಾಮರ್ಥ್ಯ ಕ್ಷಿಪಣಿ ಯಶಸ್ವಿ ಪರೀಕ್ಷೆ

ನೆಲದಿಂದ ನೆಲಕ್ಕೆ ಜಿಗಿಯುವ ಅಣು ಸಾಮರ್ಥ್ಯ ಹೊಂದಿದ ಪೃಥ್ವಿ-೨ ಕ್ಷಿಪಣಿಯ ಯಶಸ್ವಿ ಪರೀಕ್ಷೆಯೊಂದಿಗೆ ಭಾರತ ರಕ್ಷಣಾ ಕ್ಷೇತ್ರದಲ್ಲಿ ಹೊಸ ಅಧ್ಯಾಯವೊಂದನ್ನು ತೆರೆದಿದೆ.
ಪೃಥ್ವಿ-೨ ಅಣು ಸಾಮರ್ಥ್ಯ ಕ್ಷಿಪಣಿ ಯಶಸ್ವಿ ಪರೀಕ್ಷೆ
ಪೃಥ್ವಿ-೨ ಅಣು ಸಾಮರ್ಥ್ಯ ಕ್ಷಿಪಣಿ ಯಶಸ್ವಿ ಪರೀಕ್ಷೆ
Updated on

ಬಲಸೋರ್: ನೆಲದಿಂದ ನೆಲಕ್ಕೆ ಜಿಗಿಯುವ ಅಣು ಸಾಮರ್ಥ್ಯ ಹೊಂದಿದ ಪೃಥ್ವಿ-೨ ಕ್ಷಿಪಣಿಯ ಯಶಸ್ವಿ ಪರೀಕ್ಷೆಯೊಂದಿಗೆ ಭಾರತ ರಕ್ಷಣಾ ಕ್ಷೇತ್ರದಲ್ಲಿ ಹೊಸ ಅಧ್ಯಾಯವೊಂದನ್ನು ತೆರೆದಿದೆ. ಒರಿಸ್ಸಾದ ಬಲಸೋರ್ ಜಿಲ್ಲೆಯಿಂದ ಈ ಯಶಸ್ವಿ ಪ್ರಯೋಗ ನಡೆಸಲಾಗಿದೆ.

ಡಿ ಆರ್ ಡಿ ಒ ಅಭಿವೃದ್ಧಿಪಡಿಸಿರುವ ಈ ಕ್ಷಿಪಣಿಯ ಮೂರನೇ ಪರೀಕ್ಷೆ ಇದಾಗಿದೆ. "ಇದು ಬಳಕೆದಾರಾರ ತರಬೇತಿ ಪರೀಕ್ಷೆಯಾಗಿ ಭಾರತೀಯ ಸೇನೆ ಮತ್ತು ಡಿ ಆರ್ ಡಿ ಒ ವಿಜ್ಞಾನಿಗಳು ಜಂಟಿಯಾಗಿ ನಡೆಸಿದ ಪರೀಕ್ಷೆ" ಎಂದು ಹೇಳಿರುವ ಅಧಿಕಾರಿಗಳು ಈ ಯೋಜನೆಯ ಗುರಿಯನ್ನು ತಲುಪುವಲ್ಲಿ ಈ ಪರೀಕ್ಷೆ ಯಶಸ್ವಿಯಾಗಿದೆ ಎಂದಿದ್ದಾರೆ.

೮.೫೬ ಮೀಟರ್ ಎತ್ತರದ ಪೃಥ್ವಿ ಕ್ಷಿಪಣಿಯ ತೂಕ ೪.೬ ಟನ್. ೩೫೦ ಕಿಮೀ ದೂರದವರೆಗೆ ಅಪ್ಪಳಿಸುವ ಸಾಮರ್ಥ್ಯ ಹೊಂದಿದೆ ಎನ್ನಲಾಗಿದೆ. ಮೂಲಗಳ ಪ್ರಕಾರ ಪರೀಕ್ಷೆಯಲ್ಲಿ ಇದರ ಸಾಮರ್ಥ್ಯದಂತೆ ಸರಿಯಾದ ಜಾಗಕ್ಕೆ ಕ್ಷಿಪಣಿ ಸಮುದ್ರದಲ್ಲಿ ಅಪ್ಪಳಿಸಿದೆ ಅಂದರೆ  ಆರು ನಿಮಿಷಗಳಲ್ಲಿ ೩೦೦ ಕಿಮೀ ದೂರವನ್ನು ಕ್ರಮಿಸಿದೆ ಎಂದು ತಿಳಿದುಬಂದಿದೆ.

ಅಲ್ಯುಮಿನಿಯಂ ಲೋಹದ ದೇಹ ಮತ್ತು ಮೆಗ್ನೀಶಿಯಂ ಲೋಹದ ರೆಕ್ಕೆ ಹೊಂದಿರುವ ಈ ಕ್ಷಿಪಣಿಯನ್ನು ಭಾರತೀಯ ಸೇನೆಯ ೩೩೩ ಕ್ಷಿಪಣಿ ರಿಜಮೆಂಟ್ ಗೆ ಸೇರಿಸಲಾಗಿದೆ. ಇದು ೧೦೦೦ ಕೆಜಿ ಅಣು ಶಸ್ತ್ರಾಸ್ತ್ರ ಹೊರಬಲ್ಲ ಸಾಮರ್ಥ್ಯ ಹೊಂದಿದೆ.

ಮೊದಲ ಬಾರಿಗೆ ಪೃಥ್ವಿ ಕ್ಷಿಪಣಿಯನ್ನು ೧೯೮೮ ರಲ್ಲಿ ಪರೀಕ್ಷಿಸಿ ಸೇನೆಗೆ ೧೯೯೪ ರಲ್ಲಿ ಸೇರಿಸಲಾಗಿತ್ತು. ಸದ್ಯಕ್ಕೆ ಪೃಥ್ವಿಯ ಎಲ್ಲಾ ಆವೃತ್ತಿಗಳನ್ನು ಸೇರಿಸಿದರೆ ವರ್ಷಕ್ಕೆ ೩೦ ಕ್ಷಿಪಣಿಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com